IND vs ENG: ಒಂದು ಸ್ಥಾನಕ್ಕಾಗಿ ಮೂವರ ನಡುವೆ ಪೈಪೋಟಿ..!
TV9 Web | Updated By: ಝಾಹಿರ್ ಯೂಸುಫ್
Updated on:
Jan 31, 2024 | 7:34 AM
India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅಲಭ್ಯರಾಗಿದ್ದಾರೆ. ಇದೀಗ ಅವರ ಸ್ಥಾನದಲ್ಲಿ ಟೀಮ್ ಇಂಡಿಯಾ ಪರ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ಪ್ರಶ್ನೆ.
1 / 6
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗಿದೆ. ವಿಶಾಖಪಟ್ಟಣದಲ್ಲಿ ನಡೆಯಲಿರುವ ಈ ಪಂದ್ಯದಿಂದ ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹೊರಗುಳಿದಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ಅವರು ಇದೀಗ ಹೆಚ್ಚಿನ ಚಿಕಿತ್ಸೆಗೆ ಎನ್ಸಿಎ ತೆರಳಿದ್ದಾರೆ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಬದಲಿ ಆಟಗಾರ ಕಣಕ್ಕಿಳಿಯುವುದು ಖಚಿತ.
2 / 6
ಆದರೆ ಇಲ್ಲಿ ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಕಣಕ್ಕಿಳಿಯಲು ಮೂವರು ಆಟಗಾರರ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಮೂವರು ಕೂಡ ಸ್ಪಿನ್ನರ್ಗಳು ಎಂಬುದು ವಿಶೇಷ. ಹೀಗಾಗಿ ಅಂತಿಮವಾಗಿ ಯಾರಿಗೆ ಅವಕಾಶ ಸಿಗಲಿದೆ ಎಂಬುದೇ ಈಗ ಕುತೂಹಲ. ಆ ಮೂವರು ಆಟಗಾರರು ಯಾರೆಂದರೆ...
3 / 6
1- ಕುಲ್ದೀಪ್ ಯಾದವ್: ಟೀಮ್ ಇಂಡಿಯಾ ಪರ 8 ಟೆಸ್ಟ್ ಪಂದ್ಯಗಳನ್ನಾಡಿರುವ ಕುಲ್ದೀಪ್ ಯಾದವ್ ಒಟ್ಟು 34 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೇ ವೇಳೆ 9 ಇನಿಂಗ್ಸ್ ಆಡಿರುವ ಅವರು ಕಲೆಹಾಕಿರುವುದು ಕೇವಲ 94 ರನ್ಗಳು ಮಾತ್ರ. ಇಲ್ಲಿ ಪರಿಪೂರ್ಣ ಸ್ಪಿನ್ನರ್ರೊಬ್ಬರನ್ನು ಕಣಕ್ಕಿಳಿಸಲು ಬಯಸಿದರೆ ಕುಲ್ದೀಪ್ ಯಾದವ್ ಮೊದಲ ಆಯ್ಕೆ ಆಗಿರಲಿದ್ದಾರೆ.
4 / 6
2- ವಾಷಿಂಗ್ಟನ್ ಸುಂದರ್: ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಬದಲಿ ಆಲ್ರೌಂಡರ್ ಆಟಗಾರನಾಗಿ ವಾಷಿಂಗ್ಟನ್ ಸುಂದರ್ ಆಯ್ಕೆಯಾಗಿದ್ದಾರೆ. ಸುಂದರ್ ಇದುವರೆಗೆ ಟೀಮ್ ಇಂಡಿಯಾ 4 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 6 ವಿಕೆಟ್ ಹಾಗೂ 96 ರನ್ಗಳಿಸಿದ್ದಾರೆ. ಅಂದರೆ ಜಡ್ಡು ಸ್ಥಾನದಲ್ಲಿ ಮತ್ತೋರ್ವ ಆಲ್ರೌಂಡರ್ನನ್ನು ಕಣಕ್ಕಿಳಿಸಲು ಮುಂದಾದರೆ ಸುಂದರ್ಗೆ ಅವಕಾಶ ಸಿಗಲಿದೆ.
5 / 6
3- ಸೌರಭ್ ಕುಮಾರ್: ಉತ್ತರ ಪ್ರದೇಶದ ಸೌರಭ್ ಕುಮಾರ್ ಈ ಹಿಂದೊಮ್ಮೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರಿಗೆ ಪಾದಾರ್ಪಣೆ ಮಾಡುವ ಅವಕಾಶ ದೊರೆತಿರಲಿಲ್ಲ. ಇದೀಗ ಮತ್ತೊಮ್ಮೆ ಎಡಗೈ ಸ್ಪಿನ್-ಆಲ್ರೌಂಡರ್ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 68 ಪಂದ್ಯಗಳನ್ನಾಡಿರುವ ಸೌರಭ್ 2061 ರನ್ಗಳನ್ನು ಕಲೆಹಾಕಿದ್ದಾರೆ. ಹಾಗೆಯೇ 290 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಸೌರಭ್ ಕುಮಾರ್ಗೆ ಅವಕಾಶ ಸಿಕ್ಕರೂ ಅಚ್ಚರಿಪಡಬೇಕಿಲ್ಲ.
6 / 6
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಸರ್ಫರಾಝ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್, ಅವೇಶ್ ಖಾನ್.