Virat Kohli: ಸಚಿನ್ ಅಷ್ಟೇ ಬಾಕಿ, ದ್ರಾವಿಡ್‌ಗೆ ಸಡ್ಡು ಹೊಡೆದ ಕಿಂಗ್‌ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: Oct 25, 2022 | 10:54 PM

T20 World Cup 2022: ಈ ಭರ್ಜರಿ ಇನಿಂಗ್ಸ್​ ಮೂಲಕ ವಿರಾಟ್ ತಮ್ಮ ವಿರಾಟ ರೂಪ ದರ್ಶನ ಮಾಡಿದ್ದಲ್ಲದೇ ಹಲವು ವಿಶ್ವ ದಾಖಲೆಯನ್ನು ಕೂಡ ಬರೆದಿದ್ದರು. ಅದರಲ್ಲಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೂ ಕೂಡ ಹಿಂದಿಕ್ಕಿರುವುದು ವಿಶೇಷ.

1 / 7
ಮೆಲ್ಬೋರ್ನ್​ನಲ್ಲಿ ಭಾನುವಾರ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ರೂವಾರಿ ಕಿಂಗ್ ಕೊಹ್ಲಿ. ಕೇವಲ 53 ಎಸೆತಗಳಲ್ಲಿ ಅಜೇಯ 82 ರನ್​ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು.

2 / 7
ಈ ಭರ್ಜರಿ ಇನಿಂಗ್ಸ್​ ಮೂಲಕ ವಿರಾಟ್ ತಮ್ಮ ವಿರಾಟ ರೂಪ ದರ್ಶನ ಮಾಡಿದ್ದಲ್ಲದೇ ಹಲವು ವಿಶ್ವ ದಾಖಲೆಯನ್ನು ಕೂಡ ಬರೆದಿದ್ದರು. ಅದರಲ್ಲಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೂ ಕೂಡ ಹಿಂದಿಕ್ಕಿರುವುದು ವಿಶೇಷ.

3 / 7
ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 664 ಪಂದ್ಯಗಳಲ್ಲಿ 34,357 ರನ್ ಕಲೆಹಾಕಿದ್ದಾರೆ.

4 / 7
ಇದರ ಬಳಿಕ 2ನೇ ಸ್ಥಾನದಲ್ಲಿದ್ದದ್ದು ರಾಹುಲ್ ದ್ರಾವಿಡ್. ಟೀಮ್ ಇಂಡಿಯಾ ಮಹಾ ಗೋಡೆ ದ್ರಾವಿಡ್ 404 ಪಂದ್ಯಗಳಿಂದ ಒಟ್ಟು 24,064 ರನ್​ ಬಾರಿಸಿ ದಾಖಲೆ ನಿರ್ಮಿಸಿದ್ದರು.

5 / 7
ಆದರೀಗ ಇದೀಗ ಈ ದಾಖಲೆಯನ್ನು ದಾಟಿ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಂದರೆ ವಿರಾಟ್ ಕೊಹ್ಲಿ 471 ಪಂದ್ಯಗಳಿಂದ ಒಟ್ಟು 24,078 ರನ್ ಬಾರಿಸಿ ಸಚಿನ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ 2ನೇ ಭಾರತೀಯ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

6 / 7
ಈ ಮೂಲಕ ರಾಹುಲ್ ದ್ರಾವಿಡ್ ಅವರನ್ನು 3ನೇ ಸ್ಥಾನಕ್ಕೆ ದೂಡಿ ವಿರಾಟ್ ಕೊಹ್ಲಿ ಭಾರತೀಯ ರನ್​ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದಾಗ್ಯೂ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ 10,279 ರನ್​ಗಳ ಅವಶ್ಯಕತೆಯಿದೆ.

7 / 7
ಆದರೆ ಐಸಿಸಿ ಟೂರ್ನಿಗಳಲ್ಲಿ ಅತ್ಯಧಿಕ 50+ ರನ್​ ಬಾರಿಸಿದ ವಿಶ್ವ ದಾಖಲೆಯನ್ನು ಕೂಡ ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ ತೆಂಡೂಲ್ಕರ್ ಐಸಿಸಿ ಟೂರ್ನಿಗಳಲ್ಲಿ ಒಟ್ಟು 23 ಬಾರಿ 50+ ಸ್ಕೋರ್ ಕಲೆಹಾಕಿದ್ದಾರೆ. ಇದೀಗ ಕಿಂಗ್ ಕೊಹ್ಲಿ ಐಸಿಸಿ ಟೂರ್ನಿಯಲ್ಲಿ ಒಟ್ಟು 24 ಬಾರಿ 50+ ಸ್ಕೋರ್ ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.