IND vs ENG: ಸಚಿನ್ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್ ಕೊಹ್ಲಿ

Updated on: Jul 17, 2026 | 7:29 PM

Virat Kohli records: ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು 50+ ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಅವರು ಈಗ 33 ಬಾರಿ 50+ ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ, ಸೆನಾ ದೇಶಗಳಲ್ಲಿ ಅತಿ ಹೆಚ್ಚು 50+ ಸ್ಕೋರ್‌ ಗಳಿಸಿದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

1 / 6
ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸೋತಿರಬಹುದು. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಕಾರ್ಡಿಫ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ಕೊಹ್ಲಿ, ಇದರೊಂದಿಗೆ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ರನ್​ಗಳ ಇನ್ನಿಂಗ್ಸ್ ಆಡಿದ ಸಾಧನೆಯನ್ನೂ ಮಾಡಿದರು(PC-PTI).

2 / 6
ವಿರಾಟ್ ಕೊಹ್ಲಿ ಈಗ ಇಂಗ್ಲೆಂಡ್‌ನಲ್ಲಿ 33 ಬಾರಿ ಐವತ್ತು ಪ್ಲಸ್ ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ. 111 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ಕೊಹ್ಲಿ, ಇಂಗ್ಲೆಂಡ್‌ನಲ್ಲಿ 90 ಇನ್ನಿಂಗ್ಸ್‌ಗಳಲ್ಲಿ 32 ಬಾರಿ ಐವತ್ತು ಪ್ಲಸ್ ರನ್​​ಗಳ ಇನ್ನಿಂಗ್ಸ್ ಆಡಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಅವರು ಹಿಂದಿಕ್ಕಿದ್ದಾರೆ(PC-PTI).

3 / 6
ಇವರಿಬ್ಬರ ನಂತರ ರಾಹುಲ್ ದ್ರಾವಿಡ್ 67 ಇನ್ನಿಂಗ್ಸ್‌ಗಳಲ್ಲಿ 26 ಬಾರಿ ಐವತ್ತು ಪ್ಲಸ್ ರನ್​ಗಳ ಇನ್ನಿಂಗ್ಸ್ ಮತ್ತು ಎಂಎಸ್ ಧೋನಿ ಇಂಗ್ಲೆಂಡ್‌ನಲ್ಲಿ 93 ಇನ್ನಿಂಗ್ಸ್‌ಗಳಲ್ಲಿ 24 ಬಾರಿ ಐವತ್ತು ಪ್ಲಸ್ ರನ್​​ಗಳ ಇನ್ನಿಂಗ್ಸ್ ಆಡಿದ್ದಾರೆ(PC-PTI).

4 / 6
ವಿರಾಟ್ ಕೊಹ್ಲಿ ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 232 ಬಾರಿ ಐವತ್ತು ಪ್ಲಸ್ ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ವಿಚಾರದಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 264 ಬಾರಿ ಐವತ್ತು ಪ್ಲಸ್ ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ(PC-PTI).

5 / 6
ಆದಾಗ್ಯೂ, ವಿರಾಟ್ ಕೊಹ್ಲಿ ಸೆನಾ ದೇಶಗಳಲ್ಲಿ ಅತಿ ಹೆಚ್ಚು ಬಾರಿ ಐವತ್ತು ಪ್ಲಸ್ ಸ್ಕೋರ್‌ ದಾಖಲಿಸಿದ ಏಷ್ಯಾದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಸೆನಾ ದೇಶಗಳಲ್ಲಿ ಕೊಹ್ಲಿ 76 ಬಾರಿ ಐವತ್ತು ಪ್ಲಸ್ ರನ್​​ಗಳ ಇನ್ನಿಂಗ್ಸ್ ಆಡಿದ್ದಾರೆ(PC-PTI).

6 / 6
ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ತಮ್ಮ ಕೊನೆಯ ಒಂಬತ್ತು ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳು ಸೇರಿದಂತೆ ಎಂಟು ಅರ್ಧಶತಕಗಳನ್ನು ಬಾರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಐದು ರನ್‌ಗಳಿಗೆ ಔಟಾಗಿದ್ದ ಕೊಹ್ಲಿ, ಎರಡನೇ ಪಂದ್ಯದಲ್ಲಿ 65 ರನ್​ಗಳ ಇನ್ನಿಂಗ್ಸ್ ಆಡಿದರು(PC-PTI).

Follow Us