ಒಂದಲ್ಲ, ಎರಡಲ್ಲ…ಬಾಬರ್ ಬ್ಯಾಟ್ನಿಂದ 4 ಶತಕಗಳು ಖಚಿತ ಎಂದ ಗಂಭೀರ್
TV9 Web | Updated By: ಝಾಹಿರ್ ಯೂಸುಫ್
Updated on:
Oct 02, 2023 | 8:29 PM
Babar Azam: ಏಕದಿನ ಕ್ರಿಕೆಟ್ನಲ್ಲಿ 105 ಇನಿಂಗ್ಸ್ ಆಡಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಇದುವರೆಗೆ 6069 ರನ್ ಕಲೆಹಾಕಿದ್ದಾರೆ. ಈ ವೇಳೆ ಒಟ್ಟು 19 ಶತಕಗಳನ್ನು ಹಾಗೂ 28 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಚೊಚ್ಚಲ ಬಾರಿ ಭಾರತದಲ್ಲಿ ಪಂದ್ಯವಾಡಲು ಸಜ್ಜಾಗಿರುವ ಬಾಬರ್ ಕಡೆಯಿಂದ ಅದ್ಭುತ ಪ್ರದರ್ಶನ ಮೂಡಿಬರಲಿದೆ ಎಂದಿದ್ದಾರೆ ಗಂಭೀರ್,
1 / 6
ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಪುನರುಚ್ಚರಿಸಿದ್ದಾರೆ.
2 / 6
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗಂಭೀರ್, ಈ ಬಾರಿಯ ವಿಶ್ವಕಪ್ನಲ್ಲಿ ಬಾಬರ್ ಆಝಂ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಲಿದ್ದಾರೆ ಎಂದಿದ್ದರು. ಇದೀಗ ಮತ್ತೊಂದೆಜ್ಜೆ ಮುಂದೆ ಹೋಗಿರುವ ಗೌತಿ, ಪಾಕ್ ನಾಯಕನ ಬ್ಯಾಟ್ನಿಂದ ಮೂಡಿಬರಲಿರುವ ಶತಕಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
3 / 6
ನನ್ನ ಪ್ರಕಾರ, ಈ ಬಾರಿ ಬಾಬರ್ ಆಝಂ ಬ್ಯಾಟ್ನಿಂದ ಶತಕಗಳು ಮೂಡಿ ಬರುವುದು ಖಚಿತ. ಭಾರತದ ಪಿಚ್ನಲ್ಲಿ ಪಾಕ್ ತಂಡದ ನಾಯಕ ಕನಿಷ್ಠ ಎಂದರೂ 3 ರಿಂದ 4 ಶತಕಗಳನ್ನು ಸಿಡಿಸಲಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
4 / 6
ಇದಕ್ಕೂ ಮುನ್ನ ಬಾಬರ್ ಆಝಂ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಗಳಿದ್ದ ಗಂಭೀರ್, ನಾನು ನೋಡಿದ ಕೆಲವೇ ಕೆಲವು ಆಟಗಾರರಲ್ಲಿ ಬಾಬರ್ ಕೂಡ ಒಬ್ಬರು. ಚೆಂಡನ್ನು ಬಾರಿಸಲು ಆತ ತೆಗೆದುಕೊಳ್ಳುವ ಟೈಮಿಂಗ್ ಅತ್ಯುತ್ತಮವಾಗಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಬಾಬರ್ ಆಬ್ಬರಿಸುವುದನ್ನು ಎದುರು ನೋಡಬಹುದು ಎಂದಿದ್ದರು.
5 / 6
ಇದೀಗ ಚೊಚ್ಚಲ ಬಾರಿಗೆ ಭಾರತದಲ್ಲಿ ಪಂದ್ಯವಾಡುತ್ತಿರುವ ಪಾಕ್ ತಂಡದ ಬಾಬರ್ ಆಝಂರಿಂದ ಮೂರರಿಂದ ನಾಲ್ಕು ಶತಕಗಳನ್ನು ಎದುರು ನೋಡಬಹುದು ಎಂದು ತಿಳಿಸಿದ್ದಾರೆ. ಈ ಮೂಲಕ ಈ ಬಾರಿಯ ವಿಶ್ವಕಪ್ನಲ್ಲಿ ಬಾಬರ್ ಆಝಂ ಬೆಂಕಿ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಗೌತಮ್ ಗಂಭೀರ್ ಪುನರುಚ್ಚರಿಸಿದ್ದಾರೆ.
6 / 6
ಏಕದಿನ ಕ್ರಿಕೆಟ್ನಲ್ಲಿ 105 ಇನಿಂಗ್ಸ್ ಆಡಿರುವ ಬಾಬರ್ ಆಝಂ ಇದುವರೆಗೆ 6069 ರನ್ ಕಲೆಹಾಕಿದ್ದಾರೆ. ಈ ವೇಳೆ ಒಟ್ಟು 19 ಶತಕ ಹಾಗೂ 28 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಗೌತಮ್ ಗಂಭೀರ್ ಅವರ ಭವಿಷ್ಯದಂತೆ, ಈ ಬಾರಿ ಬಾಬರ್ ಬ್ಯಾಟ್ನಿಂದ ಮೂರರಿಂದ ನಾಲ್ಕು ಶತಕಗಳು ಮೂಡಿಬರಲಿದೆಯಾ ಕಾದು ನೋಡಬೇಕಿದೆ.