AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravindra Jadeja: ಮೊದಲ ಟೆಸ್ಟ್​ನಲ್ಲಿ ಬೌಲಿಂಗ್​ಗಾಗಿ ಅಶ್ವಿನ್-ಜಡೇಜಾ ಮಧ್ಯೆ ಜಗಳ: ರೋಹಿತ್ ಶರ್ಮಾ ಏನಂದ್ರು ನೋಡಿ

India vs Australia 1st Test: ಭಾರತ ಪರ ಅತಿ ಹೆಚ್ಚು ಓವರ್ ಬೌಲಿಂಗ್ ಮಾಡಿದ್ದೇ ಇವರಿಬ್ಬರು. ಪಂದ್ಯದ ಮಧ್ಯೆ ಅಶ್ವಿನ್-ಜಡೇಜಾ ಬೌಲಿಂಗ್​ಗಾಗಿ ಪೈಪೋಟಿ ನಡೆಸಿದ್ದ ಘಟನೆ ಕೂಡ ನಡೆಯಿತಂತೆ. ಈ ಬಗ್ಗೆ ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಮಾಹಿತಿ ನೀಡಿದ್ದಾರೆ.

TV9 Web
| Edited By: |

Updated on: Feb 12, 2023 | 10:37 AM

Share
ಭಾರೀ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯ ಮುಕ್ತಾಯಗೊಂಡಿದ್ದು ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 132 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಸ್ಪಿನ್ನರ್​ಗಳ ನೆಚ್ಚಿನ ಪಿಚ್ ಆದ ನಾಗ್ಪುರದಲ್ಲಿ ಉಭಯ ತಂಡಗಳ ಬ್ಯಾಟರ್​ಗಳು ರನ್ ಗಳಿಸಲು ಪರದಾಡಿದರು. ಕಾಂಗರೂ ಪಡೆಯಂತು ರವಿಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ದಾಳಿಗೆ ನಲುಗಿ ಹೋಯಿತು.

1 / 8
ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 177 ರನ್​ಗೆ ಆಲೌಟ್ ಆಯಿತು. ಇಲ್ಲಿ ಜಡೇಜಾ ಜಡೇಜಾ 5 ವಿಕೆಟ್ ಪಡೆದರೆ ಅಶ್ವಿನ್ 2 ವಿಕೆಟ್ ಕಿತ್ತರು. ಎರಡನೇ ಇನ್ನಿಂಗ್ಸ್​ನಲ್ಲಿ ಆಸೀಸ್ 91 ರನ್​ಗೆ ಸರ್ವಪತನ ಕಂಡಿತು. ಅಶ್ವಿನ್ 5 ಹಾಗೂ ಜಡೇಜಾ 2 ವಿಕೆಟ್ ಪಡೆದರು.

2 / 8
ಭಾರತ ಪರ ಅತಿ ಹೆಚ್ಚು ಓವರ್ ಬೌಲಿಂಗ್ ಮಾಡಿದ್ದೇ ಇವರಿಬ್ಬರು. ಪಂದ್ಯದ ಮಧ್ಯೆ ಅಶ್ವಿನ್-ಜಡೇಜಾ ಬೌಲಿಂಗ್​ಗಾಗಿ ಪೈಪೋಟಿ ನಡೆಸಿದ್ದ ಘಟನೆ ಕೂಡ ನಡೆಯಿತಂತೆ. ಈ ಬಗ್ಗೆ ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಮಾಹಿತಿ ನೀಡಿದ್ದಾರೆ.

3 / 8
ಪಂದ್ಯದ ಬಳಿಕ ವೀಕ್ಷಕ ವಿವರಣೆಕಾರರಾದ ಇರ್ಫಾನ್ ಪಠಾಣ್ ಬಳಿ ಸಂದರ್ಶನ ನೀಡಿದ ರೋಹಿತ್, ಭಾರತ ಮೊದಲ ಟೆಸ್ಟ್ ಗೆಲ್ಲಲು ಪ್ರಮುಖ ಕಾರಣರಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡಲು ಜಗಳ ನಡೆಸುತ್ತಿದ್ದರು ಎಂದು ಹೇಳಿದ್ದಾರೆ. ಈ ವಿಚಾರ ನಡೆದಿರುವುದು ತಮಾಷೆಯಾಗಿ ಎಂದೂ ಹೇಳಿದ್ದಾರೆ.

4 / 8
ಈ ಪಂದ್ಯದಲ್ಲಿ ಜಡೇಜಾ ಮತ್ತು ಅಶ್ವಿನ್ ಒಂದೊಂದು ದಾಖಲೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ 249 ವಿಕೆಟ್ ಗಳಿಸಿದ್ದರು. ಅವರು ಒಂದು ವಿಕೆಟ್ ಪಡೆದರೆ 250 ವಿಕೆಟ್ ದಾಖಲೆ ಮಾಡುತ್ತಿದ್ದರು. ಈ ದಾಖಲೆ ನಿರ್ಮಿಸಲು ನನಗೆ ಬೌಲಿಂಗ್ ಕೊಡಿ ಎಂದು ಜಡೇಜಾ ನನ್ನ ಬಳಿ ಬಂದು ಕೇಳುತ್ತಿದ್ದರು - ರೋಹಿತ್ ಶರ್ಮಾ.

5 / 8
ಅತ್ತ ಆರ್. ಅಶ್ವಿನ್ ಈ ಇನಿಂಗ್ಸ್​ನಲ್ಲಿ 4 ವಿಕೆಟ್ ಕಿತ್ತಿದ್ದರು. ಅವರಿಗೆ ಮತ್ತೊಂದು 5 ವಿಕೆಟ್​ಗಳ ಗೊಂಚಲು ಪಡೆದ ದಾಖಲೆ ಮಾಡುವ ಹಂಬಲವಿತ್ತು. ಹೀಗಾಗಿ ಅಶ್ವಿನ್ ಕೂಡ ನನಗೆ ಬೌಲಿಂಗ್ ಕೊಡಬೇಕು ಎಂದು ಹೇಳುತ್ತಿದ್ದರು. ಇಬ್ಬರೂ ನನಗೆ ಬಾಲ್ ನೀಡಿ ಎಂದು ಪೈಪೋಟಿ ನಡೆಸುತ್ತಿದ್ದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

6 / 8
ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಟೆಸ್ಟ್ ಸರಣಿ ಆಡುವಾಗ ಮೊದಲ ಪಂದ್ಯದ ಗೆಲುವು ಅತ್ಯಂತ ಮಹತ್ವದ್ದಾಗಿರುತ್ತದೆ. ತಂಡದ ಜಯದಲ್ಲಿ ನಾನು ಸಿಡಿಸಿದ ಶತಕ ಸಹಕಾರಿಯಾಗಿರುವುದು ನನಗೆ ಸಂತಸ ತಂದಿದೆ ಎಂಬುದು ರೋಹಿತ್ ಮಾತು.

7 / 8
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 17 ರಿಂದ ಫೆಬ್ರವರಿ 21 ರವರೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವು ಬೆಳಗ್ಗೆ 09:30 ಕ್ಕೆ ಆರಂಭವಾಗಲಿದೆ. ಒಂಬತ್ತು ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

8 / 8
Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ

80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ

ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ

ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ

8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?

ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ

ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ

ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ

ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ