ವಿರಾಟ್ ಕೊಹ್ಲಿ 1 ಶತಕ ಸಿಡಿಸಿದರೆ, 9 ಆಟಗಾರರ ದಾಖಲೆ ಧ್ವಂಸ

Updated on: Dec 05, 2024 | 9:54 AM

Virat Kohli Records: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 102 ರನ್ ಬಾರಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಸದ್ಯ ಈ ರೆಕಾರ್ಡ್ ವೆಸ್ಟ್ ಇಂಡೀಸ್ ದಾಂಡಿಗ ಬ್ರಿಯಾನ್ ಲಾರಾ ಹೆಸರಿನಲ್ಲಿದೆ.

1 / 6
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಶುಕ್ರವಾರದಿಂದ ಆರಂಭವಾಗಲಿರುವ ಈ ಪಂದ್ಯವು ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಒಂದು ಶತಕ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅದು ಕೂಡ 9 ಆಟಗಾರರ ದಾಖಲೆಗಳನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಶುಕ್ರವಾರದಿಂದ ಆರಂಭವಾಗಲಿರುವ ಈ ಪಂದ್ಯವು ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಒಂದು ಶತಕ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅದು ಕೂಡ 9 ಆಟಗಾರರ ದಾಖಲೆಗಳನ್ನು ಮುರಿಯುವ ಮೂಲಕ ಎಂಬುದು ವಿಶೇಷ.

2 / 6

ಅಂದರೆ ಅಡಿಲೇಡ್ ಓವಲ್​ ಮೈದಾನದಲ್ಲಿ ಅತೀ ಹೆಚ್ಚು ಟೆಸ್ಟ್​ ಶತಕಗಳನ್ನು ಬಾರಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಇದೀಗ ಕಿಂಗ್ ಕೊಹ್ಲಿ 10ನೇ ಸ್ಥಾನದಲ್ಲಿದ್ದಾರೆ. ಈ ಮೈದಾನದಲ್ಲಿ ಈವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಒಟ್ಟು 3 ಸೆಂಚುರಿ ಸಿಡಿಸಿದ್ದಾರೆ.

3 / 6

ಅತ್ತ ಮಾರ್ನಸ್ ಲಾಬುಶೇನ್, ಜಾಕ್ ಹಾಬ್ಸ್, ಡಾನ್ ಬ್ರಾಡ್ಮನ್, ಡೀನ್ ಜೋನ್ಸ್, ಆರ್ಥರ್ ಮೋರಿಸ್, ಬಾಬ್ ಸಿಂಪ್ಸನ್, ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್ ಮತ್ತು ಸ್ಟೀವ್ ವಾ ಕೂಡ ಅಡಿಲೇಡ್ ಓವಲ್ ಮೈದಾನದಲ್ಲಿ ತಲಾ ಮೂರು ಶತಕಗಳನ್ನು ಬಾರಿಸಿದ್ದಾರೆ.

4 / 6

ಇದೀಗ ಅಡಿಲೇಡ್ ಸೆಂಚುರಿ ಸರದಾರರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಪಿಂಕ್ ಬಾಲ್ ಟೆಸ್ಟ್​​ನಲ್ಲಿ ಶತಕ ಸಿಡಿಸಿದರೆ ಅಗ್ರಸ್ಥಾನಕ್ಕೇರಬಹುದು. ಈ ಮೂಲಕ ಆಸ್ಟ್ರೇಲಿಯಾದ ಓವಲ್ ಮೈದಾನದಲ್ಲಿ ಅತ್ಯಧಿಕ ಟೆಸ್ಟ್ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

5 / 6

ಹಾಗೆಯೇ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 102 ರನ್ ಬಾರಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಸದ್ಯ ಈ ರೆಕಾರ್ಡ್ ವೆಸ್ಟ್ ಇಂಡೀಸ್ ದಾಂಡಿಗ ಬ್ರಿಯಾನ್ ಲಾರಾ (610 ರನ್ಸ್) ಹೆಸರಿನಲ್ಲಿದೆ.

6 / 6

ಇದೀಗ ಬ್ರಿಯಾನ್ ಲಾರಾ ಅವರ ಈ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ 102 ರನ್​​​ಗಳ ಅವಶ್ಯಕತೆಯಿದೆ. 2012-2020 ರ ನಡುವೆ ಅಡಿಲೇಡ್​​ನಲ್ಲಿ 8 ಟೆಸ್ಟ್ ಇನಿಂಗ್ಸ್ ಆಡಿರುವ ಕೊಹ್ಲಿ ಒಟ್ಟು 509 ರನ್ ಕಲೆಹಾಕಿದ್ದಾರೆ. ದ್ವಿತೀಯ ಟೆಸ್ಟ್​​ನಲ್ಲಿ ಕೊಹ್ಲಿ ಬ್ಯಾಟ್​​​ನಿಂದ 102 ರನ್ ಮೂಡಿಬಂದರೆ, ಅಡಿಲೇಡ್ ಮೈದಾನದಲ್ಲಿ ಅತ್ಯಧಿಕ ರನ್ ಗಳಿಸಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

Loading...
Unable to load recommendations.
Follow Us