Virat kohli: ಏಕದಿನ ನಾಯಕತ್ವ ಕೊಹ್ಲಿಯ ಕೈತಪ್ಪಲು 4 ಪ್ರಮುಖ ಕಾರಣಗಳು ಇಲ್ಲಿವೆ

| Updated By: ಪೃಥ್ವಿಶಂಕರ

Updated on: Dec 08, 2021 | 9:20 PM

Virat kohli: ಒಡಿಐ ನಾಯಕನಾಗಿ ವಿರಾಟ್ ಕೊಹ್ಲಿ ಅವರ ದಾಖಲೆ ಅದ್ಭುತವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ವಿರಾಟ್ ನಾಯಕತ್ವದಲ್ಲಿ ಟೀಂ ಇಂಡಿಯಾ 19 ಏಕದಿನ ದ್ವಿಪಕ್ಷೀಯ ಸರಣಿಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ.

1 / 5
ಟೀಂ ಇಂಡಿಯಾದ ಟಿ20 ನಾಯಕತ್ವ ತೊರೆದ ಬಳಿಕ ಇದೀಗ ಏಕದಿನ ನಾಯಕತ್ವವೂ ವಿರಾಟ್ ಕೊಹ್ಲಿ ಕೈಯಿಂದ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಘೋಷಣೆ ಜತೆಗೆ ಏಕದಿನ ತಂಡದ ನಾಯಕತ್ವವನ್ನೂ ರೋಹಿತ್ ಶರ್ಮಾಗೆ ಆಯ್ಕೆಗಾರರು ಹಸ್ತಾಂತರಿಸಿದ್ದಾರೆ. ಇದರರ್ಥ ಈಗ ಭಾರತ ತಂಡವು ಮುಂದಿನ ವರ್ಷ T20 ವಿಶ್ವಕಪ್ ಮತ್ತು 2023 ರ ವಿಶ್ವಕಪ್ ಅನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಲಿದೆ. ಆದರೆ ಇಲ್ಲಿ ಪ್ರಶ್ನೆ ಏನೆಂದರೆ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನೂ ಏಕೆ ತೆಗೆದುಹಾಕಲಾಯಿತು? ಇದಕ್ಕೆ 4 ಕಾರಣಗಳು ಇಲ್ಲಿವೆ.

2 / 5
ಒಡಿಐ ನಾಯಕನಾಗಿ ವಿರಾಟ್ ಕೊಹ್ಲಿ ಅವರ ದಾಖಲೆ ಅದ್ಭುತವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ವಿರಾಟ್ ನಾಯಕತ್ವದಲ್ಲಿ ಟೀಂ ಇಂಡಿಯಾ 19 ಏಕದಿನ ದ್ವಿಪಕ್ಷೀಯ ಸರಣಿಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ತವರು ನೆಲದಲ್ಲಿ, ಅವರು 9 ದ್ವಿಪಕ್ಷೀಯ ಸರಣಿಗಳಲ್ಲಿ 8 ಅನ್ನು ಗೆದ್ದರು ಆದರೆ ವಿರಾಟ್ ICC ಪಂದ್ಯಾವಳಿಯನ್ನು ಗೆಲ್ಲಲು ವಿಫಲರಾದರು. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ, ಚಾಂಪಿಯನ್ಸ್ ಟ್ರೋಫಿ 2017, ವಿಶ್ವಕಪ್ 2019 ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು ಮತ್ತು 2021 ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲಿಲ್ಲ. ಹೀಗಾಗಿ ಈ ಸೋಲು ಎಲ್ಲೋ ವಿರಾಟ್ ಕೊಹ್ಲಿ ವಿರುದ್ಧ ಹೋಯಿತು.

3 / 5
ರೋಹಿತ್ ಶರ್ಮಾ T20 ನಾಯಕರಾದ ತಕ್ಷಣ, ODI ನಾಯಕನನ್ನೂ ಶೀಘ್ರದಲ್ಲೇ ಬದಲಾಯಿಸಲಾಗುವುದು ಎಂಬುದು ಸ್ಪಷ್ಟವಾಗಿತ್ತು. ಸಾಮಾನ್ಯವಾಗಿ ಸೀಮಿತ ಓವರ್‌ಗಳ ಕ್ಯಾಪ್ಟನ್‌ ಒಂದೇ ಆಗಿದ್ದು, ಟೆಸ್ಟ್‌ ಮಾದರಿಯಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್‌ ತಂಡಗಳಲ್ಲಿ ನಾಯಕತ್ವ ಬೇರೆಯವರೊಂದಿಗೆ ಇರಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅದೇ ನಿಲುವನ್ನು ತಳೆದಿರುವ ಭಾರತೀಯ ಕ್ರಿಕೆಟ್ ಮಂಡಳಿಯು ವಿರಾಟ್ ಕೊಹ್ಲಿಯನ್ನು ಟೆಸ್ಟ್ ನಾಯಕನಾಗಿ ಉಳಿಸಿಕೊಳ್ಳುವುದು ಸರಿ ಎಂದು ಭಾವಿಸಿದೆ.

4 / 5
ನಿರಂತರವಾಗಿ ಬಯೋ ಬಬಲ್‌ನಲ್ಲಿರುವುದು ಮತ್ತು ಎಲ್ಲಾ ಮೂರು ಸ್ವರೂಪಗಳ ನಾಯಕತ್ವ ಮಾಡುವುದು ಸುಲಭವಲ್ಲ. ವಿರಾಟ್ ಕೊಹ್ಲಿ ಸಾರ್ವಜನಿಕ ವೇದಿಕೆಯಲ್ಲಿ ಹಲವು ಬಾರಿ ಹೇಳಿದ್ದಾರೆ. ಮೂರು ಮಾದರಿಯಲ್ಲಿ ಆಡುವುದು ಮತ್ತು ತಂಡದ ನಾಯಕತ್ವವು ಸವಾಲಾಗಿದ್ದು, ಅದರ ಪರಿಣಾಮ ಇದೀಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೂ ಗೋಚರಿಸುತ್ತಿದೆ. ವಿರಾಟ್ ಕೊಹ್ಲಿಗೆ ಕಳೆದ 2 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ಏಕದಿನ ಹಾಗೂ ಟಿ20 ನಾಯಕತ್ವದಿಂದ ಬಿಡುಗಡೆಗೊಂಡ ಬಳಿಕ ಇದೀಗ ವಿರಾಟ್ ಕೊಹ್ಲಿ ಬ್ಯಾಟ್ಸ್ ಮನ್ ಆಗಿ ರಿಲೀಫ್ ಪಡೆಯುವುದು ಖಚಿತ.

5 / 5
ODI ಮತ್ತು T20 ತಂಡಗಳ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ತೆಗೆದುಹಾಕಲು ಹೊಸ ಕೋಚಿಂಗ್ ಸಿಬ್ಬಂದಿ ಕೂಡ ಒಂದು ಕಾರಣವಾಗಿರಬಹುದು. ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದು, ಹೊಸ ಆಲೋಚನೆಯೊಂದಿಗೆ ತಂಡಕ್ಕೆ ಬಂದಿದ್ದಾರೆ. ಹೊಸ ನಾಯಕನೊಂದಿಗೆ ತಂಡವನ್ನು ಮುನ್ನಡೆಸಲು ರಾಹುಲ್ ದ್ರಾವಿಡ್ ಬಯಸಿರುವ ಸಾಧ್ಯತೆಯಿದೆ.