ಜನವರಿ 23 ರಂದು ನಡೆಯಲಿರುವ ಗ್ರೂಪ್-ಡಿ ಪಂದ್ಯದಲ್ಲಿ ದೆಹಲಿ ಮತ್ತು ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಲಿದೆ. ಅತ್ತ ಸೌರಾಷ್ಟ್ರ ತಂಡದಲ್ಲಿ ಟೀಮ್ ಇಂಡಿಯಾ ಆಟಗಾರರಾದ ಚೇತೇಶ್ವರ ಪೂಜಾರ, ಜಯದೇವ್ ಉನಾದ್ಕಟ್ ಕಾಣಿಸಿಕೊಂಡರೆ, ಇತ್ತ ದೆಹಲಿ ತಂಡದಲ್ಲಿ ರಿಷಭ್ ಪಂತ್ ಜೊತೆ ಯುವ ಆಟಗಾರರಾದ ಅನೂಜ್ ರಾವತ್, ಆಯುಷ್ ಬದೋನಿ ಕಣಕ್ಕಿಳಿಯಲಿರುವುದು ವಿಶೇಷ.