Updated on: Dec 04, 2022 | 9:32 PM
ಬಾಂಗ್ಲಾದೇಶ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮೂಲಕ ಕುಲ್ದೀಪ್ ಸೇನ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ಭಾರತದ ಪರ 250 ಆಟಗಾರರ ಏಕದಿನ ಕ್ರಿಕೆಟ್ ಆಡಿದಂತಾಗಿದೆ.
1974 ರಿಂದ ಏಕದಿನ ಪಂದ್ಯವಾಡುತ್ತಿರುವ ಟೀಮ್ ಇಂಡಿಯಾ ಇದುವರೆಗೆ 250 ಆಟಗಾರರನ್ನು ಕಣಕ್ಕಿಳಿಸಿದೆ. ವಿಶೇಷ ಎಂದರೆ ವಿಶ್ವ ಕ್ರಿಕೆಟ್ನಲ್ಲಿ ಕೇವಲ 2 ತಂಡಗಳ ಪರ ಮಾತ್ರ 250 ಆಟಗಾರರು ಕಣಕ್ಕಿಳಿದಿದ್ದಾರೆ. ಹಾಗಿದ್ರೆ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಆಟಗಾರರನ್ನು ಕಣಕ್ಕಿಳಿಸಿದ ತಂಡಗಳು ಯಾವುವು ಎಂದು ನೋಡೋಣ...
ಇಂಗ್ಲೆಂಡ್: ಕ್ರಿಕೆಟ್ ಆಟದ ಜನಕರಾದ ಇಂಗ್ಲೆಂಡ್ ತಂಡವು ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಆಟಗಾರರನ್ನು ಕಣಕ್ಕಿಳಿಸಿದೆ. ಒನ್ಡೇ ಕ್ರಿಕೆಟ್ನಲ್ಲಿ ಇದುವರೆಗೆ ಇಂಗ್ಲೆಂಡ್ ಪರ ಬರೋಬ್ಬರಿ 266 ಆಟಗಾರರು ಕಣಕ್ಕಿಳಿದಿದ್ದಾರೆ.
ಭಾರತ: ಟೀಮ್ ಇಂಡಿಯಾ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 250 ಆಟಗಾರರು ಕಣಕ್ಕಿಳಿದಿದ್ದಾರೆ. ಇವರಲ್ಲಿ ಕೊನೆಯ ಆಟಗಾರನಾಗಿ ಯುವ ವೇಗಿ ಕುಲ್ದೀಪ್ ಸೇನ್ ಕಾಣಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ: ಆಸೀಸ್ ತಂಡದ ಪರ ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 238 ಆಟಗಾರರು ಕಣಕ್ಕಿಳಿದಿದ್ದಾರೆ.
ಪಾಕಿಸ್ತಾನ್: ಈ ಪಟ್ಟಿಯಲ್ಲಿ 4ನೇ ತಂಡವೆಂದರೆ ಪಾಕಿಸ್ತಾನ್. ಪಾಕ್ ಪರ ಇದುವರೆಗೆ 238 ಆಟಗಾರರು ಏಕದಿನ ಕ್ರಿಕೆಟ್ ಆಡಿದ್ದಾರೆ.
ವೆಸ್ಟ್ ಇಂಡೀಸ್: ಕೆರಿಬಿಯನ್ ತಂಡದ ಪರ ಇದುವರೆಗೆ 215 ಆಟಗಾರರು ಏಕದಿನ ಪಂದ್ಯಗಳನ್ನಾಡಿದ್ದಾರೆ.
ನ್ಯೂಜಿಲೆಂಡ್: ಕಿವೀಸ್ ಬಳಗದಲ್ಲಿ ಬರೋಬ್ಬರಿ 206 ಆಟಗಾರರು ಏಕದಿನ ಕ್ರಿಕೆಟ್ ಆಡಿದ್ದಾರೆ.
ಶ್ರೀಲಂಕಾ: ಲಂಕಾ ಪರ ಏಕದಿನ ಕ್ರಿಕೆಟ್ ಆಡಿದ ಆಟಗಾರರ ಒಟ್ಟು ಸಂಖ್ಯೆ 205.
ಜಿಂಬಾಬ್ವೆ: ಈ ಪಟ್ಟಿಯಲ್ಲಿರುವ 8ನೇ ತಂಡವೆಂದರೆ ಜಿಂಬಾಬ್ವೆ. ಇದುವರೆಗೆ ಜಿಂಬಾಬ್ವೆ ಪರ 152 ಆಟಗಾರರು ಏಕದಿನ ಕ್ರಿಕೆಟ್ ಆಡಿದ್ದಾರೆ.
ಸೌತ್ ಆಫ್ರಿಕಾ: ದಕ್ಷಿಣ ಆಫ್ರಿಕಾ ಪರ ಇದುವರೆಗೆ ಏಕದಿನ ಪಂದ್ಯಗಳನ್ನಾಡಿರುವುದು 144 ಆಟಗಾರರು ಮಾತ್ರ.
ಬಾಂಗ್ಲಾದೇಶ್: ಈ ಪಟ್ಟಿಯಲ್ಲಿರುವ 10ನೇ ತಂಡ ಬಾಂಗ್ಲಾದೇಶ್. ಬಾಂಗ್ಲಾ ಪರ ಇದುವರೆಗೆ 139 ಆಟಗಾರರು ಏಕದಿನ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
Published On - 9:24 pm, Sun, 4 December 22