ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನ ತೋರಿತು. ಬಲಿಷ್ಠ ಬ್ಯಾಟಿಂಗ್ ಪಡೆ ಎಂದು ಹೇಳಿಕೊಳ್ಳುವ ಟೀಮ್ ಇಂಡಿಯಾ ಏಕದಿನ ಪಂದ್ಯದಲ್ಲಿ 200+ ರನ್ ಹೊಡೆಯಲು ಸಾಧ್ಯವಾಗಲಿಲ್ಲ.
ಬೌಲರ್ಗಳ ಒಂದು ಹಂತದ ವರೆಗೆ ಮಾರಕ ದಾಳಿ ಸಂಘಟಿಸಿದರೂ ಅಂತಿಮ ಹಂತದಲ್ಲಿ ಫೀಲ್ಡಿಂಗ್ನಲ್ಲಿ ಮಾಡಿದ ಕೆಲ ಎಡವಿಟ್ಟು ತಂಡದ ಸೋಲಿನಲ್ಲಿ ಮುಖ್ಯ ಪಾತ್ರವಹಿಸಿತು. ಈ ಮೂಲಕ ಬಾಂಗ್ಲಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ಭಾರತ ಸರಣಿ ವಶಪಡಿಸಿಕೊಳ್ಳ ಬೇಕಾದರೆ, ಮಾನ ಉಳಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಾದರೆ, ಭಾರತ- ಬಾಂಗ್ಲಾದೇಶ ದ್ವಿತೀಯ ಏಕದಿನ ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ ಎಂಬುದನ್ನು ನೋಡೋಣ.
ಭಾರತ ಹಾಗೂ ಬಾಂಗ್ಲಾದೇಶ ನಡುವಣ ದ್ವಿತೀಯ ಏಕದಿನ ಪಂದ್ಯ ಡಿಸೆಂಬರ್ 7 ಬುಧವಾರದಂದು ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಏಕದಿನ ಕೂಡ ಇಲ್ಲೇ ನಡೆದಿತ್ತು. ಈ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ.
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಜಿಯೋ ಟಿವಿ ಆ್ಯಪ್ ಇದ್ದವೂ ಇದರ ಮೂಲಕ ಕೂಡ ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದು.v
ಮೊದಲ ಏಕದಿನ ಪಂದ್ಯದಲ್ಲಿ ತಂಡದ ಸೋಲಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶನವೇ ಕಾರಣ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಈ ಪಂದ್ಯ ತುಂಬಾ ರೋಚಕತೆಯಿಂದ ಕೂಡಿತ್ತು. ನಾವು ಒಂದು ಸಂದರ್ಭದಲ್ಲಿ ಅತ್ಯುತ್ತಮ ಕಮ್ಬ್ಯಾಕ್ ಮಾಡಿದೆವು. ಆದರೆ, ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ತಿಳಿಸಿದ್ದಾರೆ.
ನಾವು 184 ರನ್ ಗಳಿಸಿದ್ದು ಎಲ್ಲಿಗೂ ಸಾಲದು. ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು. ಆದರೆ, ಬೌಲರ್ಗಳಿಂದ ಉತ್ತಮ ಪ್ರದರ್ಶನ ಮೂಡಿಬಂತು. ನಮ್ಮ ಬತ್ತಳಿಕೆಯಿಂದ ರನ್ ಬರಲಿಲ್ಲ. ಇನ್ನೂ 25 ರಿಂದ 30 ರನ್ ಹೊಡೆದಿದ್ದರೆ ನಮಗೆ ಸಹಾಯ ಆಗುತ್ತಿತ್ತು. 25 ಓವರ್ ಆಗುವ ಹೊತ್ತಿಗೆ ನಾವು 240-250 ರನ್ ಗಳಿಸುವ ಬಗ್ಗೆ ಎದುರು ನೋಡುತ್ತಿದ್ದೆವು. ಸತತವಾಗಿ ವಿಕೆಟ್ ಕಳೆದುಕೊಂಡು ಸಾಗಿದಾಗ ಇದು ಸಾಧ್ಯವಿಲ್ಲ - ರೋಹಿತ್ ಶರ್ಮಾ.
ಇಂಥಹ ವಿಕೆಟ್ನಲ್ಲಿ ಯಾವರೀತಿ ಬ್ಯಾಟಿಂಗ್ ಮಾಡಬೇಕೆಂದು ಕಲಿಯಬೇಕಿದೆ. ಈ ವಿಕೆಟ್ ಬಗ್ಗೆ ನಮಗೆ ತಿಳಿದಿದ್ದರೂ ಈರೀತಿ ಆಡಿದ್ದಕ್ಕೆ ಕ್ಷಮೆಯಿಲ್ಲ. ಈ ಸೋಲಿನಿಂದ ನಮ್ಮವರು ಪಾಠ ಕಲಿಯುತ್ತಾರೆ ಹಾಗೂ ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಾರೆ ಎಂಬ ನಂಬಿಕೆಯಿದೆ ಎಂಬುದು ರೋಹಿತ್ ಮಾತು.
Published On - 9:30 am, Mon, 5 December 22