IPL 2022: ದೇಶೀಯ ಅಂಗಳದಲ್ಲಿ ಮಿಂಚಿದ ಐವರು ಆಟಗಾರರು: ಯಾರಿಗೆ ಸಿಗಲಿದೆ ಐಪಿಎಲ್ ಚಾನ್ಸ್​?

Vijay Hazare Trophy 2021 Top Scorer: ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಬ್ಯಾಟರ್​ಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿ ಬಂದಿತ್ತು. ಇದಕ್ಕೆ ಸಾಕ್ಷಿಯೇ ಈ ಸಲ 22 ಮಂದಿ 300 ಕ್ಕೂ ಅಧಿಕ ರನ್​ ಕಲೆಹಾಕಿರುವುದು.

1/8
2021 ರ ವಿಜಯ್ ಹಜಾರೆ ಟೂರ್ನಿಗೆ ತೆರೆಬಿದ್ದಿದೆ. ದೇಶೀಯ ಅಂಗಳದ ಬಲಿಷ್ಠ ತಂಡ ಎನಿಸಿಕೊಂಡಿರುವ ತಮಿಳುನಾಡು ವಿರುದ್ದ ವಿಜೆಡಿ ನಿಯಮದನ್ವಯ 11 ರನ್​ಗಳ ರೋಚಕ ಜಯ ಸಾಧಿಸುವ ಮೂಲಕ ಹಿಮಾಚಲ ಪ್ರದೇಶ ಚೊಚ್ಚಲ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಅದರಲ್ಲೂ ಟೂರ್ನಿಯುದ್ದಕ್ಕೂ ಆಲ್​ರೌಂಡರ್​ ಆಟವಾಡಿದ ಹಿಮಾಚಲ ಪ್ರದೇಶ ತಂಡದ ನಾಯಕ ರಿಷಿ ಧವನ್ ಟ್ರೋಫಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.

2/8
ಇನ್ನು ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಬ್ಯಾಟರ್​ಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿ ಬಂದಿತ್ತು. ಇದಕ್ಕೆ ಸಾಕ್ಷಿಯೇ ಈ ಸಲ 22 ಮಂದಿ 300 ಕ್ಕೂ ಅಧಿಕ ರನ್​ ಕಲೆಹಾಕಿರುವುದು. ಆದರೆ ಟಾಪ್ ರನ್​ ಸ್ಕೋರರ್​ಗಳ ಪಟ್ಟಿಯಲ್ಲಿ ಕೇವಲ 5 ಪಂದ್ಯಗಳನ್ನಾಡಿದ ರುತುರಾಜ್ ಗಾಯಕ್ವಾಡ್ ಇರುವುದು ವಿಶೇಷ. ಹಾಗಿದ್ರೆ ಈ ಸಲ ವಿಜಯ್ ಹಜಾರೆ ಟೂರ್ನಿಯ ಟಾಪ್ 5 ಬ್ಯಾಟರ್​ಗಳು ಯಾರೆಂದು ನೋಡೋಣ...

3/8
1- ರುತುರಾಜ್ ಗಾಯಕ್ವಾಡ್: ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಈ ಸಲ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದರು. ಅಲ್ಲದೆ 603 ರನ್ ಕಲೆಹಾಕುವ ಮೂಲಕ ಟಾಪ್ ರನ್​ ಸ್ಕೋರರ್ ಎನಿಸಿಕೊಂಡಿದ್ದಾರೆ.

4/8
2- ರಿಷಿ ಧವನ್: ಹಿಮಾಚಲ ಪ್ರದೇಶ ತಂಡದ ನಾಯಕ ರಿಷಿ ಧವನ್ ಈ ಬಾರಿ ಆಲ್​ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದರು. ರಿಷಿ 8 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ ಒಟ್ಟು 458 ರನ್​ ಕಲೆಹಾಕುವ ಮೂಲಕ 2ನೇ ಟಾಪ್ ರನ್​ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

5/8
3- ಪ್ರಶಾಂತ್ ಚೋಪ್ರಾ: ಹಿಮಾಚಲ ಪ್ರದೇಶ ತಂಡದ ಮತ್ತೋರ್ವ ಆಟಗಾರ ಪ್ರಶಾಂತ್ ಚೋಪ್ರಾ ಕೂಡ 8 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ  ಒಟ್ಟು 456	ರನ್ ಕಲೆಹಾಕಿದ್ದಾರೆ.

6/8
4- ಶುಭಂ ಶರ್ಮಾ: ಮಧ್ಯ ಪ್ರದೇಶ ತಂಡದ ಆಟಗಾರ ಶುಭಂ ಶರ್ಮಾ 6 ಪಂದ್ಯಗಳಿಂದ 1 ಶತಕ ಹಾಗೂ 4 ಅರ್ಧಶತಕದೊಂದಿಗೆ ಒಟ್ಟು 418 ರನ್ ಬಾರಿಸಿದ್ದಾರೆ.

7/8
5- ಮನನ್ ವೋಹ್ರಾ: ಚಂಡೀಗಢ್ ತಂಡದ ನಾಯಕ ಮನನ್ ವೋಹ್ರಾ ಕೂಡ ಈ ಬಾರಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಅದರಂತೆ 5 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಬಾರಿಸಿದ್ದರು. ಈ ಮೂಲಕ ಒಟ್ಟು 379 ರನ್ ಕಲೆಹಾಕಿದ್ದರು.

8/8
ಈ ಐವರು ಬ್ಯಾಟರ್​ಗಳಲ್ಲಿ ರುತುರಾಜ್ ಗಾಯಕ್ವಾಡ್ (ಸಿಎಸ್​ಕೆ) ಮಾತ್ರ ಐಪಿಎಲ್​ ತಂಡದ ಭಾಗವಾಗಿದ್ದಾರೆ. ಹೀಗಾಗಿ ಉಳಿದಿರುವ ಈ ನಾಲ್ವರು ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಲು ಐಪಿಎಲ್​ ಫ್ರಾಂಚೈಸಿಗಳು ಆಸಕ್ತಿ ತೋರಲಿದ್ದು, ಯಾರಿಗೆ ಯಾವ ತಂಡದಲ್ಲಿ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.

Click on your DTH Provider to Add TV9 Kannada