- Kannada News Photo gallery Cricket photos Women t20 world cup 2023 final Meg Lanning Can break Ricky Ponting Record most icc trophy win as captain
T20 World Cup Final: ವಿಶ್ವಕಪ್ ಇತಿಹಾಸದಲ್ಲಿ ಯಾರೂ ಮಾಡದ ವಿಶ್ವ ದಾಖಲೆ ಸೃಷ್ಟಿಸುವ ತವಕದಲ್ಲಿ ಆಸೀಸ್ ನಾಯಕಿ!
T20 World Cup Final: ಇಷ್ಟೇ ಅಲ್ಲ, ಈ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಗೆದ್ದರೆ, ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಬಾರಿಸಿದ ಮೊದಲ ನಾಯಕಿ ಎಂಬ ಹೆಗ್ಗಳಿಕೆಗೆ ಮ್ಯಾಗ್ ಲ್ಯಾನಿಂಗ್ ಪಾತ್ರರಾಗಲಿದ್ದಾರೆ.
Updated on:Feb 26, 2023 | 10:38 AM

ಫೆಬ್ರವರಿ 26 ಭಾನುವಾರದಂದು 2023ರ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಕೇಪ್ ಟೌನ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾರೇ ಗೆದ್ದರೂ ಇತಿಹಾಸ ಸೃಷ್ಟಿಯಾಗುವುದು ಖಚಿತ. ಆತಿಥೇಯ ದಕ್ಷಿಣ ಆಫ್ರಿಕಾ ಗೆದ್ದರೆ ಇತಿಹಾಸದಲ್ಲಿ ಮೊದಲ ವಿಶ್ವಕಪ್ ಪ್ರಶಸ್ತಿ ಗೆದ್ದ ದಾಖಲೆ ಬರೆಯಲಿದೆ. ಆಸ್ಟ್ರೇಲಿಯ ಗೆದ್ದರೆ ಆಗಲೂ ದಾಖಲೆ ಸೃಷ್ಟಿಯಾಗಲಿದ್ದು, ಆಸೀಸ್ ನಾಯಕಿ ಮೆಗ್ ಲ್ಯಾನಿಂಗ್ ಈ ದಾಖಲೆ ಮಾಡಲಿದ್ದಾರೆ.

ಕೇಪ್ ಟೌನ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಈ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಟ್ರೋಫಿ ವಶಪಡಿಸಿಕೊಂಡರೆ, ಮೆಗ್ ಲ್ಯಾನಿಂಗ್ ಮಹಿಳಾ ಕ್ರಿಕೆಟ್ ಅಥವಾ ಪುರುಷರ ಕ್ರಿಕೆಟ್ ಆಗಿರಲಿ ವಿಶ್ವದ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕಿಯಾಗಲಿದ್ದಾರೆ.

ಈ ಸಂದರ್ಭದಲ್ಲಿ, ಮೆಗ್ ಲ್ಯಾನಿಂಗ್ ತನ್ನ ದೇಶದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಹೊರತುಪಡಿಸಿ ಬೇರೆ ಯಾರೂ ಮಾಡದ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಪಾಂಟಿಂಗ್ ಮತ್ತು ಲ್ಯಾನಿಂಗ್ ಇದುವರೆಗೆ ಐಸಿಸಿ ಟೂರ್ನಿಗಳಲ್ಲಿ ತಲಾ 4 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಒಂದು ವೇಳೆ ಲ್ಯಾನಿಂಗ್ ಈ ವಿಶ್ವಕಪ್ ಫೈನಲ್ ಗೆದ್ದರೆ, ಇದು ಅವರ ಐದನೇ ಐಸಿಸಿ ಪ್ರಶಸ್ತಿಯಾಗಲಿದೆ. ಲ್ಯಾನಿಂಗ್ ಇದುವರೆಗೆ ಒಂದು ಏಕದಿನ ವಿಶ್ವಕಪ್ (2022) ಮತ್ತು ಮೂರು ಟಿ20 ವಿಶ್ವಕಪ್ (2014, 2018, 2020) ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪಾಂಟಿಂಗ್ ಎರಡು ಏಕದಿನ ವಿಶ್ವಕಪ್ (2003, 2007) ಮತ್ತು ಎರಡು ಚಾಂಪಿಯನ್ಸ್ ಟ್ರೋಫಿ (2006, 2009) ಗೆದ್ದಿದ್ದಾರೆ.

Published On - 10:38 am, Sun, 26 February 23