Updated on: Feb 12, 2023 | 12:56 PM
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾನುವಾರ ಸಂಜೆ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ತಂಡವನ್ನು ಎದುರು ಹಾಕಿಕೊಳ್ಳಲಿದೆ.
ಇನ್ನು ಈ ಉಭಯ ತಂಡಗಳ ಟಿ 20 ಸ್ವರೂಪದ ಮುಖಾಮುಖಿ ಅಂಕಿಅಂಶಗಳನ್ನು ಗಮನಿಸುವುದಾದರೆ, ಇದರಲ್ಲಿ ಭಾರತ ಮೇಲುಗೈ ಸಾಧಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ನಡೆದ 13 ಟಿ20 ಪಂದ್ಯಗಳ ಪೈಕಿ ಭಾರತ 10 ಪಂದ್ಯಗಳನ್ನು ಗೆದ್ದಿದೆ.
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿಭಿನ್ನ ರೂಪದಲ್ಲಿ ಕಾಣುವುದರಿಂದ ಭಾರತಕ್ಕೆ ಈ ಸವಾಲು ಸುಲಭವಲ್ಲ. ಯಾಕೆಂದರೆ ಟಿ20ಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದ ಮೂರು ಗೆಲುವುಗಳಲ್ಲಿ ಎರಡು ಪಂದ್ಯಗಳು ಟಿ20 ವಿಶ್ವಕಪ್‌ನವಾಗಿವೆ.
ಉಭಯ ತಂಡಗಳ ನಡುವಿನ ಕೊನೆಯ ಟಿ20 ಪಂದ್ಯ 2021ರಲ್ಲಿ ಮಹಿಳಾ ಏಷ್ಯಾಕಪ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲೂ ಪಾಕಿಸ್ತಾನ ಗೆದ್ದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 137 ರನ್ ಗಳಿಸಿದ್ದರೆ ಭಾರತ ತಂಡ 124 ರನ್‌ಗಳಿಗೆ ಆಲೌಟ್ ಆಗಿತ್ತು.
ಪಾಕಿಸ್ತಾನ ವಿರುದ್ಧದ ಈ ಮಹತ್ವದ ಪಂದ್ಯದಲ್ಲಿ ಸ್ಮೃತಿ ಮಂಧಾನ ಆಡದಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಗಾಯದ ಸಮಸ್ಯೆಯಿಂದ ಈ ಪಂದ್ಯದಿಂದ ಹೊರಗುಳಿದಿರುವ ಸ್ಮೃತಿ, ಪಾಕಿಸ್ತಾನ ವಿರುದ್ಧ ಆಡಿರುವ 8 ಟಿ20 ಪಂದ್ಯಗಳಲ್ಲಿ 187 ರನ್ ಗಳಿಸಿದ್ದರು.
Published On - 12:56 pm, Sun, 12 February 23