
ಬಾಲಿವುಡ್ ನಟಿ ಅವನೀತ್ ಕೌರ್ (Avneet Kaur) ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಮುಖ್ಯ ಕಾರಣ ವಿರಾಟ್ ಕೊಹ್ಲಿ (Virat Kohli). ಬೋಲ್ಡ್ ಫೋಟೋವೊಂದಕ್ಕೆ ಕಿಂಗ್ ಕೊಹ್ಲಿ ಲೈಕ್ ಒತ್ತಿದ್ದೇ ತಡ ಇನ್ಸ್ಟಾಗ್ರಾಮ್ನಲ್ಲಿ ಅವನೀತ್ ಕೌರ್ ಹೆಸರು ರಾರಾಜಿಸಲಾರಂಭಿಸಿದೆ.

23 ವರ್ಷದ ಅವನೀತ್ ಕೌರ್ ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಭಂಗಿಯ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗೆ ವಿರಾಟ್ ಕೊಹ್ಲಿ ತನ್ನ ಅಧಿಕೃತ ಖಾತೆಯಿಂದ ಲೈಕ್ ಒತ್ತಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳ ಅದರ ಸ್ಕ್ರೀನ್ ಶಾಟ್ ಅನ್ನು ವೈರಲ್ ಮಾಡಿದ್ದರು.

ವಿರಾಟ್ ಕೊಹ್ಲಿಯ ಲೈಕ್ ಬೀಳುತ್ತಿದ್ದಂತೆ ಅವನೀತ್ ಕೌರ್ ಕೂಡ ಸುದ್ದಿಯಾದರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್, ಲೈಕ್ ಒತ್ತಲು ಹಿಂದೇಟು ಹಾಕುವ ಕೊಹ್ಲಿ, ಅವನೀತ್ ಅವರ ಬೋಲ್ಡ್ ಫೋಟೋಗೆ ಬೌಲ್ಡ್ ಆಗಿದ್ದಾರೆ ಎಂಬ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.

ಈ ಬಗ್ಗೆ ಇದೀಗ ವಿರಾಟ್ ಕೊಹ್ಲಿ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ. ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಿನಿಂದಾಗಿ ಅವನೀತ್ ಕೌರ್ ಅವರ ಫೋಟೋಗೆ ಲೈಕ್ ಒತ್ತಿರಬಹುದು. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡದಂತೆ ನಾನು ವಿನಂತಿಸುತ್ತೇನೆ. ನೀವು ಅರ್ಥಮಾಡಿಕೊಂಡಿರುವುದಕ್ಕೆ ಧನ್ಯವಾದಗಳು ಎಂದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಒತ್ತಿದ ಒಂದೇ ಒಂದು ಲೈಕ್ನಿಂದಾಗಿ ಅವನೀತ್ ಕೌರ್ ಇದೀಗ ಸಖತ್ ಸುದ್ದಿಯಾಗಿದ್ದಾರೆ. ಈ ಸುದ್ದಿ ಬೆನ್ನಲ್ಲೇ ಗೂಗಲ್ನಲ್ಲಿ ಅವನೀತ್ ಬಗ್ಗೆ ಹುಡುಕಾಟ ಕೂಡ ಶುರುವಾಗಿದೆ. ಹೀಗಾಗಿ ಕಿಂಗ್ ಕೊಹ್ಲಿಯ ಒಂದು ಲೈಕ್ ಯುವ ನಟಿಯ ಭವಿಷ್ಯವನ್ನೇ ಬದಲಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.