UAE T20: ಹೊಸ ಟಿ20 ಕ್ರಿಕೆಟ್ ಟೀಮ್ ಘೋಷಿಸಿದ ಅದಾನಿ ಗ್ರೂಪ್..!

Edited By:

Updated on: Jul 13, 2022 | 5:54 PM

Gulf Giants: ಈ ಟೂರ್ನಿಯ ಪಂದ್ಯಗಳನ್ನು ನೇರ ಪ್ರಸಾರದ ಹಕ್ಕುಗಳನ್ನು ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ZEE ನೆಟ್​ವರ್ಕ್​ ಪಡೆದುಕೊಂಡಿದೆ.

1 / 5
UAE T20 League: ಟಿ20 ಕ್ರಿಕೆಟ್​ ಅಂಗಳದಲ್ಲಿ ಮತ್ತೊಂದು ಲೀಗ್ ಸೇರ್ಪಡೆಯಾಗುತ್ತಿದೆ. ಶೀಘ್ರದಲ್ಲೇ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಹೊಸ ಲೀಗ್​ ಅನ್ನು ಶುರು ಮಾಡಲಿದೆ. ಯುಎಇ ಟಿ20 ಲೀಗ್ (UAE T20 League) ಹೆಸರಿನಲ್ಲಿ ನಡೆಯಲಿರುವ ಈ ಟೂರ್ನಿಗೆ ಬೇಕಾದ ಸಿದ್ಧತೆಗಳು ಆರಂಭವಾಗಿದೆ.

UAE T20 League: ಟಿ20 ಕ್ರಿಕೆಟ್​ ಅಂಗಳದಲ್ಲಿ ಮತ್ತೊಂದು ಲೀಗ್ ಸೇರ್ಪಡೆಯಾಗುತ್ತಿದೆ. ಶೀಘ್ರದಲ್ಲೇ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಹೊಸ ಲೀಗ್​ ಅನ್ನು ಶುರು ಮಾಡಲಿದೆ. ಯುಎಇ ಟಿ20 ಲೀಗ್ (UAE T20 League) ಹೆಸರಿನಲ್ಲಿ ನಡೆಯಲಿರುವ ಈ ಟೂರ್ನಿಗೆ ಬೇಕಾದ ಸಿದ್ಧತೆಗಳು ಆರಂಭವಾಗಿದೆ.

2 / 5

ಯುಎಇ ಟಿ20 ಲೀಗ್‌ನಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ . ಈ ತಂಡಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, ಜಿಎಂಆರ್ ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಕಂಪೆನಿಗಳು ಖರೀದಿಸಿರುವುದು ವಿಶೇಷ.

3 / 5

ಅದಾನಿ ಮಾಲೀಕತ್ವದ ತಂಡ ಹೆಸರು ಹಾಗೂ ಲೋಗೋ ಅನಾವರಣಗೊಂಡಿದೆ. ತಂಡಕ್ಕೆ 'ಗಲ್ಫ್ ಜೈಂಟ್ಸ್' ಎಂದು ಹೆಸರಿಡಲಾಗಿದ್ದು, ಹಾಗೆಯೇ ಗರುಡನ ಮುಖವನ್ನು ಲೋಗೋ ಆಗಿ ಬಳಸಿಕೊಳ್ಳಲಾಗಿದೆ.

4 / 5

ವಿಶೇಷ ಎಂದರೆ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಕೋಚ್ ಆಗಿರುವ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಅವರೇ ಗಲ್ಫ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ತಂಡ ಖರೀದಿಸಲು ಅದಾನಿ ಗ್ರೂಪ್ ಆಸಕ್ತಿ ಹೊಂದಿತ್ತು. ಇದಾಗ್ಯೂ ಭರ್ಜರಿ ಪೈಪೋಟಿ ಕಾರಣ ತಂಡವು ಕೈ ತಪ್ಪಿತ್ತು. ಇದೀಗ ಯುಎಇ ಟಿ20 ಲೀಗ್​ ಮೂಲಕ ಕ್ರಿಕೆಟ್ ಅಂಗಳಕ್ಕೆ ಅದಾನಿ ಗ್ರೂಪ್ ಎಂಟ್ರಿ ಕೊಟ್ಟಂತಾಗಿದೆ.

5 / 5

ಇನ್ನು ಈ ಟೂರ್ನಿಯ ಪಂದ್ಯಗಳನ್ನು ನೇರ ಪ್ರಸಾರದ ಹಕ್ಕುಗಳನ್ನು ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ZEE ನೆಟ್​ವರ್ಕ್​ ಪಡೆದುಕೊಂಡಿದೆ. ಅದರಂತೆ ಲೀಗ್​ನ ಪಂದ್ಯಗಳು ZEE ಚಾನೆಲ್‌ಗಳು ಮತ್ತು ಅದರ OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ನೇರ ಪ್ರಸಾರವಾಗಲಿದೆ. ಒಟ್ಟಿನಲ್ಲಿ ಯುಎಇ ಕ್ರಿಕೆಟ್​ ಲೀಗ್​ನಲ್ಲಿ ಐಪಿಎಲ್​ನ ಬಹುತೇಕ ತಂಡಗಳ ಮಾಲೀಕರು ಇರುವುದರಿಂದ ಈ ಟೂರ್ನಿ ಜನಪ್ರಿಯತೆ ಪಡೆಯಲಿದೆಯಾ ಕಾದು ನೋಡಬೇಕಿದೆ.

Loading...
Unable to load recommendations.
Follow Us