- Kannada News Photo gallery Cricket photos Suresh Raina joins bandwagon of cricketers who own restaurants
ಟೀಂ ಇಂಡಿಯಾ ಕ್ರಿಕೆಟಿಗರು ನಡೆಸುತ್ತಿರುವ ರೆಸ್ಟೋರೆಂಟ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?
Restaurants owned by Indian cricketers: ವಾಸ್ತವವಾಗಿ ಈ ರೆಸ್ಟೊರೆಂಟ್ ಉದ್ಯಮಕ್ಕೆ ಕೈ ಹಾಕಿದವರಲ್ಲಿ ಸುರೇಶ್ ರೈನಾ ಅವರೇ ಮೊದಲಿಗರಲ್ಲ. ಅವರಿಗೂ ಮುನ್ನ ಟೀಂ ಇಂಡಿಯಾದ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರು ರೆಸ್ಟೊರೆಂಟ್ ಉದ್ಯಮವನ್ನು ಆರಂಭಿಸಿದ್ದಾರೆ ಅಂತಹವರ ಪಟ್ಟಿ ಇಲ್ಲಿದೆ.
Updated on: Jun 25, 2023 | 12:05 PM

ಟೀಂ ಇಂಡಿಯಾದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಕ್ರಿಕೆಟ್ ಮಾತ್ರವಲ್ಲದೆ ಬೇರೆ ವಲಯದಲ್ಲೂ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ನೆದರ್ಲೆಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತೀಯ ಶೈಲಿಯ ರೆಸ್ಟೊರೆಂಟ್ ತೆರೆದಿದ್ದು, ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ವಾಸ್ತವವಾಗಿ ಈ ರೆಸ್ಟೊರೆಂಟ್ ಉದ್ಯಮಕ್ಕೆ ಕೈ ಹಾಕಿದವರಲ್ಲಿ ಸುರೇಶ್ ರೈನಾ ಅವರೇ ಮೊದಲಿಗರಲ್ಲ. ಅವರಿಗೂ ಮುನ್ನ ಟೀಂ ಇಂಡಿಯಾದ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರು ರೆಸ್ಟೊರೆಂಟ್ ಉದ್ಯಮವನ್ನು ಆರಂಭಿಸಿದ್ದಾರೆ ಅಂತಹವರ ಪಟ್ಟಿ ಇಲ್ಲಿದೆ.

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದೆಹಲಿ, ಪುಣೆ ಹಾಗೂ ಮುಂಬೈ ಸೇರಿದಂತೆ ಹಲವು ಕಡೆ ಒನ್ 8 ಕಮ್ಯೂನ್ ಎಂಬ ರೆಸ್ಟೋರೆಂಟ್ಗಳನ್ನು ನಡೆಸುತ್ತಿದ್ದಾರೆ.

ಇದಲ್ಲದೆ ವಿರಾಟ್ ದೆಹಲಿಯಲ್ಲಿ NUEVA ಎಂಬ ಹೆಸರಿನ ರೆಸ್ಟೋರೆಂಟ್ ಕೂಡ ನಡೆಸುತ್ತಿದ್ದಾರೆ.

ಕೊಹ್ಲಿಯಂತೆಯೇ ರವೀಂದ್ರ ಜಡೇಜಾ ಕೂಡ ಬಹಳ ವರ್ಷಗಳಿಂದ ರೆಸ್ಟೋರೆಂಟ್ ವ್ಯವಹಾರ ನಡೆಸುತ್ತಿದ್ದಾರೆ. ಜಡೇಜಾ ರಾಜ್‌ಕೋಟ್‌ನಲ್ಲಿ ಜಡ್ಡುಸ್ ಫುಡ್ ಫೀಲ್ಡ್ ಎಂಬ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.

ಈ ಹಿಂದೆ ಜಡೇಜಾ ಅವರ ಜಡ್ಡುಸ್ ಫುಡ್ ಫೀಲ್ಡ್ ರೆಸ್ಟೋರೆಂಟ್ಗೆ ಹಲವು ಕ್ರಿಕೆಟಿಗರು ಭೇಟಿ ನೀಡಿ ರುಚಿ ಸವಿದಿದ್ದರು.

1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕೂಡ ಪಾಟ್ನಾದಲ್ಲಿ ‘ಇಲೆವೆನ್ಸ್’ ಎಂಬ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.

ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕೂಡ SM 18 ಎಂಬ ಹೆಸರಿನ ಕೆಫೆಯನ್ನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆರಂಭಿಸಿದ್ದಾರೆ.

ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಕೂಡ 2005ರಲ್ಲಿ ಫೈನ್ ಡೈನಿಂಗ್ ರೆಸ್ಟೋರೆಂಟ್ ಅನ್ನು ಪುಣೆಯಲ್ಲಿ ಆರಂಭಿಸಿದ್ದಾರೆ.



















