AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿವೃತ್ತಿ ಬಳಿಕ 42ನೇ ವಯಸ್ಸಿನಲ್ಲಿ ಮತ್ತೆ ಕಣಕ್ಕಿಳಿಯಲು ಅ್ಯಂಡರ್ಸನ್ ಸಜ್ಜು

James Anderson: ಜೇಮ್ಸ್​ ಅ್ಯಂಡರ್ಸನ್ ಟೆಸ್ಟ್ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲೊಂದು 40 ಸಾವಿರ ಬಾಲ್​​ಗಳ ದಾಖಲೆ. ಅ್ಯಂಡರ್ಸನ್ ತಮ್ಮ ಟೆಸ್ಟ್​ ಕೆರಿಯರ್ ನಲ್ಲಿ ಒಟ್ಟು 40037 ಎಸೆತಗಳನ್ನು ಎಸೆಯುವ ಮೂಲಕ, ಟೆಸ್ಟ್​ನಲ್ಲಿ 40 ಸಾವಿರಕ್ಕೂ ಅಧಿಕ ಎಸೆತಗಳನ್ನು ಎಸೆದ ವಿಶ್ವದ ಏಕೈಕ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: Jan 14, 2025 | 1:00 PM

Share
ವಿಶ್ವ ಕ್ರಿಕೆಟ್ ಕಂಡಂತಹ ಅಪ್ರತಿಮ ವೇಗದ ಬೌಲರ್ ಜೇಮ್ಸ್ ಅ್ಯಂಡರ್ಸನ್ (James Anderson) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ 7 ತಿಂಗಳುಗಳಾಗಿವೆ. ಈ ವಿದಾಯದ ಬೆನ್ನಲ್ಲೇ ಅವರು ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಆದರೀಗ ತಮ್ಮ 42ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲು ಮುಂದಾಗಿದ್ದಾರೆ.

1 / 5
ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಜೇಮ್ಸ್ ಅ್ಯಂಡರ್ಸನ್ ಮುಂಬರುವ ಕೌಂಟಿ ಚಾಂಪಿಯನ್​​​ಶಿಪ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ಲಂಕಾಶೈರ್ ತಂಡದ ಜೊತೆ ಒಂದು ವರ್ಷದ ಒಪ್ಪಂದವನ್ನು ಸಹ ಮಾಡಿಕೊಂಡಿದ್ದಾರೆ.

2 / 5
ಈ ಒಪ್ಪಂದದ ಪ್ರಕಾರ, ಜೇಮ್ಸ್ ಅ್ಯಂಡರ್ಸನ್ ಮುಂಬರುವ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಪ್ರಥಮ ದರ್ಜೆ ಪಂದ್ಯಗಳನ್ನಾಡಲಿದ್ದಾರೆ. ಅಲ್ಲದೆ ವಿಟಾಲ್ಟಿ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲೂ ಲಂಕಾಶೈರ್ ಪರ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಮುಂದುವರೆಯಲು ಜಿಮ್ಮಿ ಅ್ಯಡರ್ಸನ್ ನಿರ್ಧರಿಸಿದ್ದಾರೆ.

3 / 5
ಜೇಮ್ಸ್ ಅ್ಯಂಡರ್ಸನ್ 2001 ರಲ್ಲಿ ಲಂಕಾಶೈರ್​ ಪರ ಪ್ರಥಮ ದರ್ಜೆ ಪಂದ್ಯವಾಡುವ ಮೂಲಕ ಕೆರಿಯರ್ ಆರಂಭಿಸಿದ್ದರು. ಅಲ್ಲದೆ ಕಳೆದ ವರ್ಷ ಇದೇ ತಂಡದ ಪರ ಕೊನೆಯ ಪ್ರಥಮ ದರ್ಜೆ ಪಂದ್ಯವಾಡಿದ್ದರು. ಈ ವೇಳೆ ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧ 35 ರನ್‌ಗಳಿಗೆ 7 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಲಂಕಾಶೈರ್ ತಂಡದ ಪರವೇ ಮತ್ತೆ ಕಣಕ್ಕಿಳಿಯುವ ಮೂಲಕ ಹಳೆಯ ಇನಿಂಗ್ಸ್ ಮುಂದುವರೆಸಲು ಜಿಮ್ಮಿ ನಿರ್ಧರಿಸಿದ್ದಾರೆ.

4 / 5
ಅಂದಹಾಗೆ ಇಂಗ್ಲೆಂಡ್ ಪರ 188 ಟೆಸ್ಟ್ ಜೇಮ್ಸ್ ಅ್ಯಂಡರ್ಸನ್ (ಜಿಮ್ಮಿ) ಒಟ್ಟು 40037 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 18627 ರನ್ ನೀಡುವ ಮೂಲಕ ಒಟ್ಟು 704 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಜಿಮ್ಮಿ ಮತ್ತೆ ಕೌಂಟಿ ಕ್ರಿಕೆಟ್​ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿರುವುದೇ ಅಚ್ಚರಿ.

5 / 5
Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್

ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು

ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು

ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ

ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​

ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ

ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್