- Kannada News Photo gallery Cricket photos James Anderson to play County Championship and Vitality Blast
ನಿವೃತ್ತಿ ಬಳಿಕ 42ನೇ ವಯಸ್ಸಿನಲ್ಲಿ ಮತ್ತೆ ಕಣಕ್ಕಿಳಿಯಲು ಅ್ಯಂಡರ್ಸನ್ ಸಜ್ಜು
James Anderson: ಜೇಮ್ಸ್ ಅ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲೊಂದು 40 ಸಾವಿರ ಬಾಲ್ಗಳ ದಾಖಲೆ. ಅ್ಯಂಡರ್ಸನ್ ತಮ್ಮ ಟೆಸ್ಟ್ ಕೆರಿಯರ್ ನಲ್ಲಿ ಒಟ್ಟು 40037 ಎಸೆತಗಳನ್ನು ಎಸೆಯುವ ಮೂಲಕ, ಟೆಸ್ಟ್ನಲ್ಲಿ 40 ಸಾವಿರಕ್ಕೂ ಅಧಿಕ ಎಸೆತಗಳನ್ನು ಎಸೆದ ವಿಶ್ವದ ಏಕೈಕ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.
Updated on: Jan 14, 2025 | 1:00 PM

ವಿಶ್ವ ಕ್ರಿಕೆಟ್ ಕಂಡಂತಹ ಅಪ್ರತಿಮ ವೇಗದ ಬೌಲರ್ ಜೇಮ್ಸ್ ಅ್ಯಂಡರ್ಸನ್ (James Anderson) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ 7 ತಿಂಗಳುಗಳಾಗಿವೆ. ಈ ವಿದಾಯದ ಬೆನ್ನಲ್ಲೇ ಅವರು ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಆದರೀಗ ತಮ್ಮ 42ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಮುಂದಾಗಿದ್ದಾರೆ.

ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಜೇಮ್ಸ್ ಅ್ಯಂಡರ್ಸನ್ ಮುಂಬರುವ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ಲಂಕಾಶೈರ್ ತಂಡದ ಜೊತೆ ಒಂದು ವರ್ಷದ ಒಪ್ಪಂದವನ್ನು ಸಹ ಮಾಡಿಕೊಂಡಿದ್ದಾರೆ.

ಈ ಒಪ್ಪಂದದ ಪ್ರಕಾರ, ಜೇಮ್ಸ್ ಅ್ಯಂಡರ್ಸನ್ ಮುಂಬರುವ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಪ್ರಥಮ ದರ್ಜೆ ಪಂದ್ಯಗಳನ್ನಾಡಲಿದ್ದಾರೆ. ಅಲ್ಲದೆ ವಿಟಾಲ್ಟಿ ಟಿ20 ಬ್ಲಾಸ್ಟ್ ಟೂರ್ನಿಯಲ್ಲೂ ಲಂಕಾಶೈರ್ ಪರ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಮುಂದುವರೆಯಲು ಜಿಮ್ಮಿ ಅ್ಯಡರ್ಸನ್ ನಿರ್ಧರಿಸಿದ್ದಾರೆ.

ಜೇಮ್ಸ್ ಅ್ಯಂಡರ್ಸನ್ 2001 ರಲ್ಲಿ ಲಂಕಾಶೈರ್ ಪರ ಪ್ರಥಮ ದರ್ಜೆ ಪಂದ್ಯವಾಡುವ ಮೂಲಕ ಕೆರಿಯರ್ ಆರಂಭಿಸಿದ್ದರು. ಅಲ್ಲದೆ ಕಳೆದ ವರ್ಷ ಇದೇ ತಂಡದ ಪರ ಕೊನೆಯ ಪ್ರಥಮ ದರ್ಜೆ ಪಂದ್ಯವಾಡಿದ್ದರು. ಈ ವೇಳೆ ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧ 35 ರನ್‌ಗಳಿಗೆ 7 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಲಂಕಾಶೈರ್ ತಂಡದ ಪರವೇ ಮತ್ತೆ ಕಣಕ್ಕಿಳಿಯುವ ಮೂಲಕ ಹಳೆಯ ಇನಿಂಗ್ಸ್ ಮುಂದುವರೆಸಲು ಜಿಮ್ಮಿ ನಿರ್ಧರಿಸಿದ್ದಾರೆ.

ಅಂದಹಾಗೆ ಇಂಗ್ಲೆಂಡ್ ಪರ 188 ಟೆಸ್ಟ್ ಜೇಮ್ಸ್ ಅ್ಯಂಡರ್ಸನ್ (ಜಿಮ್ಮಿ) ಒಟ್ಟು 40037 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 18627 ರನ್ ನೀಡುವ ಮೂಲಕ ಒಟ್ಟು 704 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಜಿಮ್ಮಿ ಮತ್ತೆ ಕೌಂಟಿ ಕ್ರಿಕೆಟ್ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿರುವುದೇ ಅಚ್ಚರಿ.



















