ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ 3 ಪಂದ್ಯಗಳ ಏಕದಿನ ಸರಣಿಯು ಜುಲೈ 27 ರಿಂದ ಶುರುವಾಗಲಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದ ಮೂಲಕ ಶುಭಾರಂಭ ಮಾಡುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
ಮತ್ತೊಂದೆಡೆ ಈ ಪಂದ್ಯದ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ ಶತಕದ ಸಂಖ್ಯೆಯನ್ನು ಎರಡಂಕಿಗೆ ಏರಿಸುವ ವಿಶ್ವಾಸದಲ್ಲಿದ್ದಾರೆ ಕಿಂಗ್ ಕೊಹ್ಲಿ. ಅಂದರೆ ವಿಂಡೀಸ್ ವಿರುದ್ಧ ಅತ್ಯಧಿಕ ಶತಕ ಬಾರಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಯಾವುದೇ ಬ್ಯಾಟರ್ 10 ಶತಕಗಳನ್ನು ಬಾರಿಸಿಲ್ಲ.
ಇದೀಗ ಮೊದಲ ಏಕದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮೂರಂಕಿ ಮೊತ್ತಗಳಿಸಿದರೆ ವಿಂಡೀಸ್ ವಿರುದ್ಧ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿ ಈ ಕೆಳಗಿನಂತಿದೆ.
1- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒಟ್ಟು 41 ಏಕದಿನ ಇನಿಂಗ್ಸ್ ಆಡಿದ್ದಾರೆ. ಈ ವೇಳೆ 9 ಬಾರಿ ಶತಕ ಸಿಡಿಸಿದ್ದರು ಎಂಬುದು ವಿಶೇಷ.
2- ಸಚಿನ್ ತೆಂಡೂಲ್ಕರ್: ವಿಂಡೀಸ್ ವಿರುದ್ಧ 39 ಪಂದ್ಯಗಳನ್ನಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 4 ಶತಕ ಸಿಡಿಸಿದ್ದಾರೆ.
3- ರೋಹಿತ್ ಶರ್ಮಾ: ವೆಸ್ಟ್ ಇಂಡೀಸ್ ವಿರುದ್ಧ 34 ಏಕದಿನ ಇನಿಂಗ್ಸ್ ಆಡಿರುವ ಹಿಟ್ಮ್ಯಾನ್ 3 ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
4- ರಾಹುಲ್ ದ್ರಾವಿಡ್: ವಿಂಡೀಸ್ ವಿರುದ್ಧ 38 ಏಕದಿನ ಇನಿಂಗ್ಸ್ ಆಡಿರುವ ರಾಹುಲ್ ದ್ರಾವಿಡ್ 3 ಬಾರಿ ಶತಕಗಳನ್ನು ಬಾರಿಸಿದ್ದಾರೆ.
5- ಯುವರಾಜ್ ಸಿಂಗ್: ಏಕದಿನ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 27 ಇನಿಂಗ್ಸ್ ಆಡಿರುವ ಯುವರಾಜ್ ಸಿಂಗ್ 3 ಶತಕಗಳನ್ನು ಸಿಡಿಸಿದ್ದಾರೆ.