Pakistan Cricket: ಪಾಕಿಸ್ತಾನ ತಂಡದ ನಾಯಕನ ಸ್ಥಾನಕ್ಕೆ ಬಾಬರ್ ಅಝಂ ರಾಜೀನಾಮೆ?

Babar Azam To Resign As Pakistan Captain: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದೆ. ಇದೀಗ ಪಾಕ್ ನಾಯಕ ಬಾಬರ್ ಅಝಂ ಅವರು ಪಾಕಿಸ್ತಾನ ತಂಡದ ನಾಯಕನ ಪಾತ್ರವನ್ನು ತ್ಯಜಿಸುವ ಸಾಧ್ಯತೆಯಿದೆ ಎಂದು ವರದಿಗಳಾಗಿವೆ.

|

Updated on: Nov 11, 2023 | 9:55 AM

ಭಾರತದಲ್ಲಿ ನಡೆಯುತ್ತಿರುವ 2023 ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ತೀವ್ರವಾದ ಮುಜುಗರಕ್ಕೆ ಒಳಗಾಗಿದೆ. ವಿಶ್ವದ ನಂ. 1 ಏಕದಿನ ತಂಡವಾಗಿ ಟೂರ್ನಮೆಂಟ್‌ಗೆ ಕಾಲಿಟ್ಟ, ಮೆನ್ ಇನ್ ಗ್ರೀನ್ ಈಗ ಬಹುತೇಕ ಟೂರ್ನಿಯಿಂದ ಔಟ್ ಆಗಿದೆ.

1 / 8
ಯಾರೂ ಊಹಿಸದ ರೀತಿಯಲ್ಲಿ ಪಾಕ್ ಕಳಪೆ ಪ್ರದರ್ಶನ ತೋರಿದೆ. ಇದೀಗ ವಿಶ್ವಕಪ್​ನಲ್ಲಿ ನೀಡಿದ ಕೆಟ್ಟ ಪ್ರದರ್ಶನದಿಂದ ನಾಯಕ ಬಾಬರ್ ಅಝಂ ಅವರು ಪಾಕಿಸ್ತಾನ ತಂಡದ ನಾಯಕನ ಪಾತ್ರವನ್ನು ತ್ಯಜಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೊರಹೊಮ್ಮಿವೆ.

2 / 8
ಪಾಕಿಸ್ತಾನದ ಸುದ್ದಿ ದೈನಿಕ ದಿ ನ್ಯೂಸ್ ಇಂಟರ್‌ನ್ಯಾಶನಲ್‌ನ ವರದಿಯ ಪ್ರಕಾರ, ಬಾಬರ್ ಅಝಂ ಅವರು ನವೆಂಬರ್ 11 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಅಂತಿಮ ಗುಂಪು ಪಂದ್ಯದ ನಂತರ ಪಿಸಿಬಿಗೆ ಪಾಕಿಸ್ತಾನದ ನಾಯಕತ್ವದ ರಾಜೀನಾಮೆಯನ್ನು ಕಳುಹಿಸಲಿದ್ದಾರೆ.

3 / 8
ಮೂಲಗಳ ಪ್ರಕಾರ, ಬಾಬರ್ ಅಝಂ ಅವರು ವಿಶ್ವಕಪ್​ನಲ್ಲಿ ತಂಡದ ಪ್ರದರ್ಶನದಿಂದ ಮಾತ್ರ ಬೇಸರಗೊಂಡಿಲ್ಲ. ಬದಲಾಗಿ ಪಿಸಿಬಿ ಮತ್ತು ಮಾಜಿ ಕ್ರಿಕೆಟಿಗರ ನಡವಳಿಕೆಯಿಂದ ಬಾಬರ್ ನಿರಾಶೆಗೊಂಡಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಬಾಬರ್ ಸುದ್ದಿಗೋಷ್ಠಿಯಲ್ಲಿ ಕೂಡ ನೋವು ತೋಡಿಕೊಂಡಿದ್ದಾರೆ.

4 / 8
ಕೋಲ್ಕತ್ತಾದಲ್ಲಿ ಅಭ್ಯಾಸ ಅವಧಿಯ ನಡುವೆ ಬಾಬರ್ ಅಝಂ ಅವರು ಮಾಜಿ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಇನ್ನೊಂದು ವರದಿಯ ಪ್ರಕಾರ, ಬಾಬರ್ ಪಾಕಿಸ್ತಾನಕ್ಕೆ ತೆರಳಿದ ನಂತರ ಆತ್ಮೀಯರೊಂದಿಗೆ ಹಾಗೂ ಅವರ ತಂದೆಯೊಂದಿಗೆ ಸಮಾಲೋಚಿಸಿದ ನಂತರ ನಾಯಕತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

5 / 8
ಬಾಬರ್ ಅಝಂ ಸರ್ಕಲ್​ನಲ್ಲಿರುವ ಪ್ರಮುಖ ವ್ಯಕ್ತಿಗಳು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನ ನಾಯಕತ್ವದಿಂದ ಕೆಳಗಿಳಿಯುವಂತೆ ಸಲಹೆ ನೀಡಿದ್ದಾರೆ ಎಂದು ವರದಿ ಹೇಳಿವೆ. ಹೀಗಾಗಿ ಬಾಬರ್ ನಾಯಕತ್ವದಿಂದ ಕೆಳಗಿಳಿಯವುದು ಬಹುತೇಕ ಖಚಿತವಾಗಿದೆ. ಆದರೆ, ಯಾವಾಗ ನೀಡಿತ್ತಾರೆ ಎಂಬುದು ನೋಡಬೇಕು.

6 / 8
2023 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಎರಡು ಬ್ಯಾಕ್-ಟು-ಬ್ಯಾಕ್ ಗೆಲುವುಗಳೊಂದಿಗೆ ಉತ್ತಮವಾಗಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿತು. ಆದರೆ, ನಂತರ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸತತ ನಾಲ್ಕು ಸೋಲುಗಳನ್ನು ಅನುಭವಿಸಿತು.

7 / 8
ಇದು ವಿಶ್ವಕಪ್‌ನಲ್ಲಿ ಇತಿಹಾಸದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ. ಪಾಕಿಸ್ತಾನ ನಂತರ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಜಯಗಳಿಸುವ ಮೂಲಕ ಪಾಕ್ ಲಯಕ್ಕೆ ಮರಳಿತು. ಆದರೆ, ಕಿವೀಸ್ ತಂಡ ಶ್ರೀಲಂಕಾವನ್ನು ಭಾರಿ ಅಂತರದಿಂದ ಸೋಲಿಸಿದ ಪರಿಣಾಮ ಪಾಕಿಸ್ತಾನದ ಸೆಮಿಫೈನಲ್ ಆಸೆ ಬಹುತೇಕ ಕಮರಿ ಹೋಗಿದೆ.

8 / 8
Follow us