ವಿರಾಟ್ ಕೊಹ್ಲಿಯ ಬ್ಯಾಟ್ ರಿಂಕು ಸಿಂಗ್‌ ಪಾಲಿಗೆ ಅಪಶಕುನ: ಹೀಗೊಂದು ವಿತಂಡ ವಾದ..!

Updated on: Nov 14, 2024 | 1:25 PM

Rinku Singh: ಟೀಮ್ ಇಂಡಿಯಾದ ಸ್ಪೋಟಕ ದಾಂಡಿಗ ರಿಂಕು ಸಿಂಗ್ ಕಳಪೆ ಫಾರ್ಮ್​ನಲ್ಲಿದ್ದಾರೆ. ಈ ಕಳಪೆ ಫಾರ್ಮ್​ಗೆ ಐಪಿಎಲ್ ವೇಳೆ ವಿರಾಟ್ ಕೊಹ್ಲಿ ನೀಡಿದ ಬ್ಯಾಟ್ ಕಾರಣ ಎಂಬ ವಿತಂಡ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ.

1 / 6
ಮುಟ್ಟಿದೆಲ್ಲಾ ಸಿಕ್ಸ್, ತಟ್ಟಿದೆಲ್ಲಾ ಫೋರ್... ಹೀಗೆ ಒಂದೇ ಒಂದು ಐಪಿಎಲ್​ ಸೀಸನ್​ ಮೂಲಕ ಅಬ್ಬರಿಸಿ ಬೊಬ್ಬರಿದು ರಿಂಕು ಸಿಂಗ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಭಾರತ ಟಿ20 ತಂಡಕ್ಕೆ ಎಂಟ್ರಿಯಾದ ಬಳಿಕ ರಿಂಕು ಸಿಂಗ್ ಹಿಂತಿರುಗಿ ನೋಡಿಲ್ಲ. ಆದರೆ ಇದೀಗ ಅದೇ ರಿಂಕು ಟೀಮ್ ಇಂಡಿಯಾದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ.

ಮುಟ್ಟಿದೆಲ್ಲಾ ಸಿಕ್ಸ್, ತಟ್ಟಿದೆಲ್ಲಾ ಫೋರ್... ಹೀಗೆ ಒಂದೇ ಒಂದು ಐಪಿಎಲ್​ ಸೀಸನ್​ ಮೂಲಕ ಅಬ್ಬರಿಸಿ ಬೊಬ್ಬರಿದು ರಿಂಕು ಸಿಂಗ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಭಾರತ ಟಿ20 ತಂಡಕ್ಕೆ ಎಂಟ್ರಿಯಾದ ಬಳಿಕ ರಿಂಕು ಸಿಂಗ್ ಹಿಂತಿರುಗಿ ನೋಡಿಲ್ಲ. ಆದರೆ ಇದೀಗ ಅದೇ ರಿಂಕು ಟೀಮ್ ಇಂಡಿಯಾದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ.

2 / 6

ಏಕೆಂದರೆ ಟೀಮ್ ಇಂಡಿಯಾ ಪರ ಕಳೆದ 7 ಇನಿಂಗ್ಸ್​ಗಳಲ್ಲಿ ರಿಂಕು ಸಿಂಗ್ ಕಲೆಹಾಕಿರುವುದು ಕೇವಲ 91 ರನ್​ಗಳು ಮಾತ್ರ. ಅಂದರೆ 15.16 ಸರಾಸರಿಯಲ್ಲಿ ಮಾತ್ರ ರನ್​ಗಳಿಸಿದ್ದಾರೆ. ಅದರಲ್ಲೂ ಪ್ರಸ್ತುತ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 3 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 28 ರನ್​ಗಳು ಮಾತ್ರ. ಹೀಗಾಗಿ ಇದೀಗ ರಿಂಕು ಸಿಂಗ್​ಗೆ ಭಾರತ ತಂಡದಿಂದ ಹೊರಬೀಳುವ ಆತಂಕ ಎದುರಾಗಿದೆ.

3 / 6

ಕುತೂಹಲಕಾರಿ ವಿಷಯ ಎಂದರೆ ಇಂತಹದೊಂದು ಕಳಪೆ ಫಾರ್ಮ್ ಶುರುವಾಗಿದ್ದು ಈ ಬಾರಿಯ ಐಪಿಎಲ್​ ಬಳಿಕ. ಐಪಿಎಲ್ 2024 ರಲ್ಲಿ ರಿಂಕು, ವಿರಾಟ್ ಕೊಹ್ಲಿಯಿಂದ ಬ್ಯಾಟ್​ ಪಡೆದಿದ್ದರು. ಇದಾದ ಬಳಿಕ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ ಎಂಬುದು ಅಚ್ಚರಿ. ಹೀಗಾಗಿಯೇ ಇದೀಗ ರಿಂಕು ಸಿಂಗ್ ಪಾಲಿಗೆ ಕಿಂಗ್ ಕೊಹ್ಲಿಯ ಬ್ಯಾಟ್ ಅಪಶಕುನ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

4 / 6

ಇದಕ್ಕೆ ಸಾಕ್ಷಿಯಾಗಿ ಅಂಕಿ ಅಂಶಗಳನ್ನು ಸಹ ಮುಂದಿಟ್ಟಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನ ಆರಂಭದಲ್ಲಿ ರಿಂಕು ಸಿಂಗ್ 46 ರ ಸರಾಸರಿಯಲ್ಲಿ ಮತ್ತು 165 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಆದರೀಗ ಅವರ ಸ್ಟ್ರೈಕ್ ರೇಟ್ 128.16 ಕ್ಕೆ ಬಂದು ನಿಂತಿದೆ. ಅಲ್ಲದೆ ಕಳೆದ 7 ಇನಿಂಗ್ಸ್​ಗಳಲ್ಲಿ ಅವರ ರನ್ ಸರಾಸರಿ ಕೇವಲ 15.16 ಮಾತ್ರ.

5 / 6

ಅಲ್ಲದೆ ವಿರಾಟ್ ಕೊಹ್ಲಿಯ ಬ್ಯಾಟ್ ಪಡೆದ ಬಳಿಕ ರಿಂಕು ಸಿಂಗ್ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 60 ರ ಸರಾಸರಿಯಲ್ಲಿ 60 ರನ್ ಮಾತ್ರ ಕಲೆಹಾಕಿದ್ದರು. ಇನ್ನು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ 2 ಇನ್ನಿಂಗ್ಸ್‌ಗಳಲ್ಲಿ ಕಲೆಹಾಕಿದ್ದು 61 ರನ್​ಗಳು ಮಾತ್ರ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 28 ರನ್ ಮಾತ್ರ ಗಳಿಸಿದ್ದಾರೆ.

6 / 6

ಒಟ್ಟಾರೆ ಹೇಳುವುದಾದರೆ ರಿಂಕಿ ಸಿಂಗ್ ಕಳಪೆ ಫಾರ್ಮ್​​ನಿಂದ ಒದ್ದಾಡುತ್ತಿರುವುದಂತು ಸತ್ಯ. ಇದಕ್ಕೆ ವಿರಾಟ್ ಕೊಹ್ಲಿ ನೀಡಿದ ಬ್ಯಾಟ್ ಕಾರಣ ಎನ್ನುವುದು ಮೂಢನಂಬಿಕೆ. ಇಂತಹದೊಂದು ಅಪಶಕುನದ ಕಥೆ ಕಟ್ಟಿದವವರಿಗೆ ರಿಂಕು ಸಿಂಗ್ ಮುಂದಿನ ಪಂದ್ಯದಲ್ಲಿ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.

Published On - 1:25 pm, Thu, 14 November 24

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us