2023 ಕಳೆದು ಇದೀಗ 2024 ಕ್ಕೆ ಕಾಲಿಟ್ಟಿದ್ದೇವೆ. ಈ ಬಾರಿಯಂತೆ ಈ ವರ್ಷ ಕೂಡ ಕೆಲ ಬ್ಯಾಟರ್ಗಳಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು. ಅದರಲ್ಲೂ ಎಲ್ಲರ ಕಣ್ಣು ಇದೀಗ ಯುಎಇ ಆಟಗಾರ ಮುಹಮ್ಮದ್ ವಸೀಮ್ ಮೇಲೆ ನೆಟ್ಟಿದೆ. ಇದಕ್ಕೆ ಕಾರಣ ಒಂದೇ ವರ್ಷದಲ್ಲಿ 100 ಕ್ಕೂ ಅಧಿಕ ಸಿಕ್ಸ್ ಬಾರಿಸುವುದು.
ಹೌದು, 2023 ರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮುಹಮ್ಮದ್ ವಸೀಮ್. ವಸೀಮ್ ಅವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್ಮನ್ 100 ಸಿಕ್ಸ್ಗಳ ಗಡಿ ತಲುಪಿಲ್ಲ ಎಂಬುದು ವಿಶೇಷ. ಹಾಗಿದ್ರೆ 2023 ರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ಗಳು ಯಾರೆಲ್ಲಾ ಎಂದು ನೋಡೋಣ..
1- ಮುಹಮ್ಮದ್ ವಸೀಮ್: ಯುಎಇ ತಂಡದ ಆರಂಭಿಕ ಆಟಗಾರ ಮುಹಮ್ಮದ್ ವಸೀಮ್ 2023 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 47 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಬರೋಬ್ಬರಿ 101 ಸಿಕ್ಸ್ಗಳನ್ನು ಬಾರಿಸಿ ಕಳೆದ ವರ್ಷದ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.
2- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ವರ್ಷ 39 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಹಿಟ್ಮ್ಯಾನ್ ಬ್ಯಾಟ್ನಿಂದ ಸಿಡಿದಿರುವ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 80 ಸಿಕ್ಸ್.
3- ಕುಶಾಲ್ ಮಲ್ಲ: ನೇಪಾಳ ತಂಡದ ಬ್ಯಾಟರ್ ಕುಶಾಲ್ ಮಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 32 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 65 ಸಿಕ್ಸ್ಗಳನ್ನು ಬಾರಿಸಿ ಈ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ.
4- ಮಿಚೆಲ್ ಮಾರ್ಷ್: ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ 2023 ರಲ್ಲಿ ಒಟ್ಟು 33 ಇನಿಂಗ್ಸ್ ಆಡಿದ್ದು, ಈ ವೇಳೆ 61 ಸಿಕ್ಸ್ಗಳನ್ನು ಬಾರಿಸಿದ್ದಾರೆ.
5- ಡೇರಿಲ್ ಮಿಚೆಲ್: ನ್ಯೂಝಿಲೆಂಡ್ ಆಟಗಾರ ಡೇರಿಲ್ ಮಿಚೆಲ್ 2023 ರಲ್ಲಿ 55 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 61 ಸಿಕ್ಸ್ಗಳನ್ನು ಬಾರಿಸಿ ಈ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದಾರೆ.
Published On - 9:03 am, Tue, 2 January 24