7 ವರ್ಷಗಳ ಬಳಿಕ ರಣಜಿ ಪಂದ್ಯವಾಡಲು ಸಜ್ಜಾದ ಟೀಮ್ ಇಂಡಿಯಾ ಆಟಗಾರ

|

Updated on: Jan 15, 2025 | 7:38 AM

Team India: ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ ಇದೀಗ ಟೀಮ್ ಇಂಡಿಯಾ ಆಟಗಾರರಿಗೆ ರಣಜಿ ಟೂರ್ನಿ ಆಡುವಂತೆ ಸೂಚಿಸಿದೆ. ಅದರಂತೆ ಇದೀಗ ರಿಷಭ್ ಪಂತ್ ಸೇರಿದಂತೆ ಕೆಲ ಆಟಗಾರರು ಜನವರಿ 23 ರಿಂದ ಶುರುವಾಗಲಿರುವ ರಣಜಿ ಟೂರ್ನಿಯ 2ನೇ ಸುತ್ತಿನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

1 / 5
ಟೀಮ್ ಇಂಡಿಯಾ ಆಟಗಾರರು ದೇಶೀಯ ಟೂರ್ನಿಗಳನ್ನು ಆಡಬೇಕೆಂದು ಬಿಸಿಸಿಐ ಖಡಕ್ ಸೂಚನೆ ನೀಡಿದೆ. ಈ ಸೂಚನೆ ಬೆನ್ನಲ್ಲೇ ಇದೀಗ ಕೆಲ ಆಟಗಾರರು ರಣಜಿ ಟೂರ್ನಿಯತ್ತ ಮುಖ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೆಸರು ಕೂಡ ಕಾಣಿಸಿಕೊಂಡಿದೆ.

2 / 5
ಜನವರಿ 23 ರಿಂದ ಶುರುವಾಗಲಿರುವ ರಣಜಿ ಟೂರ್ನಿಯ 2ನೇ ಹಂತದ ಪಂದ್ಯಗಳಲ್ಲಿ ದೆಹಲಿ ಪರ ಕಣಕ್ಕಿಳಿಯಲು ರಿಷಭ್ ಪಂತ್ ನಿರ್ಧರಿಸಿದ್ದಾರೆ. ಈ ಬಗ್ಗೆ ದೆಹಲಿ ಕ್ರಿಕೆಟ್ ಅಸೋಸಿಯೇಷನ್​ಗೆ ಮಾಹಿತಿ ನೀಡಿರುವ ಪಂತ್, ಮುಂದಿನ ಪಂದ್ಯಗಳಿಗೆ ಲಭ್ಯರಿರುವುದಾಗಿ ತಿಳಿಸಿದ್ದಾರೆ.

3 / 5
ವಿಶೇಷ ಎಂದರೆ ರಿಷಭ್ ಪಂತ್ ರಣಜಿ ಪಂದ್ಯವಾಡಿದ ಬರೋಬ್ಬರಿ 7 ವರ್ಷಗಳೇ ಕಳೆದಿವೆ. ಅಂದರೆ 2017ರ ಬಳಿಕ ಅವರು ದೇಶೀಯ ಅಂಗಳದಲ್ಲಿ ಒಂದೇ ಒಂದು ರಣಜಿ ಪಂದ್ಯವಾಡಿಲ್ಲ. 2018 ರಲ್ಲಿ ಪಂತ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದು, ಇದಾದ ಬಳಿಕ ಅವರು ರಣಜಿ ಟೂರ್ನಿಯತ್ತ ತಿರುಗಿ ನೋಡಿಲ್ಲ ಎಂಬುದೇ ಅಚ್ಚರಿ.

4 / 5
ಇದೀಗ ಬಿಸಿಸಿಐ ಖಡಕ್ ಸೂಚನೆ ಬೆನ್ನಲ್ಲೇ ಏಳು ವರ್ಷಗಳ ಬಳಿಕ ಮತ್ತೆ ದೆಹಲಿ ಪರ ಕಣಕ್ಕಿಳಿಯಲು ರಿಷಭ್ ಪಂತ್ ನಿರ್ಧರಿಸಿದ್ದಾರೆ. ಅಲ್ಲದೆ ದೆಹಲಿ ಸಂಭಾವ್ಯ ತಂಡದಲ್ಲೂ ಪಂತ್ ಅವರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಜನವರಿ 23 ರಿಂದ ಶುರುವಾಗಲಿರುವ ದ್ವಿತೀಯ ಸುತ್ತಿನ ರಣಜಿ ಟೂರ್ನಿಯಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

5 / 5
ಜನವರಿ 23 ರಂದು ನಡೆಯಲಿರುವ ಗ್ರೂಪ್-ಡಿ ಪಂದ್ಯದಲ್ಲಿ ದೆಹಲಿ ಮತ್ತು ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಲಿದೆ. ಅತ್ತ ಸೌರಾಷ್ಟ್ರ ತಂಡದಲ್ಲಿ ಟೀಮ್ ಇಂಡಿಯಾ ಆಟಗಾರರಾದ ಚೇತೇಶ್ವರ ಪೂಜಾರ, ಜಯದೇವ್ ಉನಾದ್ಕಟ್ ಕಾಣಿಸಿಕೊಂಡರೆ, ಇತ್ತ ದೆಹಲಿ ತಂಡದಲ್ಲಿ ರಿಷಭ್ ಪಂತ್ ಜೊತೆ ಯುವ ಆಟಗಾರರಾದ ಅನೂಜ್ ರಾವತ್, ಆಯುಷ್ ಬದೋನಿ ಕಣಕ್ಕಿಳಿಯಲಿರುವುದು ವಿಶೇಷ.