Wanindu Hasaranga: ಲಸಿತ್ ಮಾಲಿಂಗ ದಾಖಲೆ ಮುರಿದ ವನಿಂದು ಹಸರಂಗ
TV9 Web | Updated By: ಝಾಹಿರ್ ಯೂಸುಫ್
Updated on:
Feb 20, 2024 | 8:31 AM
Sri Lanka vs Afghanistan, 2nd T20I: ಅಫ್ಘಾನಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 2 ವಿಕೆಟ್ ಕಬಳಿಸುವುದರೊಂದಿಗೆ ವನಿಂದು ಹಸರಂಗ ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಶ್ರೀಲಂಕಾ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ ಅವರ ಸರ್ವಶ್ರೇಷ್ಠ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
1 / 7
ದಂಬುಲ್ಲಾದಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದ ಮೂಲಕ ಶ್ರೀಲಂಕಾ ತಂಡದ ನಾಯಕ ವನಿಂದು ಹಸರಂಗ (Wanindu Hasaranga) ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಲಂಕಾ ಲೆಜೆಂಡ್ ಲಸಿತ್ ಮಾಲಿಂಗ ಅವರ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.
2 / 7
ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ವನಿಂದು ಹಸರಂಗ 19 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಈ ಎರಡು ವಿಕೆಟ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಪೂರೈಸಿದರು. ಈ ಮೂಲಕ ಶ್ರೀಲಂಕಾ ಪರ ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಂಡರು.
3 / 7
ಇದಕ್ಕೂ ಮುನ್ನ ಲಂಕಾ ಪರ ಲಸಿತ್ ಮಾಲಿಂಗ ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಮಾಲಿಂಗಗಿಂತ ವೇಗವಾಗಿ 100 ವಿಕೆಟ್ಗಳನ್ನು ಕಬಳಿಸಿ ವನಿಂದು ಹಸರಂಗ ಹೊಸ ಇತಿಹಾಸ ಬರೆದಿರುವುದು ವಿಶೇಷ. ಅಂದರೆ ಲಸಿತ್ ಮಾಲಿಂಗ ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಪಡೆಯಲು ಬರೋಬ್ಬರಿ 76 ಪಂದ್ಯಗಳನ್ನಾಡಿದ್ದರು.
4 / 7
ಇದೀಗ ಕೇವಲ 63 ಟಿ20 ಪಂದ್ಯಗಳ ಮೂಲಕ 100 ವಿಕೆಟ್ಗಳನ್ನು ಪೂರೈಸಿರುವ ವನಿಂದು ಹಸರಂಗ, ಶ್ರೀಲಂಕಾ ಪರ ಅತೀ ವೇಗವಾಗಿ ನೂರು ವಿಕೆಟ್ಗಳನ್ನು ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿಶ್ವ ಕ್ರಿಕೆಟ್ನಲ್ಲಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ 2ನೇ ಬೌಲರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
5 / 7
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್. ಕೇವಲ 53 ಪಂದ್ಯಗಳಲ್ಲಿ 100 ವಿಕೆಟ್ಗಳನ್ನು ಕಬಳಿಸುವ ಮೂಲಕ ರಶೀದ್ ಖಾನ್ ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಇದೀಗ 63 ಪಂದ್ಯಗಳಲ್ಲಿ ನೂರು ವಿಕೆಟ್ಗಳನ್ನು ಪೂರೈಸಿದ ವನಿಂದು ಹಸರಂಗ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
6 / 7
ಇದೀಗ 63 ಪಂದ್ಯಗಳಲ್ಲಿ ನೂರು ವಿಕೆಟ್ಗಳನ್ನು ಪೂರೈಸಿದ ವನಿಂದು ಹಸರಂಗ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಶ್ರೀಲಂಕಾ ಪರ ಅತೀ ಕಡಿಮೆ ಟಿ20 ಪಂದ್ಯಗಳಲ್ಲಿ 100 ವಿಕೆಟ್ಗಳನ್ನು ಕಬಳಿಸಿದ ದಾಖಲೆಯನ್ನೂ ಕೂಡ ನಿರ್ಮಿಸಿದ್ದಾರೆ.
7 / 7
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 17 ಓವರ್ಗಳಲ್ಲಿ 115 ರನ್ಗಳಿಗೆ ಆಲೌಟ್ ಆಗಿ 72 ರನ್ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.
Published On - 8:30 am, Tue, 20 February 24