- Kannada News Photo gallery Cricket photos RCB 2024 Do you know how much is Virat Kohli's first IPL salary?
IPL 2024: ಲೆಜೆಂಡ್ ವಿರಾಟ್ ಕೊಹ್ಲಿಯ ಮೊದಲ ಐಪಿಎಲ್ ಸಂಭಾವನೆ ಎಷ್ಟು ಗೊತ್ತೇ?: ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ
Virat Kohli IPL Salary: ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರುನೊಂದಿಗೆ ಪ್ರಾರಂಭಿಸಿದರು. ಅವರು ಐಪಿಎಲ್ 2008 ರ ಡ್ರಾಫ್ಟ್‌ನಲ್ಲಿ ಬೆಂಗಳೂರು ಮೂಲದ ತಂಡಕ್ಕೆ ಸೇರಿದರು. ಐಪಿಎಲ್ ಇತಿಹಾಸದ ಪ್ರತಿ ಋತುವಿನಲ್ಲಿ ಒಂದೇ ಫ್ರಾಂಚೈಸಿಯನ್ನು ಪ್ರತಿನಿಧಿಸಿದ ಏಕೈಕ ಆಟಗಾರ ವಿರಾಟ್.
Updated on: Mar 12, 2024 | 8:22 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಆಡಿದ ಎಲ್ಲಾ 16 ಸೀಸನ್‌ಗಳಲ್ಲಿ ಒಂದು ಫ್ರಾಂಚೈಸಿಯನ್ನು ಪ್ರತಿನಿಧಿಸಿದ ಏಕೈಕ ಆಟಗಾರ ಕೊಹ್ಲಿ ಆಗಿದ್ದಾರೆ. ಐಪಿಎಲ್ 2008 ರ ಡ್ರಾಫ್ಟ್‌ನಲ್ಲಿದ್ದ ಭಾರತದ U19 ಕ್ರಿಕೆಟಿಗರಲ್ಲಿ ವಿರಾಟ್ ಕೂಡ ಒಬ್ಬರು.

ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಭಾರತ U19 ವಿಶ್ವಕಪ್ ವಿಜೇತ ನಾಯಕ ವಿರಾಟ್ ಕೊಹ್ಲಿಯನ್ನು ಹರಾಜಿನಲ್ಲಿ ಖರೀದಿಸಲು ನಿರ್ಧಾರ ಮಾಡಿತ್ತು. ಆದರೆ, ಅಂತಿಮವಾಗಿ ಇವರು ಸೇಲ್ ಆಗಿದ್ದು ಆರ್ಸಿಬಿಗೆ. ಒಂದು ಕಾಲದಲ್ಲಿ 17 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿದ್ದ ವಿರಾಟ್ ಅವರ ಮೊದಲ ಸಂಭಾವನೆ ಅತಿ ಕಡಿಮೆ.

ಐಪಿಎಲ್ 2008 ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರು ಬೆಲೆ ಕೇವಲ 12 ಲಕ್ಷ ರೂ. ಗೆ ಆರ್‌ಸಿಬಿ ಸೇರಿಕೊಂಡರು. ಇವರ ಮೂಲ ಬೆಲೆ 2 ಲಕ್ಷ ರೂ. ಆಗಿತ್ತು. ಐಪಿಎಲ್ 2009 ಮತ್ತು 2010 ರಲ್ಲಿ ಅದೇ ಮೊತ್ತದಲ್ಲಿ ಆಡಿದರು. ಬಳಿಕ ಐಪಿಎಲ್ 2011 ರ ಮೆಗಾ-ಹರಾಜಿನ ಮೊದಲು ವಿರಾಟ್ ಅವರನ್ನು ಉಳಿಸಿಕೊಂಡ ಆರ್‌ಸಿಬಿ 8.28 ಕೋಟಿ ರೂ. ಸಂಭಾವನೆ ಹೆಚ್ಚಿಸಿತು.

ವಿರಾಟ್ 2012 ರಲ್ಲಿ ODI ತಂಡದ ಉಪನಾಯಕನಾಗಿ ನೇಮಕಗೊಂಡರು ಮತ್ತು ಅವರು ಅದೇ ವರ್ಷ RCB ನಾಯಕತ್ವದ ಗುಂಪಿಗೆ ಸೇರಿದರು. ಅವರು IPL 2013 ರ ಮೊದಲು RCB ಯ ಪೂರ್ಣಾವಧಿಯ ನಾಯಕತ್ವವನ್ನು ವಹಿಸಿಕೊಂಡರು. ಐಪಿಎಲ್ 2014 ರ ಮೆಗಾ-ಹರಾಜಿನ ಮೊದಲು, ಅವರ ವೇತನ ಮತ್ತೊಮ್ಮೆ ಹೆಚ್ಚಾಯಿತು. ಅದು 12.5 ಕೋಟಿ ರೂ. ಗೆ.

ವಿರಾಟ್ 2017 ರಲ್ಲಿ ಭಾರತದ ಆಲ್-ಫಾರ್ಮ್ಯಾಟ್ ನಾಯಕರಾದರು. ಐಪಿಎಲ್ 2018 ರ ಮೆಗಾ-ಹರಾಜಿನ ಮೊದಲು, ಆರ್‌ಸಿಬಿ ಅವರನ್ನು 17 ಕೋಟಿಗೆ ಉಳಿಸಿಕೊಂಡಾಗ ವಿರಾಟ್ ದಾಖಲೆ ಸೃಷ್ಟಿಸಿದರು. ಐಪಿಎಲ್ 2021 ರ ನಂತರ ವಿರಾಟ್ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದರು. ಐಪಿಎಲ್ 2022 ರ ಮೆಗಾ-ಹರಾಜಿನ ಮೊದಲು ಅವರ ಮೊತ್ತವನ್ನು 15 ಕೋಟಿ ರೂ. ಗೆ ಇಳಿಸಲಾಯಿತು.

ಈಗ ಅನೇಕ ಐಪಿಎಲ್ ಆಟಗಾರರು ವಿರಾಟ್‌ಗಿಂತ ಹೆಚ್ಚು ಗಳಿಸುತ್ತಿದ್ದಾರೆ. ವಿರಾಟ್ ತಮ್ಮ ವೃತ್ತಿಜೀವನದ ಉಳಿದ ಸೀಸನ್ ಎಲ್ಲ ಆರ್‌ಸಿಬಿ ಪರವೇ ಆಡಲಿದ್ದಾರೆ. ಇದೇ ಮಾರ್ಚ್ 22 ರಂದು ಐಪಿಎಲ್ 2024 ರ ಸೀಸನ್ ಓಪನರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ.
























