- Kannada News Photo gallery Cricket photos WPL 2024 Kanika Ahuja ruled out of WPL with injuries replacement announced
WPL 2024: ಆರ್ಸಿಬಿಗೆ ಆರಂಭದಲ್ಲೇ ಆಘಾತ; ಇಡೀ ಆವೃತ್ತಿಯಿಂದ ಸ್ಟಾರ್ ಪ್ಲೇಯರ್ ಔಟ್..!
WPL 2024: ಇದೇ ಫೆಬ್ರವರಿ 23 ರಿಂದ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಪ್ರಾರಂಭವಾಗುತ್ತಿದೆ. ಈ ಪಂದ್ಯಾವಳಿಗಾಗಿ ಅನೇಕ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ನಡುವೆ ಡಬ್ಲ್ಯುಪಿಎಲ್ನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ.
Updated on: Feb 19, 2024 | 8:48 PM

ಇದೇ ಫೆಬ್ರವರಿ 23 ರಿಂದ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಪ್ರಾರಂಭವಾಗುತ್ತಿದೆ. ಈ ಪಂದ್ಯಾವಳಿಗಾಗಿ ಅನೇಕ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ನಡುವೆ ಡಬ್ಲ್ಯುಪಿಎಲ್ನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ.

ತಂಡದ ಸ್ಟಾರ್ ಆಲ್‌ರೌಂಡರ್ ಕನಿಕಾ ಅಹುಜಾ ಗಾಯದ ಕಾರಣ ಮಹಿಳಾ ಪ್ರೀಮಿಯರ್ ಲೀಗ್ 2024 ರಿಂದ ಹೊರಬಿದ್ದಿದ್ದಾರೆ. ಕೆಳಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್ ಶಕ್ತಿಯಾಗಿದ್ದ ಕನಿಕಾ ಅಲಭ್ಯತೆ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

ಇದೀಗ ಇಂಜುರಿಯಿಂದಾಗಿ ತಂಡದಿಂದ ಹೊರಬಿದ್ದಿರುವ ಕನಿಕಾ ಅಹುಜಾ ಅವರ ಬದಲಿಯಾಗಿ ಮತ್ತೊಬ್ಬರು ದೇಶೀ ಪ್ರತಿಭೆ ಶ್ರದ್ಧಾ ಪೋಕರ್ಕರ್ ಅವರನ್ನು ಮೂಲ ಬೆಲೆ 10 ಲಕ್ಷ ರೂಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿಸಿಕೊಂಡಿದೆ.

ವಾಸ್ತವವಾಗಿ ಮೊದಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಅಷ್ಟು ಉತ್ತಮವಾಗಿರಲಿಲ್ಲ. ತಂಡವು 2023 ರ ಆವೃತ್ತಿಯ ಪಾಯಿಂಟ್ ಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿತ್ತು. ಹೀಗಾಗಿ ಮುಂಬರುವ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಇರಾದೆಯೊಂದಿಗೆ ತಂಡ ಕಣಕ್ಕಿಳಿಯುವ ಗುರಿ ಹೊಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ಎಲಿಸ್ಸಾ ಪೆರ್ರಿ, ಹೀದರ್ ನೈಟ್, ಆಶಾ ಶೋಭನಾ, ದಿಶಾ ಕ್ಯಾಸಟ್, ಇಂದ್ರಾಣಿ ರಾಯ್, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಷ್ತ್, ಶುಭ ಸತೀಶ್, ಸಿಮ್ರಾನ್ ಬಹದ್ನಾ, ಎಸ್ ಮೆಹದ್ನಾ, ಸೋಫಿ ಮೊಲಿನೆಕ್ಸ್, ಶ್ರದ್ಧಾ ಪೋಕರ್ಕರ್.



















