Virat Kohli: ಮೈದಾನಕ್ಕಿಳಿಯದೇ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: Jan 24, 2024 | 9:23 AM

Virat Kohli Records: ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಆದರೆ ಈ ಬಾರಿ ಮೈದಾನಕ್ಕಿಳಿಯದೇ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

1 / 6
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2023 ರ ಸಾಲಿನ ತಂಡಗಳನ್ನು ಹೆಸರಿಸಿದೆ. ಮೂರು ಸ್ವರೂಪಗಳಲ್ಲಿ ಪ್ರಕಟಿಸಲಾಗಿರುವ ಈ ತಂಡಗಳಲ್ಲಿ ಭಾರತೀಯ ಆಟಗಾರರದ್ದೇ ಕಾರುಬಾರು. ಅದರಲ್ಲೂ ಐಸಿಸಿ ವರ್ಷದ ಏಕದಿನ ತಂಡದಲ್ಲಿ ಟೀಮ್ ಇಂಡಿಯಾದ (Team India) ಆರು ಆಟಗಾರರು ಕಾಣಿಸಿಕೊಂಡಿದ್ದಾರೆ.

2 / 6
ಈ 6 ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕಳೆದ ವರ್ಷ ಏಕದಿನ ಕ್ರಿಕೆಟ್​ನಲ್ಲಿ 24 ಇನಿಂಗ್ಸ್ ಆಡಿದ್ದ ಕಿಂಗ್ ಕೊಹ್ಲಿ 1377 ರನ್ ಕಲೆಹಾಕಿದ್ದರು. ಈ ವೇಳೆ 6 ಭರ್ಜರಿ ಶತಕ ಹಾಗೂ 8 ಅರ್ಧಶತಕಗಳನ್ನು ಬಾರಿಸಿದ್ದರು.

3 / 6
ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಕಿಂಗ್ ಕೊಹ್ಲಿ ಐಸಿಸಿ ವರ್ಷದ ಏಕದಿನ ತಂಡದ ಭಾಗವಾಗಿದ್ದಾರೆ. ಇದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಐಸಿಸಿ ತಂಡದ ಭಾಗವಾದ ಆಟಗಾರ ಎಂಬ ವಿಶ್ವ ದಾಖಲೆಯೊಂದು ವಿರಾಟ್ ಕೊಹ್ಲಿ ಪಾಲಾಗಿದೆ.

4 / 6
ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. 2004 ರಿಂದ 2019 ರವರೆಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಧೋನಿ ಒಟ್ಟು 13 ಬಾರಿ ಐಸಿಸಿ ತಂಡಗಳ ಭಾಗವಾಗಿದ್ದರು. ಇದೀಗ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ.

5 / 6
2008 ರಲ್ಲಿ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿರುವ ಕಿಂಗ್ ಕೊಹ್ಲಿ ಇದುವರೆಗೆ 14 ಬಾರಿ ಐಸಿಸಿ ತಂಡಗಳ ಭಾಗವಾಗಿದ್ದಾರೆ. ಈ ಮೂಲಕ ಐಸಿಸಿ ಟೀಮ್ ಆಫ್ ಇಯರ್​ನಲ್ಲಿ ಅತ್ಯಧಿಕ ಬಾರಿ ಕಾಣಿಸಿಕೊಂಡ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

6 / 6
ಐಸಿಸಿ 2023ರ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ/ಭಾರತ), ಶುಭ್​ಮನ್ ಗಿಲ್ (ಭಾರತ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ವಿರಾಟ್ ಕೊಹ್ಲಿ (ಭಾರತ), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್), ಹೆನ್ರಿಕ್ ಕ್ಲಾಸೆನ್ (ಸೌತ್ ಆಫ್ರಿಕಾ), ಮಾರ್ಕೊ ಯಾನ್ಸೆನ್ (ಸೌತ್ ಆಫ್ರಿಕಾ), ಆ್ಯಡಂ ಝಂಪಾ (ಆಸ್ಟ್ರೇಲಿಯಾ, ಮೊಹಮ್ಮದ್ ಸಿರಾಜ್ (ಭಾರತ), ಕುಲ್ದೀಪ್ ಯಾದವ್ (ಭಾರತ), ಮೊಹಮ್ಮದ್ ಶಮಿ (ಭಾರತ).