Updated on:Jul 05, 2023 | 7:10 PM
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. ಭಾರತ ತಂಡವು ಇದುವರೆಗೆ 1029 ಪಂದ್ಯಗಳನ್ನಾಡಿದೆ.
ವಿಶೇಷ ಎಂದರೆ ಭಾರತವನ್ನು ಹೊರತುಪಡಿಸಿದರೆ, ಬೇರೆ ಯಾವುದೇ ತಂಡ ಏಕದಿನ ಕ್ರಿಕೆಟ್ನಲ್ಲಿ ಸಾವಿರ ಪಂದ್ಯಗಳನ್ನಾಡಿಲ್ಲ. ಇನ್ನು 978 ಏಕದಿನ ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದ್ದರೆ, ಪಾಕಿಸ್ತಾನ್ (953) ತೃತೀಯ ಸ್ಥಾನದಲ್ಲಿದೆ.
ಇಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ಭಾರತ ತಂಡ ಸೋಲಿನಲ್ಲೂ . ಹಾಗಿದ್ರೆ ಈ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂದು ತಿಳಿಯೋಣ...
10- ಸೌತ್ ಆಫ್ರಿಕಾ: ಏಕದಿನ ಕ್ರಿಕೆಟ್ನಲ್ಲಿ 654 ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ತಂಡವು 399 ಮ್ಯಾಚ್ಗಳಲ್ಲಿ ಗೆಲುವು ಸಾಧಿಸಿದೆ. ಹಾಗೆಯೇ 228 ಪಂದ್ಯಗಳಲ್ಲಿ ಸೋಲನುಭವಿಸಿದೆ.
9- ಬಾಂಗ್ಲಾದೇಶ್: 412 ಏಕದಿನ ಪಂದ್ಯಗಳನ್ನಾಡಿರುವ ಬಾಂಗ್ಲಾದೇಶ್ ತಂಡವು 252 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇದೇ ವೇಳೆ ಗೆದ್ದಿರುವುದು ಕೇವಲ 151 ಪಂದ್ಯಗಳಲ್ಲಿ ಮಾತ್ರ.
8- ಆಸ್ಟ್ರೇಲಿಯಾ: ಏಕದಿನ ಕ್ರಿಕೆಟ್ನಲ್ಲಿ ಒಟ್ಟು 978 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ 594 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದೇ ವೇಳೆ 341 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ.
7- ಇಂಗ್ಲೆಂಡ್: ಕ್ರಿಕೆಟ್ ಜನಕರಾದ ಆಂಗ್ಲರು ಇದುವರೆಗೆ 779 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 392 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಹಾಗೆಯೇ 348 ಮ್ಯಾಚ್ಗಳಲ್ಲಿ ಸೋಲನುಭವಿಸಿದ್ದಾರೆ.
6- ನ್ಯೂಝಿಲ್ಯಾಂಡ್: ಏಕದಿನ ಕ್ರಿಕೆಟ್ನಲ್ಲಿ 804 ಪಂದ್ಯಗಳನ್ನಾಡಿರುವ ನ್ಯೂಝಿಲ್ಯಾಂಡ್ 369 ಮ್ಯಾಚ್ಗಳಲ್ಲಿ ಗೆದ್ದರೆ, 386 ಪಂದ್ಯಗಳಲ್ಲಿ ಸೋತಿದ್ದಾರೆ.
5- ಝಿಂಬಾಬ್ವೆ: 562 ಏಕದಿನ ಪಂದ್ಯಗಳನ್ನಾಡಿರುವ ಝಿಂಬಾಬ್ವೆ ತಂಡವು ಗೆದ್ದಿರುವುದು ಕೇವಲ 149 ಪಂದ್ಯಗಳಲ್ಲಿ ಮಾತ್ರ. ಇದೇ ವೇಳೆ 392 ಪಂದ್ಯಗಳಲ್ಲಿ ಪರಾಜಯಗೊಂಡಿದ್ದಾರೆ.
4- ವೆಸ್ಟ್ ಇಂಡೀಸ್: ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತನ್ನು ಆಳಿದ್ದ ಕೆರಿಬಿಯನ್ನರು ಏಕದಿನ ಕ್ರಿಕೆಟ್ನಲ್ಲಿ ಒಟ್ಟು 860 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 416 ಪಂದ್ಯಗಳಲ್ಲಿ ಗೆದ್ದರೆ, 404 ಮ್ಯಾಚ್ಗಳಲ್ಲಿ ಸೋಲನುಭವಿಸಿದ್ದಾರೆ.
3- ಪಾಕಿಸ್ತಾನ್: ಪಾಕ್ ತಂಡವು ಏಕದಿನ ಕ್ರಿಕೆಟ್ನಲ್ಲಿ ಒಟ್ಟು 953 ಪಂದ್ಯಗಳನ್ನಾಡಿದೆ. ಈ ವೇಳೆ 503 ಮ್ಯಾಚ್ಗಳನ್ನು ಗೆದ್ದುಕೊಂಡಿದ್ದಾರೆ. ಹಾಗೆಯೇ 421 ಪಂದ್ಯಗಳಲ್ಲಿ ಸೋತಿದ್ದಾರೆ.
2- ಭಾರತ: ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 1029 ಪಂದ್ಯಗಳನ್ನಾಡಿದೆ. ಇದರಲ್ಲಿ 539 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 438 ಪಂದ್ಯಗಳಲ್ಲಿ ಸೋಲನುಭವಿಸಿದೆ.
1- ಶ್ರೀಲಂಕಾ: ಏಕದಿನ ಕ್ರಿಕೆಟ್ನಲ್ಲಿ 889 ಪಂದ್ಯಗಳನ್ನಾಡಿರುವ ಶ್ರೀಲಂಕಾ ತಂಡವು ಗೆದ್ದಿರುವುದು 403 ಪಂದ್ಯಗಳಲ್ಲಿ ಮಾತ್ರ. ಇನ್ನು 441 ಪಂದ್ಯಗಳಲ್ಲಿ ಸೋಲನುಭವಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳಲ್ಲಿ ಸೋತ ಹೀನಾಯ ದಾಖಲೆಯೊಂದು ಶ್ರೀಲಂಕಾ ತಂಡದ ಹೆಸರಿನಲ್ಲಿದೆ.
Published On - 7:23 pm, Sun, 25 June 23