Virat Kohli: ಹೊಸ ವರ್ಷದಲ್ಲಿ ಕಿಂಗ್ ಕೊಹ್ಲಿ ಮುಂದಿದೆ 10 ದಾಖಲೆಗಳು
TV9 Web | Updated By: ಝಾಹಿರ್ ಯೂಸುಫ್
Updated on:
Jan 02, 2024 | 11:28 AM
Virat Kohli Records: ವಿರಾಟ್ ಕೊಹ್ಲಿ ಈ ವರ್ಷ ಹಲವು ದಾಖಲೆಗಳನ್ನು ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. 2024 ರಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಮೂಡಿಬರಲಿರುವ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
1 / 12
ಕ್ರಿಕೆಟ್ ಅಂಗಳದ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಹೊಸ ವರ್ಷವನ್ನು ಆರಂಭಿಸಲಿದ್ದಾರೆ. ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ವಿಶೇಷ ದಾಖಲೆ ಬರೆಯುವ ಅವಕಾಶ ಕಿಂಗ್ ಕೊಹ್ಲಿ ಮುಂದಿದೆ.
2 / 12
ಅಷ್ಟೇ ಅಲ್ಲದೆ ಈ ವರ್ಷ ಹಲವು ದಾಖಲೆಗಳನ್ನು ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ಹಾಗಿದ್ರೆ 2024 ರಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಮೂಡಿಬರಲಿರುವ ದಾಖಲೆಗಳಾವುವು ಎಂದು ನೋಡೋಣ...
3 / 12
1- ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರೆ, SENA ದೇಶಗಳಲ್ಲಿ (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ) ಅತೀ ಹೆಚ್ಚು 50+ ಸ್ಕೋರ್ಗಳಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಬಹುದು. SENA ದೇಶಗಳಲ್ಲಿ ಸಚಿನ್ ಒಟ್ಟು 74 ಬಾರಿ 50+ ಸ್ಕೋರ್ಗಳಿಸಿ ದಾಖಲೆ ನಿರ್ಮಿಸಿದ್ದರೆ, 73 ಬಾರಿ 50+ ಸ್ಕೋರ್ಗಳಿಸಿರುವ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
4 / 12
2 - ಏಕದಿನದಲ್ಲಿ 14000 ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಬೇಕಿರುವುದು ಕೇವಲ 152 ರನ್‌ಗಳು ಮಾತ್ರ. ಈ 152 ರನ್ಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 14 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ಕೊಹ್ಲಿ ಪಾಲಾಗಲಿದೆ.
5 / 12
3- ಟಿ20 ಕ್ರಿಕೆಟ್‌ನಲ್ಲಿ 12000 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ವಿರಾಟ್ ಕೊಹ್ಲಿಗೆ ಕೇವಲ 35 ರನ್‌ಗಳ ಅವಶ್ಯಕತೆಯಿದೆ. ಈ ಮೂಲಕ ಕ್ರಿಸ್ ಗೇಲ್, ಶೋಯೆಬ್ ಮಲಿಕ್ ಮತ್ತು ಕೀರನ್ ಪೊಲಾರ್ಡ್ ಈ ಸಾಧನೆ ಮಾಡಿದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
6 / 12
4- ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲು ವಿರಾಟ್ ಕೊಹ್ಲಿಗೆ ಕೇವಲ 544 ರನ್‌ಗಳ ಅವಶ್ಯಕತೆಯಿದೆ. ಸದ್ಯ ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ 2535 ರನ್ಗಳಿಸಿರುವ ಸಚಿನ್ ಅಗ್ರಸ್ಥಾನದಲ್ಲಿದ್ದಾರೆ.
7 / 12
5- ಇಂಗ್ಲೆಂಡ್ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆಯಲು ಕೊಹ್ಲಿಗೆ ಬೇಕಿರುವುದು ಕೇವಲ 21 ರನ್‌ಗಳು ಮಾತ್ರ.
8 / 12
6- ತವರಿನಲ್ಲಿ ಅತೀ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲು ಕೊಹ್ಲಿಗೆ 5 ಶತಕಗಳ ಅವಶ್ಯಕತೆಯಿದೆ. 42 ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
9 / 12
7- ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ವಿರಾಟ್ ಕೊಹ್ಲಿ ಕೇವಲ 30 ರನ್ಗಳಿಸಿದರೆ ಸಾಕು.
10 / 12
8- ವೆಸ್ಟ್ ಇಂಡೀಸ್‌ನಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲು ಕಿಂಗ್ ಕೊಹ್ಲಿಗೆ 322 ರನ್‌ಗಳ ಅಗತ್ಯವಿದೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ (1919 ರನ್ಸ್) ಅಗ್ರಸ್ಥಾನದಲ್ಲಿದ್ದಾರೆ.
11 / 12
9- ನ್ಯೂಝಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ಬ್ಯಾಟರ್ ದಾಖಲೆ ಬರೆಯಲು ಕಿಂಗ್ ಕೊಹ್ಲಿಗೆ 1 ಶತಕದ ಅಗತ್ಯವಿದೆ. ಸದ್ಯ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ತಲಾ ಒಂಬತ್ತು ಶತಕ ಸಿಡಿಸಿದ್ದಾರೆ.
12 / 12
10- ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲು ಕಿಂಗ್ ಕೊಹ್ಲಿಗೆ 383 ರನ್‌ಗಳ ಅವಶ್ಯಕತೆಯಿದೆ. ಸದ್ಯ ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (820 ರನ್ಸ್) ಅಗ್ರಸ್ಥಾನದಲ್ಲಿದ್ದು, ಈ ವರ್ಷದಲ್ಲಿ ಕಿಂಗ್ ಕೊಹ್ಲಿ ಈ ದಾಖಲೆಗಳನ್ನು ಮುರಿಯಲಿದ್ದಾರಾ ಕಾದು ನೋಡಬೇಕಿದೆ.