ವಿಶ್ವಕಪ್​ಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವುದು ಇವರಂತೆ: ಕಪ್ ಕನಸು ಬಿಟ್ಟು ಬಿಡಿ ಎಂದ ನೆಟ್ಟಿಗರು..!

| Updated By: ಝಾಹಿರ್ ಯೂಸುಫ್

Updated on: Jun 20, 2023 | 5:09 PM

World Cup 2023: ಈ ನಾಲ್ವರು ಭಾರತ ತಂಡವನ್ನು ಆಯ್ಕೆ ಮಾಡುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಇದೇ ಸಮಿತಿಯು 2022 ರ ಟಿ20 ವಿಶ್ವಕಪ್​ಗೂ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದ್ದರು.

1 / 11
World Cup 2023: ಏಕದಿನ ವಿಶ್ವಕಪ್​ಗೆ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ಟೂರ್ನಿ ಆಯೋಜನೆಗೆ ಬೇಕಾದ ಸಕಲ ಸಿದ್ಧತೆಯಲ್ಲಿದೆ ಬಿಸಿಸಿಐ. ಇದರ ನಡುವೆ ತವರಿನಲ್ಲಿ ನಡೆಯಲಿರುವ ಈ ವಿಶ್ವಕಪ್​ಗಾಗಿ ಭಾರತ ತಂಡವನ್ನು ಆಯ್ಕೆ ಮಾಡಲಿರುವುದು ಕೇವಲ 4 ಸದಸ್ಯರು ಮಾತ್ರ ಎಂಬ ಮಾಹಿತಿ ಹೊರಬಿದ್ದಿದೆ.

2 / 11
ಅಂದರೆ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ ಖಾಸಗಿ ಚಾನೆಲ್​ವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಖಾಲಿ ಇರುವ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಯನ್ನು ಭರ್ತಿ ಮಾಡಲು ಬಿಸಿಸಿಐ ಯಾವುದೇ ಆಸಕ್ತಿ ಹೊಂದಿಲ್ಲ. ಹೀಗಾಗಿ ನಾಲ್ವರು ಸದಸ್ಯರೇ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದೆ.

3 / 11
ಇತ್ತ ಆಯ್ಕೆ ಸಮಿತಿಯ ಸದ್ಯಸ್ಯರಾಗಿ ಶಿವಸುಂದರ್ ದಾಸ್, ಸುಬ್ರೊತೊ ಬ್ಯಾನರ್ಜಿ, ಸಲೀಲ್ ಅಂಕೋಲ ಹಾಗೂ ಶ್ರೀಧರನ್ ಶರತ್ ಮುಂದುವರೆದಿದ್ದಾರೆ. ಈ ನಾಲ್ವರೇ ಏಕದಿನ ವಿಶ್ವಕಪ್​​ಗೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ.

4 / 11
ಅಚ್ಚರಿ ಎಂದರೆ ಈ ನಾಲ್ವರಲ್ಲಿ ಒಬ್ಬರು ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವಾಡಿಲ್ಲ. ಇನ್ನು ಮೂವರು ಮೂವರು ಸೇರಿ ಭಾರತದ ಪರ ಒಟ್ಟು 30 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ಆಯ್ಕೆ ಸಮಿತಿ ಸದಸ್ಯರ ಅಂತಾರಾಷ್ಟ್ರೀಯ ಪಂದ್ಯಗಳ ಅಂಕಿ ಅಂಶಗಳನ್ನು ಗಮನಿಸುವುದಾದರೆ...

5 / 11
ಶಿವಸುಂದರ್ ದಾಸ್: ಟೀಮ್ ಇಂಡಿಯಾ ಪರ 23 ಟೆಸ್ಟ್ ಹಾಗೂ 4 ಏಕದಿನ ಪಂದ್ಯಗಳನ್ನಾಡಿದ್ದಾರೆ.

6 / 11
ಸುಬ್ರೊತೊ ಬ್ಯಾನರ್ಜಿ: ಭಾರತದ ಪರ 6 ಏಕದಿನ ಹಾಗೂ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದಾರೆ.

7 / 11
ಸಲೀಲ್ ಅಂಕೋಲಾ: ಟೀಮ್ ಇಂಡಿಯಾ ಪರ 1 ಟೆಸ್ಟ್ ಹಾಗೂ 20 ಏಕದಿನ ಪಂದ್ಯಗಳನ್ನಾಡಿದ್ದಾರೆ.

8 / 11
ಶ್ರೀಧರನ್ ಶರತ್: ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವಾಡಿಲ್ಲ. ಇನ್ನು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 139 ಪಂದ್ಯಗಳನ್ನಾಡಿದ್ದಾರೆ.

9 / 11
ಇದೀಗ ಈ ನಾಲ್ವರು ಭಾರತ ತಂಡವನ್ನು ಆಯ್ಕೆ ಮಾಡುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಇದೇ ಸಮಿತಿಯು 2022 ರ ಟಿ20 ವಿಶ್ವಕಪ್​ಗೂ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದ್ದರು. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗಾಗಿ ತಂಡವನ್ನು ಆಯ್ಕೆ ಮಾಡಿದ್ದು ಇದೇ ಸಮಿತಿ.

10 / 11
ಇತ್ತ ಟೀಮ್ ಇಂಡಿಯಾ ಪರ ಯಾವುದೇ ಪ್ರಮುಖ ಟೂರ್ನಿ  ಹಾಗೂ ಕನಿಷ್ಠ 25 ಏಕದಿನ ಪಂದ್ಯಗಳನ್ನೂ ಕೂಡ ಆಡಿರದ ಮಾಜಿ ಆಟಗಾರರನ್ನು ಒಳಗೊಂಡ ಸಮಿತಿಯು ಮಹತ್ವದ ಟೂರ್ನಿಗಾಗಿ ತಂಡವನ್ನು ಆಯ್ಕೆ ಮಾಡುತ್ತಿರುವುದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇವರು ತಂಡವನ್ನು ಆಯ್ಕೆ ಮಾಡಿದ್ರೆ ಕಪ್ ಕನಸು ಬಿಟ್ಟು ಬಿಡಿ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

11 / 11
ಏಕೆಂದರೆ ಟಿ20 ವಿಶ್ವಕಪ್​ಗಾಗಿ ಆಯ್ಕೆ ಮಾಡಲಾದ ತಂಡದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ತಂಡದಲ್ಲಿ ಕಳಪೆ ಫಾರ್ಮ್​ನಲ್ಲಿದ್ದ ಕೆಲ ಆಟಗಾರರಿಗೆ ಮಣೆ ಹಾಕಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಇದೇ ಸಮಿತಿ ಏಕದಿನ ವಿಶ್ವಕಪ್​ಗೂ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ರೆ ಫಲಿತಾಂಶ ಏನಾಗಲಿದೆ ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.