Cricket Records: ಏಕದಿನ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಸೋತ ತಂಡ ಯಾವುದು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Jul 05, 2023 | 7:10 PM

Teams with Most Losses In ODI Cricket: ವಿಶೇಷ ಎಂದರೆ ಭಾರತವನ್ನು ಹೊರತುಪಡಿಸಿದರೆ, ಬೇರೆ ಯಾವುದೇ ತಂಡ ಏಕದಿನ ಕ್ರಿಕೆಟ್​ನಲ್ಲಿ ಸಾವಿರ ಪಂದ್ಯಗಳನ್ನಾಡಿಲ್ಲ.

1 / 13
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. ಭಾರತ ತಂಡವು ಇದುವರೆಗೆ 1029 ಪಂದ್ಯಗಳನ್ನಾಡಿದೆ.

2 / 13
ವಿಶೇಷ ಎಂದರೆ ಭಾರತವನ್ನು ಹೊರತುಪಡಿಸಿದರೆ, ಬೇರೆ ಯಾವುದೇ ತಂಡ ಏಕದಿನ ಕ್ರಿಕೆಟ್​ನಲ್ಲಿ ಸಾವಿರ ಪಂದ್ಯಗಳನ್ನಾಡಿಲ್ಲ. ಇನ್ನು 978 ಏಕದಿನ ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದ್ದರೆ, ಪಾಕಿಸ್ತಾನ್ (953) ತೃತೀಯ ಸ್ಥಾನದಲ್ಲಿದೆ.

3 / 13
ಇಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ಭಾರತ ತಂಡ ಸೋಲಿನಲ್ಲೂ . ಹಾಗಿದ್ರೆ ಈ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂದು ತಿಳಿಯೋಣ...

4 / 13
10- ಸೌತ್ ಆಫ್ರಿಕಾ: ಏಕದಿನ ಕ್ರಿಕೆಟ್​ನಲ್ಲಿ 654 ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ತಂಡವು 399 ಮ್ಯಾಚ್​ಗಳಲ್ಲಿ ಗೆಲುವು ಸಾಧಿಸಿದೆ. ಹಾಗೆಯೇ 228 ಪಂದ್ಯಗಳಲ್ಲಿ ಸೋಲನುಭವಿಸಿದೆ.

5 / 13
9- ಬಾಂಗ್ಲಾದೇಶ್: 412 ಏಕದಿನ ಪಂದ್ಯಗಳನ್ನಾಡಿರುವ ಬಾಂಗ್ಲಾದೇಶ್ ತಂಡವು 252 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಇದೇ ವೇಳೆ ಗೆದ್ದಿರುವುದು ಕೇವಲ 151 ಪಂದ್ಯಗಳಲ್ಲಿ ಮಾತ್ರ.

6 / 13
8- ಆಸ್ಟ್ರೇಲಿಯಾ: ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 978 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ 594 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದೇ ವೇಳೆ 341 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ.

7 / 13
7- ಇಂಗ್ಲೆಂಡ್​: ಕ್ರಿಕೆಟ್ ಜನಕರಾದ ಆಂಗ್ಲರು ಇದುವರೆಗೆ 779 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 392 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಹಾಗೆಯೇ 348 ಮ್ಯಾಚ್​ಗಳಲ್ಲಿ ಸೋಲನುಭವಿಸಿದ್ದಾರೆ.

8 / 13
6- ನ್ಯೂಝಿಲ್ಯಾಂಡ್: ಏಕದಿನ ಕ್ರಿಕೆಟ್​ನಲ್ಲಿ 804 ಪಂದ್ಯಗಳನ್ನಾಡಿರುವ ನ್ಯೂಝಿಲ್ಯಾಂಡ್ 369 ಮ್ಯಾಚ್​ಗಳಲ್ಲಿ ಗೆದ್ದರೆ, 386 ಪಂದ್ಯಗಳಲ್ಲಿ ಸೋತಿದ್ದಾರೆ.

9 / 13
5- ಝಿಂಬಾಬ್ವೆ: 562 ಏಕದಿನ ಪಂದ್ಯಗಳನ್ನಾಡಿರುವ ಝಿಂಬಾಬ್ವೆ ತಂಡವು ಗೆದ್ದಿರುವುದು ಕೇವಲ 149 ಪಂದ್ಯಗಳಲ್ಲಿ ಮಾತ್ರ. ಇದೇ ವೇಳೆ 392 ಪಂದ್ಯಗಳಲ್ಲಿ ಪರಾಜಯಗೊಂಡಿದ್ದಾರೆ.

10 / 13
4- ವೆಸ್ಟ್ ಇಂಡೀಸ್: ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತನ್ನು ಆಳಿದ್ದ ಕೆರಿಬಿಯನ್ನರು ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 860 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 416 ಪಂದ್ಯಗಳಲ್ಲಿ ಗೆದ್ದರೆ, 404 ಮ್ಯಾಚ್​ಗಳಲ್ಲಿ ಸೋಲನುಭವಿಸಿದ್ದಾರೆ.

11 / 13
3- ಪಾಕಿಸ್ತಾನ್: ಪಾಕ್ ತಂಡವು ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 953 ಪಂದ್ಯಗಳನ್ನಾಡಿದೆ. ಈ ವೇಳೆ 503 ಮ್ಯಾಚ್​ಗಳನ್ನು ಗೆದ್ದುಕೊಂಡಿದ್ದಾರೆ. ಹಾಗೆಯೇ 421 ಪಂದ್ಯಗಳಲ್ಲಿ ಸೋತಿದ್ದಾರೆ.

12 / 13
2- ಭಾರತ: ಟೀಮ್ ಇಂಡಿಯಾ ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ 1029 ಪಂದ್ಯಗಳನ್ನಾಡಿದೆ. ಇದರಲ್ಲಿ 539 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 438 ಪಂದ್ಯಗಳಲ್ಲಿ ಸೋಲನುಭವಿಸಿದೆ.

13 / 13
1- ಶ್ರೀಲಂಕಾ: ಏಕದಿನ ಕ್ರಿಕೆಟ್​ನಲ್ಲಿ 889 ಪಂದ್ಯಗಳನ್ನಾಡಿರುವ ಶ್ರೀಲಂಕಾ ತಂಡವು ಗೆದ್ದಿರುವುದು 403 ಪಂದ್ಯಗಳಲ್ಲಿ ಮಾತ್ರ. ಇನ್ನು 441 ಪಂದ್ಯಗಳಲ್ಲಿ ಸೋಲನುಭವಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳಲ್ಲಿ ಸೋತ ಹೀನಾಯ ದಾಖಲೆಯೊಂದು ಶ್ರೀಲಂಕಾ ತಂಡದ ಹೆಸರಿನಲ್ಲಿದೆ.

Published On - 7:23 pm, Sun, 25 June 23