Updated on: Nov 27, 2021 | 2:36 PM
ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ರನ್ನರ್ ಅಪ್ ಆಗಿದ್ದ ಕರ್ನಾಟಕ ತಂಡವು ಇದೀಗ ವಿಜಯ್ ಹಝಾರೆ ಟೂರ್ನಿಗೆ ಸಜ್ಜಾಗಿದೆ. ಮುಂದಿನ ತಿಂಗಳಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ 20 ಸದಸ್ಯರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕನಾಗಿ ಮನೀಷ್ ಪಾಂಡೆ ಅವರನ್ನೇ ಮುಂದುವರೆಸಲಾಗಿದೆ.
ಈ ಟೂರ್ನಿಯಲ್ಲಿ ಕರ್ನಾಟಕ ತಂಡವು ಗ್ರೂಪ್-ಬಿ ಆಡಲಿದ್ದು, ತಮಿಳುನಾಡು, ಪುದುಚೇರಿ, ಮುಂಬೈ, ಬರೋಡಾ ಮತ್ತು ಬೆಂಗಾಲ್ ತಂಡಗಳ ವಿರುದ್ದ ಸೆಣಸಲಿದೆ.
ಕರ್ನಾಟಕ ತಂಡದ ಮೊದಲ ಪಂದ್ಯವು ಡಿಸೆಂಬರ್ 8 ರಂದು ನಡೆಯಲಿದ್ದು, ಪುದುಚೇರಿ ವಿರುದ್ದದ ಪಂದ್ಯದ ಮೂಲಕ ಮನೀಷ್ ಪಾಂಡೆ ಬಳಗವು ವಿಜಯ್ ಹಝಾರೆ ಟೂರ್ನಿಯ ಅಭಿಯಾನ ಆರಂಭಿಸಲಿದೆ.
ಇನ್ನು ಬಿ ಗ್ರೂಪ್ನಲ್ಲಿ ಎಲ್ಲಾ ಪಂದ್ಯಗಳು ತಿರುವನಂತಪುರದಲ್ಲಿ ನಡೆಯಲಿದ್ದು, ಹೀಗಾಗಿ ಯಾವುದೇ ತಂಡಗಳಿಗೂ ಹೋಮ್ ಗ್ರೌಂಡ್ ಸಪೋರ್ಟ್ ಇರುವುದಿಲ್ಲ ಎಂಬುದು ವಿಶೇಷ.
Karnataka team