Virat Kohli: ಬರೋಬ್ಬರಿ 1673 ದಿನಗಳು…ಮುಂದುವರೆದ ಕಿಂಗ್ ಕೊಹ್ಲಿಯ ಶತಕದ ಕಾಯುವಿಕೆ..!

Edited By:

Updated on: Jul 15, 2023 | 10:09 PM

Virat Kohli's Records: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿನ ತಮ್ಮ ಶತಕದ ಬರ ನೀಗಿಸಿಕೊಳ್ಳಲಿದ್ದಾರಾ?

1 / 7
ಡೊಮಿನಿಕಾದ ವಿಂಡ್ಸರ್ ಪಾರ್ಕ್​ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 141 ರನ್​ಗಳ ಅಮೋಘ ಗೆಲುವು ಸಾಧಿಸಿದೆ. ಈ ಜಯದೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಇಬ್ಬರು ಆರಂಭಿಕರು ಶತಕ ಬಾರಿಸಿದ್ದು ವಿಶೇಷ.

ಡೊಮಿನಿಕಾದ ವಿಂಡ್ಸರ್ ಪಾರ್ಕ್​ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 141 ರನ್​ಗಳ ಅಮೋಘ ಗೆಲುವು ಸಾಧಿಸಿದೆ. ಈ ಜಯದೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಇಬ್ಬರು ಆರಂಭಿಕರು ಶತಕ ಬಾರಿಸಿದ್ದು ವಿಶೇಷ.

2 / 7

ಚೊಚ್ಚಲ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್ 171 ರನ್ ಬಾರಿಸಿದರೆ, ರೋಹಿತ್ ಶರ್ಮಾ 103 ರನ್​ಗಳಿಸಿದರು. ಇನ್ನು ಟೀಮ್ ಇಂಡಿಯಾ ಪರ ಮೂರನೇ ಅತೀ ದೊಡ್ಡ ಸ್ಕೋರ್​ಗಳಿಸಿದ್ದು ವಿರಾಟ್ ಕೊಹ್ಲಿ.

3 / 7

182 ಎಸೆತಗಳನ್ನು ಎದುರಿಸಿದ್ದ ವಿರಾಟ್ ಕೊಹ್ಲಿ 5 ಫೋರ್​ನೊಂದಿಗೆ 76 ರನ್ ಬಾರಿಸಿದ್ದರು. ಇತ್ತ ಕೊಹ್ಲಿಯು 75 ರನ್​ ದಾಟುತ್ತಿದ್ದಂತೆ ಅಭಿಮಾನಿಗಳು ಶತಕದ ನಿರೀಕ್ಷೆಯಲ್ಲಿದ್ದರು. ಆದರೆ ರಹಕೀಮ್ ಕಾರ್ನ್​ವಾಲ್ ಎಸೆತದಲ್ಲಿ ಅಥನಾಝ್​ಗೆ ಕ್ಯಾಚ್ ನೀಡುವ ಮೂಲಕ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ್ದರು.

4 / 7

ಇದರೊಂದಿಗೆ ಕೇವಲ 24 ರನ್​ಗಳಿಂದ ವಿರಾಟ್ ಕೊಹ್ಲಿ ಶತಕ ವಂಚಿತರಾದರು. ಅದರಲ್ಲೂ ವಿರಾಟ್ ಕೊಹ್ಲಿಯ ಬ್ಯಾಟ್​ನಿಂದ ವಿದೇಶದಲ್ಲಿ ಟೆಸ್ಟ್​ ಶತಕ ಮೂಡಿಬಂದು 5 ವರ್ಷಗಳಾಗುತ್ತಾ ಬರುತ್ತಿದೆ.

5 / 7

ಅಂದರೆ ಕೊನೆಯ ಬಾರಿ ಕಿಂಗ್ ಕೊಹ್ಲಿ ವಿದೇಶದಲ್ಲಿ ಟೆಸ್ಟ್ ಶತಕ ಬಾರಿಸಿದ್ದು 2018 ರಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಆ ಪಂದ್ಯದಲ್ಲಿ 257 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 123 ರನ್ ಬಾರಿಸಿ ಅಬ್ಬರಿಸಿದ್ದರು.

6 / 7

ಇದಾದ ಬಳಿಕ ವಿದೇಶದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್​ನಿಂದ ಟೆಸ್ಟ್ ಶತಕ ಮೂಡಿಬಂದಿಲ್ಲ. ಅಂದರೆ ಭಾರತದ ಹೊರಗೆ ಕಿಂಗ್ ಕೊಹ್ಲಿ ಟೆಸ್ಟ್ ಸೆಂಚುರಿ ಸಿಡಿಸಿ ಬರೋಬ್ಬರಿ 1673 ದಿನಗಳು ಕಳೆದಿವೆ. ಇದೀಗ ವಿರಾಟ್ ಕೊಹ್ಲಿಯ ಮುಂದಿರುವುದು ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯ.

7 / 7

ಜುಲೈ 20 ರಿಂದ ಶುರುವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿನ ತಮ್ಮ ಶತಕದ ಬರ ನೀಗಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Loading...
Unable to load recommendations.
Follow Us