RCB ತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿದ ಅನುಷ್ಕಾ ಶರ್ಮಾ

Edited By:

Updated on: May 01, 2022 | 7:30 PM

Virat Kohli-Anushka Sharma: ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು ಶಾರುಖ್ ನಟನೆಯ ‘ಜೀರೋ’ ಚಿತ್ರದಲ್ಲಿ. ನಂತರ ಅವರು ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು.

1 / 5
ಆರ್​ಸಿಬಿ ತಂಡದ ಸ್ಟಾರ್ ಆಟಗಾರ (Virat Kohli) ತಮ್ಮ ಪತ್ನಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ (Anushka Sharma) ಅವರ 31ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಅದು ಕೂಡ ಆರ್​ಸಿಬಿ ತಂಡದ ಆಟಗಾರರೊಂದಿಗೆ ಎಂಬುದು ವಿಶೇಷ.

ಆರ್​ಸಿಬಿ ತಂಡದ ಸ್ಟಾರ್ ಆಟಗಾರ (Virat Kohli) ತಮ್ಮ ಪತ್ನಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ (Anushka Sharma) ಅವರ 31ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಅದು ಕೂಡ ಆರ್​ಸಿಬಿ ತಂಡದ ಆಟಗಾರರೊಂದಿಗೆ ಎಂಬುದು ವಿಶೇಷ.

2 / 5

ಅಂದರೆ ಆರ್​ಸಿಬಿ ತಂಡದ ಬಯೋಬಬಲ್​ನಲ್ಲೇ ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬವನ್ನು ವಿರಾಟ್ ಕೊಹ್ಲಿ ಆಚರಿಸಿದ್ದಾರೆ. ಇದೇ ವೇಳೆ ಸಿದ್ದಾರ್ಥ್ ಕೌಲ್ ದಂಪತಿ, ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಪಲ್ಲಿಕಲ್, ಫಾಫ್ ಡುಪ್ಲೆಸಿಸ್, ಕೋಚ್ ಸಂಜಯ್ ಬಂಗಾರ್, ಹರ್ಷಲ್ ಪಟೇಲ್ ಸೇರಿದಂತೆ ಆರ್​ಸಿಬಿ ತಂಡ ಪ್ರಮುಖರು ಹಾಜರಿದ್ದರು.

3 / 5

ಇದೀಗ ಬರ್ತ್​ಡೇ ಸೆಲೆಬ್ರೇಷನ್ ಫೋಟೋವನ್ನು ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೀ ಜನಿಸಿದಕ್ಕೆ ದೇವರಿಗೆ ಧನ್ಯವಾದಗಳು. ಏಕೆಂದರೆ ನೀ ಇಲ್ಲದಿರದಿದ್ರೆ ನಾನು ಮಾಡುತ್ತಿದ್ದೇ ಎಂಬುದೇ ನಂಗೆ ಗೊತ್ತಿಲ್ಲ. ನಿನ್ನ ಸೌಂದರ್ಯದಂತೆ ನಿನ್ನ ಮನಸೂ ಕೂಡ ಸುಂದರ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

4 / 5

ಅನುಷ್ಕಾ ಶರ್ಮಾ ಸದ್ಯ ಆರ್​ಸಿಬಿ ತಂಡದೊಂದಿಗೆ ಇದ್ದು, ಆರ್​ಸಿಬಿ ಪಂದ್ಯದ ವೇಳೆ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸುತ್ತಾ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಬಾಲಿವುಡ್​ಗೂ ಕಂಬ್ಯಾಕ್ ಮಾಡಲಿದ್ದಾರೆ. ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು ಶಾರುಖ್ ನಟನೆಯ ‘ಜೀರೋ’ ಚಿತ್ರದಲ್ಲಿ. ನಂತರ ಅವರು ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು.

5 / 5

ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರದಲ್ಲಿ ಅನುಷ್ಕಾ ಬಣ್ಣಹಚ್ಚಿದ್ದಾರೆ. ‘ಚಕ್​ಡಾ ಎಕ್ಸ್​ಪ್ರೆಸ್’ ಹೆಸರಿನ ಈ ಚಿತ್ರವು ಶೀಘ್ರದಲ್ಲೇ ತೆರೆಕಾಣಲಿದೆ.

Loading...
Unable to load recommendations.
Follow Us