ಈ ಹುಡುಗರಿಗೆ ಆತ್ಮವಿಶ್ವಾಸವಿದೆ: ಟೀಮ್ ಇಂಡಿಯಾ ವೇಗದ ದಾಳಿಯನ್ನು ಶ್ಲಾಘಿಸಿದ ವಾಸಿಂ ಅಕ್ರಮ್

Wasim Akram and Team India Bowlers: ವಿಶ್ವಕಪ್ 2023 ರಲ್ಲಿ ಭಾರತ ತ್ರಿಮೂರ್ತಿಗಳಾದ ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ವಿಕೆಟ್ ಟೇಕರ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ವಾಸಿಂ ಅಕ್ರಮ್ ಭಾರತದ ಬೌಲಿಂಗ್ ತ್ರಿಮೂರ್ತಿಗಳ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

|

Updated on:Nov 10, 2023 | 11:23 AM

ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್ ಪರಾಕ್ರಮಕ್ಕೆ ಮಾತ್ರ ಹೆಸರುವಾಸಿಯಾಗಿದ್ದ ದಿನಗಳು ಕಳೆದುಹೋಗಿವೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಬ್ಯಾಟಿಂಗ್ ಜೊತೆಗೆ ಭಾರತೀಯ ಬೌಲರ್​ಗಳು ಬೆಂಕಿಯ ಚೆಂಡು ಉಗುಳುತ್ತಿದ್ದಾರೆ. ಅಲ್ಪ ಮೊತ್ತಕ್ಕೆ ಎದುರಾಳಿಯನ್ನು ಕಟ್ಟು ಹಾಕುವಲ್ಲಿ ವೇಗಿಗಳು ಯಶಸ್ಸು ಸಾಧಿಸುತ್ತಿದ್ದಾರೆ.

1 / 6
ಭಾರತ ತ್ರಿಮೂರ್ತಿಗಳಾದ ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ವಿಕೆಟ್ ಟೇಕರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಪಂದ್ಯದಲ್ಲಿ ಇವರು ಮಿಂಚುತ್ತಿದ್ದಾರೆ. ಕ್ರಿಕೆಟ್ ಜಗತ್ತೇ ಭಾರತದ ಬೌಲಿಂಗ್ ವಿಭಾಗವನ್ನು ಕೊಂಡಾಡುತ್ತಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ವಾಸಿಂ ಅಕ್ರಮ್ ಭಾರತದ ಬೌಲಿಂಗ್ ತ್ರಿಮೂರ್ತಿಗಳ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

2 / 6
ಎ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ವಾಸಿಂ ಅಕ್ರಮ್, ಭಾರತೀಯ ಬೌಲರ್‌ಗಳು ತಮ್ಮ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಯಶಸ್ಸು ಸಾಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆರಂಭಿಕ ಬೌಲರ್​ಗೆ ಆ ಮಟ್ಟದ ಆತ್ಮವಿಶ್ವಾಸವು ಇರಬೇಕು. ಭಾರತೀಯ ವೇಗಿಗಳು ತುಂಬಾ ವಿಶ್ವಾಸವಿದೆ. ಒಮ್ಮೆ ನೀವು ಅದನ್ನು ಹೊಂದಿದ್ದರೆ ಎಂದಿಗೂ ಕುಗ್ಗುವುದಿಲ್ಲ ಎಂದು ಹೇಳಿದ್ದಾರೆ.

3 / 6
ಶಮಿ ಅವರ ಪ್ರತಿ ಎಸೆತವು ಸೀಮ್‌ ಆಗಿರುತ್ತದೆ. ಅವು ಬೌಲಿಂಗ್ ಮಾಡುವಾಗ ಚೆಂಡು ನಡುಗುವುದಿಲ್ಲ, ನೇರವಾಗಿ ಹೋಗಿ ಪಿಚ್‌ಗೆ ಬಡಿಯುತ್ತದೆ. ಅವರು ಚೆಂಡನ್ನು ಬ್ಯಾಂಗ್ ಮಾಡುವುದಿಲ್ಲ ಎಂದರು. ಅಂತೆಯೆ ಬುಮ್ರಾ ತನ್ನ ಮಣಿಕಟ್ಟಿನಿಂದ ಸ್ವಿಂಗ್ ಮಾಡಿ ಉತ್ತಮ ವೇಗವನ್ನು ಪಡೆಯುತ್ತಾರೆ. ಇವರು 142-145 ಕಿಮೀ ವೇಗದಲ್ಲಿ ಸುಲಭವಾಗಿ ಬೌಲಿಂಗ್ ಮಾಡುತ್ತಾರೆ ಎಂದು ವಾಸಿಂ ಅಕ್ರಮ್ ಹೇಳಿದರು.

ಭಾರತ ತ್ರಿಮೂರ್ತಿಗಳಾದ ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ವಿಕೆಟ್ ಟೇಕರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಪಂದ್ಯದಲ್ಲಿ ಇವರು ಮಿಂಚುತ್ತಿದ್ದಾರೆ. ಕ್ರಿಕೆಟ್ ಜಗತ್ತೇ ಭಾರತದ ಬೌಲಿಂಗ್ ವಿಭಾಗವನ್ನು ಕೊಂಡಾಡುತ್ತಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ವಾಸಿಂ ಅಕ್ರಮ್ ಭಾರತದ ಬೌಲಿಂಗ್ ತ್ರಿಮೂರ್ತಿಗಳ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

4 / 6
ಬುಮ್ರಾ, ಶಮಿ ಮತ್ತು ಸಿರಾಜ್ ನಮ್ಮ ತಂಡದ ಬೌಲರ್​ಗಳಿಗಿಂತ ಮುಂದಿದ್ದಾರೆ. ನಮ್ಮ ದೇಶ ಸೇರಿದಂತೆ ಇತರ ದೇಶಗಳ ಬೌಲರ್​ಗಳಿಗಿಂತ ಭಾರತದ ವೇಗಿಗಳು ಚೆಂಡಿನ ರಫ್ ಸೈಡ್ ಹಾಗೂ ಶೈನಿ ಸೈಡಿನ ಬಗ್ಗೆ ಹೆಚ್ಚುವರಿಯಾಗಿ ಏನನ್ನಾದರೂ ಕಲಿತಿರಬಹುದು. ಭಾರತದ ವೇಗಿಗಳು ಇತರ ತಂಡದ ವೇಗಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರಬಹುದು ಎಂದು ಹೇಳಿದ್ದಾರೆ.

5 / 6
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಸೆಮಿ ಫೈನಲ್ ತಪುಪಿರುವ ಭಾರತ ತಂಡ ಲೀಗ್​ನ ಕೊನೆಯ ಪಂದ್ಯವನ್ನು ಭಾನುವಾರ (ನವೆಂಬರ್ 12) ನೆದರ್ಲೆಂಡ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಇದಾದ ಬಳಿಕ ಮೊದಲ ಸೆಮಿ ಫೈನಲ್​ನಲ್ಲಿ ರೋಹಿತ್ ಪಡೆ ನ್ಯೂಝಿಲೆಂಡ್ ತಂಡವನ್ನು ಎದುರಿಸುವುದು ಬಹುತೇಕ ಖಚಿತವಾಗಿದೆ.

6 / 6

Published On - 11:22 am, Fri, 10 November 23

Follow us