Virat Kohli Records: 25 ಸಾವಿರ ರನ್​ ಪೂರೈಸಲು ಯಾರ್ಯಾರು ಎಷ್ಟೆಷ್ಟು ಇನಿಂಗ್ಸ್ ಆಡಿದ್ದರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Updated By: ಝಾಹಿರ್ ಯೂಸುಫ್

Updated on: Feb 19, 2023 | 7:54 PM

Virat Kohli Records: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 25 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಕೂಡ ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.

1 / 11
ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ವಿರಾಟ್ ಕೊಹ್ಲಿ 20 ರನ್​ ಬಾರಿಸಿದ್ದರು. ಈ ಇಪ್ಪತ್ತು ರನ್​ಗಳೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್​ ಪೂರೈಸಿದ 6ನೇ ಬ್ಯಾಟರ್​ ಎಂಬ ವಿಶೇಷ ದಾಖಲೆ ಬರೆದರು.

2 / 11
ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 25 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಕೂಡ ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.

3 / 11
ಸಚಿನ್ ತೆಂಡೂಲ್ಕರ್ 577 ಇನಿಂಗ್ಸ್​ ಮೂಲಕ ಈ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆಯನ್ನು ಮುರಿದು ವಿರಾಟ್ ಕೊಹ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

4 / 11
ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್​ ಪೂರೈಸಲು ಯಾರ್ಯಾರು ಎಷ್ಟೆಷ್ಟು ಇನಿಂಗ್ಸ್ ಆಡಿದ್ದರು ಎಂಬುದರ ಕಂಪ್ಲೀಟ್ ಡಿಟೇಲ್ಸ್​ ಈ ಕೆಳಗಿನಂತಿದೆ.

5 / 11
1- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 549 ಇನಿಂಗ್ಸ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್ ಪೂರೈಸಿದ್ದರು. ಇದರಲ್ಲಿ ಟೆಸ್ಟ್​ ಕ್ರಿಕೆಟ್​ನ 8195 ರನ್​, ಏಕದಿನ ಕ್ರಿಕೆಟ್​ನ 12809 ರನ್ ಹಾಗೂ ಟಿ20 ಕ್ರಿಕೆಟ್​ನ 4008 ರನ್​ಗಳು ಸೇರಿವೆ.

6 / 11
2- ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಾಧನೆ ಮಾಡಲು ತೆಗೆದುಕೊಂಡಿರುವುದು ಬರೋಬ್ಬರಿ 577 ಇನಿಂಗ್ಸ್​. ಈ ಮೂಲಕ 25 ಸಾವಿರ ರನ್​ ಪೂರೈಸಿದ್ದರು.

7 / 11
3- ರಿಕಿ ಪಾಂಟಿಂಗ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರಕ್ಕೂ ಅಧಿಕ ರನ್​ ಕಲೆಹಾಕಿದ್ದಾರೆ. ಈ ವೇಳೆ 588 ಇನಿಂಗ್ಸ್​ ಮೂಲಕ 25 ಸಾವಿರ ರನ್ ಪೂರೈಸಿದ್ದರು.

8 / 11
4- ಜಾಕ್ಸ್ ಕಾಲಿಸ್: ಸೌತ್ ಆಫ್ರಿಕಾದ ಆಲ್​ರೌಂಡರ್ ಜಾಕ್ಸ್ ಕಾಲಿಸ್ 594 ಇನಿಂಗ್ಸ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್​ ಪೂರೈಸಿದ್ದರು.

9 / 11
5- ಕುಮಾರ ಸಂಗಾಕ್ಕರ: ಶ್ರೀಲಂಕಾ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕುಮಾರ ಸಂಗಾಕ್ಕರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್​ ಪೂರೈಸಲು 608 ಇನಿಂಗ್ಸ್​ಗಳನ್ನು ಆಡಿದ್ದರು.

10 / 11
6- ಮಹೇಲ ಜಯವರ್ಧನೆ: ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ಜಯವರ್ಧನೆ 701 ಇನಿಂಗ್ಸ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್ ಪೂರೈಸಿದ್ದರು.

11 / 11
ಇದೀಗ ಇವರೆಲ್ಲರನ್ನೂ ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ  ಕೇವಲ 549 ಇನಿಂಗ್ಸ್​ ಮೂಲಕ 25 ಸಾವಿರ ರನ್​ ಪೂರೈಸಿ ವಿರಾಟ್ ಕೊಹ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Published On - 7:24 pm, Sun, 19 February 23