Updated on: Jul 10, 2023 | 10:07 AM
ಭಾರೀ ಕುತೂಹಲ ಕೆರಳಿಸಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿ ಆರಂಭಕ್ಕೆ ಕೇವಲ ಎರಡು ದಿನಗಳಷ್ಟೆ ಬಾಕಿ ಉಳಿದಿದೆ. ಜುಲೈ 12 ರಂದು ಮೊದಲ ಟೆಸ್ಟ್ ಆರಂಭವಾಗುವ ಮೂಲಕ ಈ ಸರಣಿಗೆ ಚಾಲನೆ ಸಿಗಲಿದೆ.
ಶನಿವಾರ ರೋಹಿತ್ ಶರ್ಮಾ ಒಳಗೊಂಡ ಭಾರತದ ಟೆಸ್ಟ್ ತಂಡದ ಆಟಗಾರರು ಡೊಮಿನಿಕಾಗೆ ತಲುಪಿದ್ದಾರೆ. ಭಾನುವಾರ ಪ್ರ್ಯಾಕ್ಟೀಸ್ ಸೆಷನ್ ಏರ್ಪಡಿಸಲಾಗಿತ್ತು. ಆದರೆ, ನಿರಂತರವಾಗಿ ಸುರಿದ ಮಳೆಗೆ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ.
ಪ್ರ್ಯಾಕ್ಟೀಸ್ ಸೆಷನ್ ಕ್ಯಾನ್ಸಲ್ ಆದ ಹಿನ್ನಲೆ ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ಕೆರಿಬಿಯನ್ ನಾಡು ಸುತ್ತಲು ತೆರಳಿದ್ದಾರೆ. ಕೊಹ್ಲಿ ಸುತ್ತಾಡಿಕೊಂಡು ಸಮುದ್ರದ ಪಕ್ಕ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಜುಲೈ 12 ರಿಂದ ಜುಲೈ 16 ವರೆಗೆ ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಬಳಿಕ ಜುಲೈ 20ರಿಂದ 24 ವರೆಗೆ ದ್ವಿತೀಯ ಟೆಸ್ಟ್ ಆಯೋಜಿಸಲಾಗಿದ್ದು, ಇದು ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯಲಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿ ಬಳಿಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಾದ ಬಳಿಕ ಕೊನೆಯದಾಗಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. ಟಿ20 ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸಂಪೂರ್ಣ ಸರಣಿ ದೂರದರ್ಶನ್ ನೆಟ್ವರ್ಕ್ನ ಡಿಡಿ ಸ್ಪೋರ್ಟ್ಸ್ನಲ್ಲಿ ನೇರಪ್ರಸಾರ ಕಾಣಲಿದೆ. ಜಿಯೋ ಸಿನಿಮಾ ಮತ್ತು ಫ್ಯಾನ್ಕೋಡ್ ಆ್ಯಪ್ ಮೂಲಕ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.