IPL 2022: ದೇಶೀಯ ಅಂಗಳದಲ್ಲಿ ಮಿಂಚಿದ ಐವರು ಆಟಗಾರರು: ಯಾರಿಗೆ ಸಿಗಲಿದೆ ಐಪಿಎಲ್ ಚಾನ್ಸ್?
TV9 Web | Updated By: ಝಾಹಿರ್ ಯೂಸುಫ್
Updated on:
Dec 27, 2021 | 3:11 PM
Vijay Hazare Trophy 2021 Top Scorer: ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಬ್ಯಾಟರ್ಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿ ಬಂದಿತ್ತು. ಇದಕ್ಕೆ ಸಾಕ್ಷಿಯೇ ಈ ಸಲ 22 ಮಂದಿ 300 ಕ್ಕೂ ಅಧಿಕ ರನ್ ಕಲೆಹಾಕಿರುವುದು.
1 / 8
2021 ರ ವಿಜಯ್ ಹಜಾರೆ ಟೂರ್ನಿಗೆ ತೆರೆಬಿದ್ದಿದೆ. ದೇಶೀಯ ಅಂಗಳದ ಬಲಿಷ್ಠ ತಂಡ ಎನಿಸಿಕೊಂಡಿರುವ ತಮಿಳುನಾಡು ವಿರುದ್ದ ವಿಜೆಡಿ ನಿಯಮದನ್ವಯ 11 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಹಿಮಾಚಲ ಪ್ರದೇಶ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದರಲ್ಲೂ ಟೂರ್ನಿಯುದ್ದಕ್ಕೂ ಆಲ್ರೌಂಡರ್ ಆಟವಾಡಿದ ಹಿಮಾಚಲ ಪ್ರದೇಶ ತಂಡದ ನಾಯಕ ರಿಷಿ ಧವನ್ ಟ್ರೋಫಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.
2 / 8
ಇನ್ನು ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಬ್ಯಾಟರ್ಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿ ಬಂದಿತ್ತು. ಇದಕ್ಕೆ ಸಾಕ್ಷಿಯೇ ಈ ಸಲ 22 ಮಂದಿ 300 ಕ್ಕೂ ಅಧಿಕ ರನ್ ಕಲೆಹಾಕಿರುವುದು. ಆದರೆ ಟಾಪ್ ರನ್ ಸ್ಕೋರರ್ಗಳ ಪಟ್ಟಿಯಲ್ಲಿ ಕೇವಲ 5 ಪಂದ್ಯಗಳನ್ನಾಡಿದ ರುತುರಾಜ್ ಗಾಯಕ್ವಾಡ್ ಇರುವುದು ವಿಶೇಷ. ಹಾಗಿದ್ರೆ ಈ ಸಲ ವಿಜಯ್ ಹಜಾರೆ ಟೂರ್ನಿಯ ಟಾಪ್ 5 ಬ್ಯಾಟರ್ಗಳು ಯಾರೆಂದು ನೋಡೋಣ...
3 / 8
1- ರುತುರಾಜ್ ಗಾಯಕ್ವಾಡ್: ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಈ ಸಲ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದರು. ಅಲ್ಲದೆ 603 ರನ್ ಕಲೆಹಾಕುವ ಮೂಲಕ ಟಾಪ್ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.
4 / 8
2- ರಿಷಿ ಧವನ್: ಹಿಮಾಚಲ ಪ್ರದೇಶ ತಂಡದ ನಾಯಕ ರಿಷಿ ಧವನ್ ಈ ಬಾರಿ ಆಲ್ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದರು. ರಿಷಿ 8 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ ಒಟ್ಟು 458 ರನ್ ಕಲೆಹಾಕುವ ಮೂಲಕ 2ನೇ ಟಾಪ್ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.
5 / 8
3- ಪ್ರಶಾಂತ್ ಚೋಪ್ರಾ: ಹಿಮಾಚಲ ಪ್ರದೇಶ ತಂಡದ ಮತ್ತೋರ್ವ ಆಟಗಾರ ಪ್ರಶಾಂತ್ ಚೋಪ್ರಾ ಕೂಡ 8 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ ಒಟ್ಟು 456 ರನ್ ಕಲೆಹಾಕಿದ್ದಾರೆ.
6 / 8
4- ಶುಭಂ ಶರ್ಮಾ: ಮಧ್ಯ ಪ್ರದೇಶ ತಂಡದ ಆಟಗಾರ ಶುಭಂ ಶರ್ಮಾ 6 ಪಂದ್ಯಗಳಿಂದ 1 ಶತಕ ಹಾಗೂ 4 ಅರ್ಧಶತಕದೊಂದಿಗೆ ಒಟ್ಟು 418 ರನ್ ಬಾರಿಸಿದ್ದಾರೆ.
7 / 8
5- ಮನನ್ ವೋಹ್ರಾ: ಚಂಡೀಗಢ್ ತಂಡದ ನಾಯಕ ಮನನ್ ವೋಹ್ರಾ ಕೂಡ ಈ ಬಾರಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಅದರಂತೆ 5 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಬಾರಿಸಿದ್ದರು. ಈ ಮೂಲಕ ಒಟ್ಟು 379 ರನ್ ಕಲೆಹಾಕಿದ್ದರು.
8 / 8
ಈ ಐವರು ಬ್ಯಾಟರ್ಗಳಲ್ಲಿ ರುತುರಾಜ್ ಗಾಯಕ್ವಾಡ್ (ಸಿಎಸ್ಕೆ) ಮಾತ್ರ ಐಪಿಎಲ್ ತಂಡದ ಭಾಗವಾಗಿದ್ದಾರೆ. ಹೀಗಾಗಿ ಉಳಿದಿರುವ ಈ ನಾಲ್ವರು ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಲು ಐಪಿಎಲ್ ಫ್ರಾಂಚೈಸಿಗಳು ಆಸಕ್ತಿ ತೋರಲಿದ್ದು, ಯಾರಿಗೆ ಯಾವ ತಂಡದಲ್ಲಿ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.