ICC ODI Team Rankings: ಇಂಗ್ಲೆಂಡ್ ವಿರುದ್ಧ ಸೆಡ್ಡು ಹೊಡೆದು ಪಾಕಿಸ್ತಾನಕ್ಕೆ ಪೆಟ್ಟು ನೀಡಿದ ಭಾರತ
ICC ODI Team Rankings: ಟೀಮ್ ಇಂಡಿಯಾ ವಿರುದ್ದ ಹೀನಾಯವಾಗಿ ಸೋತರೂ ಇಂಗ್ಲೆಂಡ್ ತಂಡವು 2ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಹಾಗಿದ್ರೆ ಏಕದಿನ ತಂಡಗಳ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ನೋಡೋಣ...
Updated on: Jul 13, 2022 | 2:24 PM

ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ. ಆಂಗ್ಲರನ್ನು ಕೇವಲ 110 ರನ್ಗಳಿಗೆ ಆಲೌಟ್ ಮಾಡಿ, 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸುವುದರೊಂದಿಗೆ ಭಾರತ ತಂಡವು ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲೂ ಮೇಲೇರಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಐಸಿಸಿ ಏಕದಿನ ತಂಡಗಳ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಟಾಪ್-3 ನಲ್ಲಿ ಕಾಣಿಸಿಕೊಂಡಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡ ಒಟ್ಟು 105 ಪಾಯಿಂಟ್ಸ್ ಹೊಂದಿತ್ತು. ಮೊದಲ ಏಕದಿನ ಪಂದ್ಯದ ಗೆಲುವಿನೊಂದಿಗೆ 3 ಅಂಕ ಗಳಿಸಿ ಒಟ್ಟು 108 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಟೀಮ್ ಇಂಡಿಯಾ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಅತ್ತ 106 ಅಂಕಗಳನ್ನು ಹೊಂದಿದ್ದ ಪಾಕಿಸ್ತಾನ್ 4ನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಇನ್ನೂ 2 ಪಂದ್ಯಗಳು ಬಾಕಿ ಇವೆ.

ಇನ್ನುಳಿದ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ, ಅಂಕಗಳಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಬಹುದು. ಇನ್ನೊಂದೆಡೆ ಭಾರತ ತಂಡ ಎರಡೂ ಪಂದ್ಯಗಳಲ್ಲಿ ಸೋತರೆ ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ ತಂಡ ಮತ್ತೆ 3ನೇ ಸ್ಥಾನಕ್ಕೆ ಬರಲಿದೆ. ಹೀಗಾಗಿ ಮುಂದಿನ 2 ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ಬಹಳ ಮಹತ್ವದ್ದು. ಇನ್ನೊಂದೆಡೆ ಟೀಮ್ ಇಂಡಿಯಾ ವಿರುದ್ದ ಹೀನಾಯವಾಗಿ ಸೋತರೂ ಇಂಗ್ಲೆಂಡ್ ತಂಡವು 2ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಹಾಗಿದ್ರೆ ಏಕದಿನ ತಂಡಗಳ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ನೋಡೋಣ...

10- ಅಫ್ಘಾನಿಸ್ತಾನ್ (69 ರೇಟಿಂಗ್)

9- ವೆಸ್ಟ್ ಇಂಡೀಸ್ (71 ರೇಟಿಂಗ್)

8- ಶ್ರೀಲಂಕಾ (92 ರೇಟಿಂಗ್)

7- ಬಾಂಗ್ಲಾದೇಶ (96 ರೇಟಿಂಗ್)

6- ಸೌತ್ ಆಫ್ರಿಕಾ (99 ರೇಟಿಂಗ್)

5- ಆಸ್ಟ್ರೇಲಿಯಾ (101 ರೇಟಿಂಗ್)

4- ಪಾಕಿಸ್ತಾನ್ (106 ರೇಟಿಂಗ್)

3- ಭಾರತ (108 ರೇಟಿಂಗ್)

2- ಇಂಗ್ಲೆಂಡ್ (122 ರೇಟಿಂಗ್)

1- ನ್ಯೂಜಿಲೆಂಡ್ (127 ರೇಟಿಂಗ್)
























