- Kannada News Photo gallery Cricket photos Virat Kohli made three special six a wonderful coincidence seen in Dubai
Virat Kohli: 6,6,6… ಟಿ20 ಕ್ರಿಕೆಟ್ನಲ್ಲಿ ಟ್ರಿಪಲ್ ಸಿಕ್ಸರ್ ಬಾರಿಸಿದ ಕಿಂಗ್ ಕೊಹ್ಲಿ..! ಹೀಗೊಂದು ಕಾಕತಾಳೀಯ
Virat Kohli: ನಿನ್ನೆಯ ಶತಕದೊಂದಿಗೆ ವಿರಾಟ್ ಕೊಹ್ಲಿ ಟಿ20 ವೃತ್ತಿಜೀವನದಲ್ಲಿ ಆರನೇ ಶತಕ ದಾಖಲಿಸಿದ್ದಾರೆ. ತಮ್ಮ ಶತಕವನ್ನು ಸಿಕ್ಸರ್‌ನೊಂದಿಗೆ ಪೂರ್ಣಗೊಳಿಸಿದ ಕೊಹ್ಲಿ, ಅದೇ ಸಮಯದಲ್ಲಿ 6 ವರ್ಷಗಳ ನಂತರ ಟಿ20 ಕ್ರಿಕೆಟ್ನಲ್ಲಿ ತಮ್ಮ ಅತ್ಯಧಿಕ ಸ್ಕೋರ್ ಅನ್ನು ಬದಲಾಯಿಸಿದರು.
Updated on:Sep 09, 2022 | 7:28 PM

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ಅವಕಾಶ ಸಿಗುವುದು ಖಚಿತ. ಒಂದು ವೇಳೆ ಕೊಹ್ಲಿ ಈ ಮೂರು ಪಂದ್ಯಗಳಿಂದ ಕೇವಲ 98 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ 11,000 ರನ್ ಗಳಿಸಿದ ದಾಖಲೆ ಬರೆಯಲಿದ್ದಾರೆ.

ವಿರಾಟ್ ಕೊಹ್ಲಿ ಏಷ್ಯಾಕಪ್ 2022 ರಲ್ಲಿ ಭರ್ಜರಿ ಫಾರ್ಮ್ಗೆ ಮರಳಿದ್ದಾರೆ. 3 ವರ್ಷಗಳಿಂದ ಕಾಯುತ್ತಿದ್ದ ಶತಕದ ಆಸೆಯನ್ನು ಪೂರೈಸಿಕೊಂಡ ಕೊಹ್ಲಿ, ಈ ಟೂರ್ನಿಯಲ್ಲಿ 2 ಅರ್ಧ ಶತಕ ಹಾಗೂ 1 ಶತಕ ಸಿಡಿಸಿದ್ದರು. ಇದೀಗ ಆಸ್ಟ್ರೇಲಿಯ ವಿರುದ್ಧ ತನ್ನ ಶಕ್ತಿ ಪ್ರದರ್ಶನಕ್ಕೆ ಕೊಹ್ಲಿ ಸಜ್ಜಾಗಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ವಿಶೇಷ ದಾಖಲೆಯನ್ನೂ ಮಾಡುವ ಹೊಸ್ತಿನಲಿದ್ದಾರೆ.

ವಿರಾಟ್ ಕೊಹ್ಲಿ ಅವರ T20 ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಈಗ 122 ರನ್ ಆಗಿದೆ. ಇದಕ್ಕೂ ಮುನ್ನ 2016ರಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 113 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಟಿ20ಯಲ್ಲಿ ಕೊಹ್ಲಿ 59.83 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರೆ, ಅವರ ಸ್ಟ್ರೈಕ್ ರೇಟ್ 146.23 ಆಗಿದೆ.

IND vs PAK The Photos of India vs Pakistan Match in Asia Cup 2022 Super 4
Published On - 7:28 pm, Fri, 9 September 22




