ಅಶ್ವಿನ್ ದಿಢೀರ್ ನಿವೃತ್ತಿಗೆ ಯಾರು ಕಾರಣ? ಇಲ್ಲಿದೆ ಅಸಲಿ ವಿಷಯ
Ravichandran Ashwin retirement: ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾ ಪರ 287 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 379 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 5833.3 ಓವರ್ಗಳನ್ನು ಎಸೆದಿದ್ದಾರೆ. ಇದರ ನಡುವೆ 947 ಮೇಡನ್ ಓವರ್ ಎಸೆದಿರುವ ಅವರು ಒಟ್ಟು 765 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.
1 / 6
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯೆಯೇ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅದು ಕೂಡ ಗ್ಯಾಲರಿಯಲ್ಲಿ ಕೂತು ತಮ್ಮ ಕೆರಿಯರ್ ಕೊನೆಗೊಳಿಸುವ ಮೂಲಕ ಎಂಬುದೇ ಅಚ್ಚರಿ. ಅಂದರೆ ಐದು ಪಂದ್ಯಗಳ ಈ ಸರಣಿಗೆ ಆಯ್ಕೆಯಾದ ಅಶ್ವಿನ್ ಮೊದಲ ಮ್ಯಾಚ್ನಲ್ಲಿ ಚಾನ್ಸ್ ನೀಡಿರಲಿಲ್ಲ.
2 / 6
ಇನ್ನು ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅಶ್ವಿನ್ ಒಂದು ವಿಕೆಟ್ ಮಾತ್ರ ಕಬಳಿಸಿದ್ದರು. ಹೀಗಾಗಿ ಬ್ರಿಸ್ಬೇನ್ ಟೆಸ್ಟ್ ಪಂದ್ಯದಿಂದ ಹಿರಿಯ ಸ್ಪಿನ್ನರ್ನನ್ನು ಕೈ ಬಿಡಲಾಗಿತ್ತು. ಈ ಪಂದ್ಯದ ವೇಳೆ ಬೆಂಚ್ ಕಾದಿದ್ದ ಅಶ್ವಿನ್ ಮ್ಯಾಚ್ ಮುಗಿಯುತ್ತಿದ್ದಂತೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡು ನಿವೃತ್ತಿ ಘೋಷಿಸಿದರು.
3 / 6
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಉಳಿದಿದ್ದರೂ ಅಶ್ವಿನ್ ದಿಢೀರ್ ನಿವೃತ್ತಿ ಘೋಷಿಸಿರುವುದು ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದೆ. ಅದರಲ್ಲೂ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲವಾ ಎಂಬ ಪ್ರಶ್ನೆಯೊಂದನ್ನು ಹುಟ್ಟು ಹಾಕಿದ್ದಾರೆ.
4 / 6
ಏಕೆಂದರೆ ಈ ಸರಣಿಯ ಮೂಲಕ ಅಶ್ವಿನ್ ನಿವೃತ್ತರಾಗಲು ನಿರ್ಧರಿಸಿದ್ದರೆ, ಸರಣಿ ಆರಂಭಕ್ಕೂ ಮುನ್ನ ಅವರು ಅದನ್ನು ತಿಳಿಸುತ್ತಿದ್ದರು. ಆದರೆ ಸರಣಿಯ ನಡುವೆಯೇ ಅವರು ದಿಢೀರ್ ನಿವೃತ್ತಿ ನೀಡಿರುವುದಕ್ಕೆ ಕಾಣದ ಕೈಗಳ ಒತ್ತಡವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
5 / 6
ಅಂದರೆ ಇಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾದಿಂದ ಇಬ್ಬರಿಗೆ ಗೇಟ್ ಪಾಸ್ ನೀಡುವುದಾಗಿ ಬಿಸಿಸಿಐ ತಿಳಿಸಿದೆ. ಅವರಲ್ಲಿ ಒಬ್ಬರು ಅಶ್ವಿನ್ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ ರವಿಚಂದ್ರನ್ ಅಶ್ವಿನ್ ದಿಢೀರ್ ನಿವೃತ್ತಿ ಘೋಷಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
6 / 6
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಸೂಚನೆ ಮೇರೆಗೆ ಬಿಸಿಸಿಐ ಹಿರಿಯ ಆಟಗಾರರನ್ನು ತಂಡದಿಂದ ತೆಗದು ಹಾಕುವಂತಹ ದೃಢ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂಬ ಮಾತುಗಳು ಈ ಸರಣಿ ಆರಂಭಕ್ಕೂ ಮುನ್ನ ಕೇಳಿಬಂದಿತ್ತು. ಇದೀಗ ಅಶ್ವಿನ್ ಅವರ ದಿಢೀರ್ ನಿವೃತ್ತಿಯು ಈ ಮಾತುಗಳನ್ನು ನಿಜವಾಗಿಸಿದೆ. ಹೀಗಾಗಿಯೇ ಸರಣಿ ಮಧ್ಯದಲ್ಲೇ ರವಿಚಂದ್ರನ್ ಅಶ್ವಿನ್ ತಮ್ಮ ಕೆರಿಯರ್ ಕೊನೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.