IND vs IRE: ಐರ್ಲೆಂಡ್​ನಲ್ಲೂ ವೈಭವ್ ಕ್ರೇಜ್; ಕ್ರೀಡಾಂಗಣದಲ್ಲಿ ಆಸನಗಳ ಹೆಚ್ಚಳ

Updated on: Jun 25, 2026 | 5:49 PM

India vs Ireland T20: ಭಾರತ-ಐರ್ಲೆಂಡ್ ನಡುವಿನ ಟಿ20 ಸರಣಿ ಜೂನ್ 26 ಮತ್ತು 28 ರಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿದೆ. ವೈಭವ್ ಸೂರ್ಯವಂಶಿ ಅವರ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದ ನಿರೀಕ್ಷೆ ಹೆಚ್ಚಾಗಿದೆ. ಐರ್ಲೆಂಡ್‌ನಲ್ಲಿ ವೈಭವ್ ಅವರ ಕ್ರೇಜ್‌ನಿಂದಾಗಿ, ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆಸನ ಸಾಮರ್ಥ್ಯವನ್ನು 4,500 ರಿಂದ 7,000 ಕ್ಕೆ ಹೆಚ್ಚಿಸಲಾಗಿದೆ. ಆದರೂ, ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುವುದೇ ಎಂಬುದು ಕುತೂಹಲಕಾರಿಯಾಗಿದೆ.

1 / 5
ಐರ್ಲೆಂಡ್ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ಭಾರತ ಹಾಗೂ ಐರ್ಲೆಂಡ್ ನಡುವೆ ಎರಡು ಪಂದ್ಯಗಳ ಟಿ20 ಸರಣಿ ಜೂನ್ 26 ಮತ್ತು 28 ರಂದು ನಡೆಯಲಿದೆ. ಇತ್ತ ಟೀಂ ಇಂಡಿಯಾ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನಾಡಲು ವೈಭವ್ ಸೂರ್ಯವಂಶಿ ಕೂಡ ಸಜ್ಜಾಗಿದ್ದಾರೆ. ಈ ನಡುವೆ ಐರ್ಲೆಂಡ್‌ನಲ್ಲೂ ವೈಭವ್ ಕ್ರೇಜ್ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಕ್ರೀಡಾಂಗಣದಲ್ಲಿ ಆಸನಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತಿದೆ (PC- BCCI X).

2 / 5
ವೈಭವ್ ಸೂರ್ಯವಂಶಿ ಮೊದಲ ಬಾರಿಗೆ ಹಿರಿಯರ ತಂಡದಲ್ಲಿ ಆಡಲಿದ್ದಾರೆ. ಎಲ್ಲರ ಕಣ್ಣುಗಳು ಅವರ ಚೊಚ್ಚಲ ಪಂದ್ಯದ ಮೇಲೆ ಇವೆ. ಈ ಕಾರಣದಿಂದಾಗಿ, ಬೆಲ್‌ಫಾಸ್ಟ್ ಕ್ರೀಡಾಂಗಣದಲ್ಲಿ ಆಸನಗಳನ್ನು ಹೆಚ್ಚಿಸಲಾಗುತ್ತಿದೆ. ಅಂದರೆ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಆದಾಗ್ಯೂ, ಈ ಕ್ರೀಡಾಂಗಣದಲ್ಲಿ 10 ಸಾವಿರ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ (PC- BCCI X).

3 / 5
ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಜೂನ್ 26 ಮತ್ತು 28 ರಂದು ಭಾರತ ಹಾಗೂ ಐರ್ಲೆಂಡ್ ನಡುವೆ ಎರಡು ಟಿ20 ಪಂದ್ಯಗಳು ನಡೆಯಲಿವೆ. ಆದರೆ ಐರ್ಲೆಂಡ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವ ಜನರ ಸಂಖ್ಯೆ ಅಷ್ಟಾಗಿ ಇಲ್ಲದ ಕಾರಣ ಈ ಮೈದಾನದಲ್ಲಿ ಅಭಿಮಾನಿಗಳಿಗೆ ಹೆಚ್ಚಿನ ಆಸನ ವ್ಯವಸ್ಥೆ ಇಲ್ಲ. ಮಾಹಿತಿಯ ಪ್ರಕಾರ, ಕೇವಲ ನಾಲ್ಕೂವರೆ ಸಾವಿರ ಅಭಿಮಾನಿಗಳು ಮಾತ್ರ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಬಹುದು (PC- BCCI X).

4 / 5
ಆದರೆ 15 ವರ್ಷದ ವೈಭವ್ ಆಟಕ್ಕೆ ಐರ್ಲೆಂಡ್‌ನಲ್ಲೂ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ಹೀಗಾಗಿ ಈ ಎರಡು ಪಂದ್ಯಗಳನ್ನು ನೋಡಲು ಅಭಿಮಾನಿಗಳು ನಿರೀಕ್ಷೆಗೂ ಮೀರಿ ಬರುವುದು ಖಚಿತವಾಗಿದೆ. ಹೀಗಾಗಿ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಆಸನಗಳ ಸಂಖ್ಯೆಯನ್ನು 7 ಸಾವಿರಕ್ಕೆ ಏರಿಸಲಾಗುತ್ತಿದೆ (PC- BCCI X).

5 / 5
ಆದಾಗ್ಯೂ ವೈಭವ್ ಸೂರ್ಯವಂಶಿ ಈ ಸರಣಿಯಲ್ಲಿ ಪಾದಾರ್ಪಣೆ ಮಾಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ಆರಂಭಿಕರಾಗಿ ಅಭಿಷೇಕ್ ಹಾಗೂ ಸಂಜು ಸ್ಯಾಮ್ಸನ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ವೈಭವ್​ಗೆ ಮೊದಲ ಪಂದ್ಯದಲ್ಲಿಯೇ ಅವಕಾಶ ಸಿಗುತ್ತದೆಯೇ ಅಥವಾ ಎರಡನೇ ಪಂದ್ಯಕ್ಕಾಗಿ ಕಾಯಬೇಕಾಗುತ್ತದೆಯೇ? ಎಂಬುದು ಪಂದ್ಯದ ದಿನವಷ್ಟೇ ತಿಳಿಯಲಿದೆ (PC- BCCI X).

Published On - 5:47 pm, Thu, 25 June 26

Follow Us