Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ
TV9 Web | Updated By: ಝಾಹಿರ್ ಯೂಸುಫ್
Updated on:
Mar 12, 2024 | 11:04 AM
Team India: ಟೀಮ್ ಇಂಡಿಯಾ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ 5 ಸರಣಿಗಳನ್ನು ಆಡಲಿದೆ. ಈ ಸರಣಿಗಳಲ್ಲಿ ಝಿಂಬಾಬ್ವೆ ವಿರುದ್ಧದ ಸಿರೀಸ್ನ ವೇಳಾಪಟ್ಟಿಯನ್ನು ಮಾತ್ರ ನಿಗದಿ ಮಾಡಲಾಗಿದ್ದು, ಉಳಿದ ಸರಣಿಗಳ ವೇಳಾಪಟ್ಟಿ ಟಿ20 ವಿಶ್ವಕಪ್ ಬಳಿಕ ನಿಗದಿಯಾಗುವ ಸಾಧ್ಯತೆಯಿದೆ. ಅದರಂತೆ ಭಾರತ ತಂಡದ ಮುಂದಿರುವ ಸರಣಿಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
1 / 8
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ (Team India) ಆಟಗಾರರು ಐಪಿಎಲ್ಗೆ ಸಜ್ಜಾಗಲು ಅಣಿಯಾಗುತ್ತಿದ್ದಾರೆ. ಅಂದರೆ ಈ ಮುಂದಿನ ವಾರದೊಳಗೆ ಭಾರತೀಯ ಆಟಗಾರರು ಐಪಿಎಲ್ ತಂಡಗಳನ್ನು ಸೇರಿಕೊಳ್ಳಲಿದ್ದಾರೆ.
2 / 8
ಮಾರ್ಚ್ 22 ರಿಂದ ಐಪಿಎಲ್ ಶುರುವಾಗಲಿದ್ದು, ಮೇ ತಿಂಗಳಾಂತ್ಯದವರೆಗೆ ಟೂರ್ನಿ ನಡೆಯಲಿದೆ. ಹೀಗಾಗಿ ಮುಂದಿನ 2 ತಿಂಗಳುಗಳ ಕಾಲ ಟೀಮ್ ಇಂಡಿಯಾ ಕಣಕ್ಕಿಳಿಯುವುದಿಲ್ಲ. ಹಾಗಿದ್ರೆ ಭಾರತ ತಂಡದ ಮುಂದಿನ ಪಂದ್ಯಗಳಾವುವು ಎಂದು ನೋಡೋಣ...
3 / 8
ಟಿ20 ವಿಶ್ವಕಪ್ 2024: ಜೂನ್ 1 ರಿಂದ ಜೂನ್ 29 ರವರೆಗೆ ಟಿ20 ವಿಶ್ವಕಪ್ ನಡೆಯಲಿದೆ. ವೆಸ್ಟ್ ಇಂಡೀಸ್-ಯುಎಸ್ಎ ಆತಿಥ್ಯವಹಿಸಲಿರುವ ಈ ವಿಶ್ವಕಪ್ ಬಳಿಕವಷ್ಟೇ ಭಾರತ ತಂಡ ಸರಣಿ ಆಡಲಿದೆ.
4 / 8
ಭಾರತ vs ಝಿಂಬಾಬ್ವೆ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಝಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಜುಲೈ 6 ರಿಂದ ಶುರುವಾಗಲಿರುವ ಈ ಸರಣಿಯು ಜುಲೈ 14 ಕ್ಕೆ ಮುಗಿಯಲಿದೆ.
5 / 8
ಭಾರತ vs ಶ್ರೀಲಂಕಾ: ಭಾರತ ತಂಡವು ಶ್ರೀಲಂಕಾ ವಿರುದ್ಧ 6 ಪಂದ್ಯಗಳ ಸರಣಿ ಆಡಲಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಉಭಯ ತಂಡಗಳು 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ.
6 / 8
ಭಾರತ vs ಬಾಂಗ್ಲಾದೇಶ್: ಸೆಪ್ಟೆಂಬರ್ ತಿಂಗಳಲ್ಲಿ ಭಾರತ ತಂಡವು ಬಾಂಗ್ಲಾದೇಶ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
7 / 8
ಭಾರತ vs ನ್ಯೂಝಿಲೆಂಡ್: ಅಕ್ಟೋಬರ್ನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ.
8 / 8
ಭಾರತ vs ಆಸ್ಟ್ರೇಲಿಯಾ: ನವೆಂಬರ್-ಡಿಸೆಂಬರ್ನಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ನಡೆಯಲಿದ್ದು, ಈ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಿದೆ.