Updated on: Dec 26, 2021 | 7:22 PM
ಐಪಿಎಲ್ ಶುರುವಾಗಿ 14 ವರ್ಷಗಳು ಕಳೆದಿವೆ. ಈ ಹದಿನಾಲ್ಕು ವರ್ಷಗಳಲ್ಲಿ ಆರ್ಸಿಬಿ ಪರ ಆಡಿದ ಏಕೈಕ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ.
ಅಷ್ಟೇ ಅಲ್ಲದೆ 14 ಸೀಸನ್ನಲ್ಲೂ ಒಂದೇ ತಂಡದ ಪರ ಆಡಿದ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ. ಇದಾಗ್ಯೂ ಕಳೆದ 14 ಸೀಸನ್ನಲ್ಲಿ ಆರ್ಸಿಬಿ ಪರ ಅನೇಕ ಆಟಗಾರರು ಕಾಣಿಸಿಕೊಂಡಿದ್ದಾರೆ. ಹೀಗೆ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡ 5 ವಿದೇಶಿ ಆಟಗಾರರ ಪರಿಚಯ ಇಲ್ಲಿದೆ.
1- ಕ್ಯಾಮರೂನ್ ವೈಟ್: 2008 ರಲ್ಲಿ ಆಸ್ಟ್ರೇಲಿಯಾ ಆಟಗಾರ ಕ್ಯಾಮರೂನ್ ವೈಟ್ ಆರ್ಸಿಬಿ ಪರ 8 ಪಂದ್ಯಗಳನ್ನಾಡಿದ್ದರು,
2- ಸೀನ್ ಅಬಾಟ್: ಆಸ್ಟ್ರೇಲಿಯಾ ವೇಗಿ ಸೀಸನ್ ಅಬಾಟ್ 2015 ರಲ್ಲಿ ಆರ್ಸಿಬಿ ಪರ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
3- ಡಾರೆನ್ ಸಮಿ: 2015 ರಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಡಾರೆನ್ ಸಮಿ ಕೂಡ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದರು.
4- ಮಿಸ್ಬಾ ಉಲ್ ಹಕ್: ಪಾಕಿಸ್ತಾನ್ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಕೂಡ 2008 ರಲ್ಲಿ ಆರ್ಸಿಬಿ ಪರ ಆಡಿದ್ದರು ಎಂಬುದು ವಿಶೇಷ.
5- ಟೈಮಲ್ ಮಿಲ್ಸ್: 2017 ರಲ್ಲಿ ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್ ಕೂಡ ಆರ್ಸಿಬಿ ಪರ ಕಣಕ್ಕಿಳಿದಿದ್ದರು.