AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಭಾರತದ ವಿರುದ್ಧ ವೇಗದ ಅರ್ಧಶತಕ ಬಾರಿಸಿದ ಟಿಮ್ ಸೀಫರ್ಟ್

Visakhapatnam T20: ವಿಶಾಖಪಟ್ಟಣದಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್, ಭಾರತಕ್ಕೆ 216 ರನ್‌ಗಳ ಗುರಿ ನೀಡಿದೆ. ಟಿಮ್ ಸೀಫರ್ಟ್ 62 ರನ್‌ಗಳ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಕೇವಲ 25 ಎಸೆತಗಳಲ್ಲಿ ಭಾರತದ ವಿರುದ್ಧ ಅತಿ ವೇಗದ ಅರ್ಧಶತಕದ ದಾಖಲೆ ಸರಿಗಟ್ಟಿದರು. ಡೆವೊನ್ ಕಾನ್ವೇ ಜೊತೆಗೂಡಿ ಅದ್ಭುತ 100+ ರನ್‌ಗಳ ಆರಂಭಿಕ ಪಾಲುದಾರಿಕೆ ನಿರ್ಮಿಸುವ ಮೂಲಕ 9 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಕಿವೀಸ್ 20 ಓವರ್‌ಗಳಲ್ಲಿ 215/7 ರನ್ ಗಳಿಸಿತು.

ಪೃಥ್ವಿಶಂಕರ
|

Updated on: Jan 28, 2026 | 9:27 PM

Share
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ ತಂಡ 
ಭಾರತಕ್ಕೆ 216 ರನ್‌ಗಳ ಗುರಿ ನೀಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಟಿಮ್ ಸೀಫರ್ಟ್ ಅವರ 62 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 215 ರನ್ ಗಳಿಸಿತು.

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ ತಂಡ ಭಾರತಕ್ಕೆ 216 ರನ್‌ಗಳ ಗುರಿ ನೀಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಟಿಮ್ ಸೀಫರ್ಟ್ ಅವರ 62 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 215 ರನ್ ಗಳಿಸಿತು.

1 / 6
ಕಿವೀಸ್ ತಂಡ 200 ರನ್​ಗಳ ಗಡಿ ದಾಟಲು ಆರಂಭಿಕರು ಪ್ರಮುಖ ಪಾತ್ರವಹಿಸಿದರು. ಕಿವೀಸ್ ತಂಡದ ಆರಂಭಿಕ ಜೋಡಿ ಟಿಮ್ ಸೀಫರ್ಟ್ ಮತ್ತು ಡೆವೊನ್ ಕಾನ್ವೇ ಒಟ್ಟಿಗೆ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಇದೇ ವೇಳೆ ಟಿಮ್ ಸೀಫರ್ಟ್ ಭಾರತ ವಿರುದ್ಧ ನ್ಯೂಜಿಲೆಂಡ್ ಪರ ಅತಿ ವೇಗದ ಟಿ20 ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದರು. ಹಾಗೆಯೇ ಡೆವೊನ್ ಕಾನ್ವೇ ಜೊತೆಗಿನ ಹೊತೆಯಾಟದ ಮೂಲಕ 9 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.

2 / 6
ಈ ಪಂದ್ಯದಲ್ಲಿ ಟಿಮ್ ಸೀಫರ್ಟ್ ಕೇವಲ 25 ಎಸೆತಗಳಲ್ಲಿ 50 ರನ್ ಬಾರಿಸಿದರು. ಇದು ಭಾರತದ ವಿರುದ್ಧ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಂತ ವೇಗದ ಅರ್ಧಶತಕವಾಗಿದೆ. ಈ ಮೂಲಕ 2020 ರಲ್ಲಿ ಆಕ್ಲೆಂಡ್‌ನಲ್ಲಿ ಕೇವಲ 25 ಎಸೆತಗಳಲ್ಲಿ 50 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಅವರೊಂದಿಗೆ ಸೀಫರ್ಟ್ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.

3 / 6
ಅರ್ಧಶತಕ ಬಾರಿಸುವುದರ ಜೊತೆಗೆ ಡೆವೊನ್ ಕಾನ್ವೇ ಜೊತೆಗೂಡಿ ಸೀಫರ್ಟ್ ಅದ್ಭುತ ಆರಂಭಿಕ ಪಾಲುದಾರಿಕೆಯನ್ನು ನಿರ್ಮಿಸಿದರು. ಈ ಜೋಡಿ ಕೇವಲ 8.2 ಓವರ್‌ಗಳಲ್ಲಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿತು. ಕುಲ್ದೀಪ್ ಯಾದವ್ ಅವರ ಬೌಲಿಂಗ್‌ನಲ್ಲಿ ಔಟ್ ಆಗುವ ಮೊದಲು ಕಾನ್ವೇ 23 ಎಸೆತಗಳಲ್ಲಿ 44 ರನ್ ಕಲೆಹಾಕಿದ್ದರು.

4 / 6
2022 ರ ಟಿ20 ವಿಶ್ವಕಪ್ ಸೆಮಿಫೈನಲ್ ನಂತರ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ವಿರುದ್ಧ 100 ರನ್‌ಗಳ ಆರಂಭಿಕ ಪಾಲುದಾರಿಕೆ ಇದಾಗಿದೆ. ಇದಲ್ಲದೆ, ಟಿ20ಕ್ರಿಕೆಟ್​ನಲ್ಲಿ ಭಾರತದ ವಿರುದ್ಧ ಕಿವೀಸ್​ನ ಆರಂಭಿಕ ಜೋಡಿ 100 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ಒಂಬತ್ತು ವರ್ಷಗಳಾಗಿತ್ತು. ಇದಕ್ಕೂ ಮೊದಲು, ಮಾರ್ಟಿನ್ ಗುಪ್ಟಿಲ್ ಮತ್ತು ಕಾಲಿನ್ ಮನ್ರೋ 2017 ರ ರಾಜ್‌ಕೋಟ್ ಪಂದ್ಯದಲ್ಲಿ 105 ರನ್‌ಗಳ ಜೊತೆಯಾಟ ನಡೆಸಿದ್ದರು.

5 / 6
2020 ರ ನಂತರ ಭಾರತ ವಿರುದ್ಧದ 17 ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ 50 ಕ್ಕೂ ಹೆಚ್ಚು ರನ್​ಗಳ ಆರಂಭಿಕ ಪಾಲುದಾರಿಕೆಯನ್ನು ನಿರ್ಮಿಸಿದ್ದು ಇದೇ ಮೊದಲು. ಇದಕ್ಕೂ ಮೊದಲು, ಆರಂಭಿಕರು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆದರೆ ಈ ಬಾರಿ ಸೀಫರ್ಟ್ ಮತ್ತು ಕಾನ್ವೇ ಸಂಪೂರ್ಣವಾಗಿ ವಿಭಿನ್ನ ಶೈಲಿಯ ಬ್ಯಾಟಿಂಗ್‌ ಪ್ರದರ್ಶಿಸಿದರು.

6 / 6
ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್

ಜಮ್ಮು ಕಾಶ್ಮೀರದಲ್ಲಿ ಜೆಸಿಬಿ ಮೂಲಕ ಹಿಮಪಾತದ ತೆರವು

15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶಿವಂ ದುಬೆ
15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶಿವಂ ದುಬೆ
ಪತಿ, ಸಹೋದರ ಮಾವ ಆತ್ಮಹತ್ಯೆ: ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್

ಅಜಿತ್ ಪವಾರ್​ ಸಾವಿಗೂ ಮುಂಚಿನ ಕೊನೆಯ ವಿಡಿಯೋ ಇಲ್ಲಿದೆ

ರಾಜಕೀಯಕ್ಕೆ ಬರಲು ಜೈ ಭೀಮ್ ಎನ್ನುತ್ತೀರಾ? ಉತ್ತರಿಸಿದ ದುನಿಯಾ ವಿಜಯ್

ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟ ತಾಯಿ

ಉಡುಪಿ: ಅವಮಾನವಾದ ನಿವೃತ್ತ ಯೋಧನಿಗೆ ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ

ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ

ನನ್ನ 32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​, ಮನೆ ಮಾಲೀಕ ಭಾವುಕ