Virat Kohli: ಕೊಹ್ಲಿಯ ಶತಕದ ವೈಭವ: ವಿರಾಟ ಪ್ರದರ್ಶನದ ರೋಚಕ ಫೋಟೋಗಳು ಇಲ್ಲಿದೆ ನೋಡಿ

| Updated By: Vinay Bhat

Updated on: Sep 09, 2022 | 9:40 AM

India vs Aghanistan, Asia Cup 2022: ಏಷ್ಯಾಕಪ್ 2022 ರಲ್ಲಿ ಭಾರತ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಗುರುವಾರ ಅಫ್ಘಾನಿಸ್ತಾನ ವಿರುದ್ಧ ಅಮೋಘ 101 ರನ್ ಗಳ ಜಯ ದಾಖಲಿಸಿ ಟೂರ್ನಿಗೆ ವಿದಾಯ ಹೇಳಿತು. ಭಾರತ ಫೈನಲ್ ತಲುಪದೆ ಬೇಗನೆ ನಿರ್ಗಮಿಸಿತು ಎಂಬ ನೋವನ್ನು ಕಮ್ಮಿ ಮಾಡಿದ್ದು ವಿರಾಟ್ ಕೊಹ್ಲಿಯ ಶತಕ.

1 / 10
ಏಷ್ಯಾಕಪ್ 2022 ರಲ್ಲಿ ಭಾರತ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಗುರುವಾರ ಅಫ್ಘಾನಿಸ್ತಾನ ವಿರುದ್ಧ ಅಮೋಘ 101 ರನ್ ಗಳ ಜಯ ದಾಖಲಿಸಿ ಟೂರ್ನಿಗೆ ವಿದಾಯ ಹೇಳಿತು. ಭಾರತ ಫೈನಲ್ ತಲುಪದೆ ಬೇಗನೆ ನಿರ್ಗಮಿಸಿತು ಎಂಬ ನೋವನ್ನು ಕಮ್ಮಿ ಮಾಡಿದ್ದು ವಿರಾಟ್ ಕೊಹ್ಲಿಯ ಶತಕ.

2 / 10
1021 ದಿನಗಳ ಬಳಿಕ ವಿರಾಟ್ ಕೊಹ್ಲಿ ಬ್ಯಾಟ್ ​ನಿಂದ ಕೊನೆಗೂ ಶತಕವೊಂದು ಮೂಡಿಬಂತು. ಅದುಕೂಡ 120 ಎಸೆತಗಳಿರುವ ಟಿ20 ಕ್ರಿಕೆಟ್ ನಲ್ಲಿ ಎಂಬುದು ವಿಶೇಷ. ಆರಂಭಿಕನನಾಗಿ ಕಣಕ್ಕಿಳಿದು ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ ಸೆಟಲ್ ಆದ ಮೇಲೆ ತಮ್ಮ ವಿರಾಟ್ ರೂಪ ಪ್ರದರ್ಶಿಸಿದರು.

3 / 10
ಕೇವಲ 61 ಎಸೆತಗಳಲ್ಲಿ 12 ಬೌಂಡರಿ, 6 ಅಮೋಘ ಸಿಕ್ಸರ್ ಸಹಿತ ಅಜೇಯ 122 ರನ್ ಚಚ್ಚಿದ ಕೊಹ್ಲಿ 200 ಸ್ಟ್ರೈಕ್‌ ರೇಟ್‌ ನಲ್ಲಿ ಬ್ಯಾಟ್ ಬೀಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು. ಇದು ಟಿ20 ವಿಶ್ವಕಪ್ ಗೂ ಮುನ್ನ ಭಾರತಕ್ಕೆ ಸಿಕ್ಕ ಶುಭಸುದ್ದಿಯೂ ಹೌದು.

4 / 10
ಕೊಹ್ಲಿ ಸಿಕ್ಸ್ ಸಿಡಿಸಿ ಶತಕ ಬಾರಿಸುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಎದ್ದು ನಿಂತು ಗೌರವ ಸೂಚಿಸಿತು. ಇನ್ನಿಂಗ್ಸ್​ ಮುಗಿಸಿ ಪೆವಿಲಿಯನ್ ​ಗೆ ಬಂದಾಗ ಬೌಂಡರಿ ಲೈನ್ ಬಳಿಕ ಭಾರತೀಯ ಆಟಗಾರರು ಕೊಹ್ಲಿಗೆ ಶುಭಕೋರಿದರು. ಅಫ್ಘಾನ್ ಆಟಗಾರರು ಕೂಡ ಕೊಹ್ಲಿಯ ಮನಮೋಹಕ ಆಟಕ್ಕೆ ಮನಸೋತರು.

5 / 10
ಟ್ವಿಟರ್ ನಲ್ಲಿ ಈಗಲೂ ಟ್ರೆಂಡಿಂಗ್ ನಲ್ಲಿರುವ ಕಿಂಗ್ ಕೊಹ್ಲಿ, ನನ್ನ ಈ ಶತಕವನ್ನು ನಾನು ಅನುಷ್ಕಾ ಹಾಗೂ ಮಗಳು ವಾಮಿಕಾಗೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಈ ಶತಕಕ್ಕೆ ನನ್ನ ತಂಡ ನನಗೆ ಸಾಕಷ್ಟು ಸಹಾಯ ಮಾಡಿದೆ ಎಂಬುದನ್ನು ನೆನಪಿಸಿಕೊಂಡರು.

6 / 10
ಇಂದು ನಾನು ಫೀಲ್ಡಿನಲ್ಲಿದ್ದರೆ ಅದಕ್ಕೆ ಅನುಷ್ಕಾ ಕಾರಣ. ನಾನು ಇಂದು ಇಲ್ಲಿ ನಿಂತಿರುವುದು ಕೇವಲ ಒಬ್ಬ ವ್ಯಕ್ತಿಯಿಂದಾಗಿ, ಆ ವ್ಯಕ್ತಿ ಬೇರ್ಯಾರು ಅಲ್ಲ, ಅವರೇ ಅನುಷ್ಕಾ. ಈ ಶತಕ ಅವರಿಗೆ ಅರ್ಪಣೆ. ಟಿ20 ಮಾದರಿಯಲ್ಲಿ ಶತಕ ಬಂದಿರುವುದು ನನಗೆ ಆಶ್ಚರ್ಯ ತಂದಿದೆ. ಎರಡೂವರೆ ವರ್ಷಗಳಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ - ವಿರಾಟ್ ಕೊಹ್ಲಿ.

7 / 10
ಕೊಹ್ಲಿಯ ಈ ಶತಕದ ಮೂಲಕ ಹಲವು ದಾಖಲೆಗಳು ಕೂಡ ನಿರ್ಮಾಣವಾದವು. ಅದರಲ್ಲಿ ಮುಖ್ಯವಾಗಿ, ಕೊಹ್ಲಿ ಈಗ ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ ವಿಚಾರದಲ್ಲಿ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

8 / 10
ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಆಟಗಾರ ಕೊಹ್ಲಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ಗಳಿಸಿದ್ದ 118 ರನ್ ದಾಖಲೆಯಾಗಿತ್ತು. ಅಂತೆಯೆ ಅಂತರರಾಷ್ಟ್ರೀಯ ಟಿ20ಯಲ್ಲಿ ಶತಕ ಸಿಡಿಸಿದ ಅತಿ ಹಿರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

9 / 10
ಶತಕ ಸಿಡಿಸಿದ ವೇಳೆ ರಿಷಭ್ ಪಂತ್ ಸಂಭ್ರಮಿಸುತ್ತಿರುವ ವಿರಾಟ್ ಕೊಹ್ಲಿ.

10 / 10
ವಿರಾಟ್ ಕೊಹ್ಲಿ ಬ್ಯಾಟ್ ಎತ್ತಿ ಖುಷಿ ಹಂಚಿಕೊಂಡ ಕ್ಷಣ.

Published On - 9:40 am, Fri, 9 September 22