14 ಸಿಕ್ಸ್, 171 ರನ್..! ವಿಶ್ವ ದಾಖಲೆಯ ಇನ್ನಿಂಗ್ಸ್ ಆಡಿದ ವೈಭವ್ ಸೂರ್ಯವಂಶಿ

Updated on: Dec 12, 2025 | 3:33 PM

Vaibhav Suryavanshi's Record-Breaking 171: ದುಬೈನಲ್ಲಿ ನಡೆಯುತ್ತಿರುವ U19 ಏಷ್ಯಾಕಪ್‌ನಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ಸ್ಫೋಟಕ 171 ರನ್ ಗಳಿಸಿ ಭಾರತಕ್ಕೆ ಭರ್ಜರಿ ಆರಂಭ ನೀಡಿದರು. ಕೇವಲ 56 ಎಸೆತಗಳಲ್ಲಿ ಶತಕ, 84 ಎಸೆತಗಳಲ್ಲಿ 150 ರನ್ ಪೂರೈಸಿದರು. 14 ಸಿಕ್ಸರ್‌ಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿದ ವೈಭವ್, ಯುವ ಏಕದಿನದಲ್ಲಿ 150+ ರನ್ ಗಳಿಸಿದ ಏಳನೇ ಭಾರತೀಯರಾದರು.

1 / 6
14 ವರ್ಷದ ವೈಭವ್ ಸೂರ್ಯವಂಶಿ ಅವರ ಬ್ಯಾಟ್​ನಿಂದ ಭಾರತೀಯರು ಯಾವ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಿದ್ದರೋ ಅದೇ ಪ್ರದರ್ಶನ ಮೊದಲ ಪಂದ್ಯದಲ್ಲೇ ಮೂಡಿ ಬಂದಿದೆ. ಇಂದಿನಿಂದ ದುಬೈನಲ್ಲಿ ಆರಂಭವಾಗಿರುವ 19 ವರ್ಷದೊಳಗಿನವರ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಯುಎಇ ವಿರುದ್ಧ ಆಡುತ್ತಿದೆ. ಹಾಗೆಯೇ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಬರೋಬ್ಬರಿ 433 ರನ್​ಗಳನ್ನು ಕಲೆಹಾಕಿದೆ.

2 / 6
ಟೀಂ ಇಂಡಿಯಾ ಇಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ತಂಡದ ಆರಂಭಿಕ ಆಟಗಾರ 14 ವರ್ಷದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ ಸಿಡಿಸಿದರು. ಮಾತ್ರವಲ್ಲದೆ, ಯುವ ಏಕದಿನ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಕೇವಲ 56 ಎಸೆತಗಳಲ್ಲಿ ಶತಕ ಬಾರಿಸಿದರು.

3 / 6
ಆ ನಂತರ ಮತ್ತಷ್ಟು ಉಗ್ರರೂಪ ತಾಳಿದ ವೈಭವ್ ಕೇವಲ 84 ಎಸೆತಗಳಲ್ಲಿ 150 ರನ್‌ಗಳ ಗಡಿ ದಾಟಿದರು. ಅಂತಿಮವಾಗಿ ಸ್ಫೋಟಕ 171 ರನ್‌ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಇದು ವೈಭವ್ ಅವರ ಯುವ ಏಕದಿನ ವೃತ್ತಿಜೀವನದ ಅತ್ಯುನ್ನತ ಇನ್ನಿಂಗ್ಸ್ ಆಗಿತ್ತು. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಅಂಡರ್-19 ವಿರುದ್ಧ 143 ರನ್‌ ಬಾರಿಸಿದ್ದು, ಅವರ ಹಿಂದಿನ ಅತಿ ದೊಡ್ಡ ಇನ್ನಿಂಗ್ಸ್ ಆಗಿತ್ತು. ಹಾಗೆಯೇ ಇದೇ ಮೊದಲ ಬಾರಿಗೆ  ವೈಭವ್ 150 ರನ್‌ಗಳ ಮೈಲಿಗಲ್ಲನ್ನು ದಾಟಿದರು.

4 / 6
ವೈಭವ್ ಸೂರ್ಯವಂಶಿ ತಮ್ಮ ಇನ್ನಿಂಗ್ಸ್‌ನಲ್ಲಿ ಪ್ರತಿಯೊಬ್ಬ ಯುಎಇ ಬೌಲರ್‌ಗಳ ವಿರುದ್ಧವೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿಗಳು ಮತ್ತು 14 ಸಿಕ್ಸರ್‌ಗಳು ಸೇರಿದ್ದವು. ಅಂದರೆ ಕೇವಲ ಬೌಂಡರಿ ಹಾಗೂ ಸಿಕ್ಸರ್‌ಗಳಿಂದಲೇ ವೈಭವ್ 110 ರನ್​ ಕಲೆಹಾಕಿದರು.

5 / 6
ಇನ್ನು ಈ ಪಂದ್ಯದಲ್ಲಿ  ವೈಭವ್ ಒಂಬತ್ತು ಬೌಂಡರಿಗಳು ಮತ್ತು 14 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದಕ್ಕೂ ಮೊದಲು, ಯಾವುದೇ ಆಟಗಾರನು ಯೂತ್ ಏಕದಿನ ಪಂದ್ಯದಲ್ಲಿ ಹತ್ತು ಸಿಕ್ಸರ್‌ಗಳಿಗಿಂತ ಹೆಚ್ಚು ಬಾರಿಸಿರಲಿಲ್ಲ, ಆದರೆ ವೈಭವ್ ಸೂರ್ಯವಂಶಿ 14 ಸಿಕ್ಸರ್‌ಗಳೊಂದಿಗೆ ಈ ದಾಖಲೆಯನ್ನು ಮುರಿದಿದ್ದಾರೆ. ಇದಲ್ಲದೆ, ವೈಭವ್ ಸೂರ್ಯವಂಶಿ ಯೂತ್ ಏಕದಿನ ಪಂದ್ಯದಲ್ಲಿ 150 ರನ್ ಬಾರಿಸಿದ ಏಳನೇ ಭಾರತೀಯ ಆಟಗಾರ ಎನಿಸಿಕೊಂಡರು.

6 / 6
ಇದು ಯುಎಇ ವಿರುದ್ಧ ವೈಭವ್ ಸೂರ್ಯವಂಶಿ ಅವರ ಮೊದಲ ದೊಡ್ಡ ಇನ್ನಿಂಗ್ಸ್ ಅಲ್ಲ. ಅವರು ಈ ತಂಡದ ವಿರುದ್ಧ ನಿರಂತರವಾಗಿ ದೊಡ್ಡ ಇನ್ನಿಂಗ್ಸ್ ಆಡುತ್ತಿದ್ದಾರೆ. ಕಳೆದ ವರ್ಷ ನಡೆದಿದ್ದ ಅಂಡರ್-19 ಏಷ್ಯಾಕಪ್​ನಲ್ಲಿ ವೈಭವ್ ಸೂರ್ಯವಂಶಿ ಇದೇ ಯುಎಇ ವಿರುದ್ಧ ಅಜೇಯ 76 ರನ್ ಗಳಿಸಿ ತಂಡವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದರು. ಇತ್ತೀಚೆಗೆ ನಡೆದಿದ್ದ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್​ನಲ್ಲಿಯೂ ವೈಭವ್ ಯುಎಇ ವಿರುದ್ಧ 144 ರನ್​ಗಳ ಇನ್ನಿಂಗ್ಸ್ ಆಡಿದ್ದರು.