- Kannada News Photo gallery Cricket photos WPL 2024 fan proposed rcb player shreyanka patil during rcb vs gg match
WPL 2024: ಆರ್‌ಸಿಬಿ ಕ್ವೀನ್ ಶ್ರೇಯಾಂಕ ಪಾಟೀಲ್‌ಗೆ ಬಂತು ಮದುವೆ ಪ್ರಪೋಸಲ್
Shreyanka Patil: ಮಂಗಳವಾರ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವಕನೊಬ್ಬ ಶ್ರೇಯಾಂಕ ಪಾಟೀಲ್ ಮುಂದೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಅದರ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Updated on: Feb 28, 2024 | 8:22 PM

ತನ್ನ ಆಲ್‌ರೌಂಡರ್ ಪ್ರದರ್ಶನದಿಂದಲೇ ಆರ್‌ಸಿಬಿ ಮಹಿಳಾ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಕನ್ನಡತಿ ಶ್ರೇಯಾಂಕ ಪಾಟೀಲ್ ಆಟಕ್ಕೆ ಮನಸೋಲದವರಿಲ್ಲ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೂ ಸೈ, ಮಧ್ಯಮ ಓವರ್ಗಳಲ್ಲಿ ಬೌಲಿಂಗ್ನಲ್ಲೂ ಸೈ ಎನಿಸಿಕೊಂಡಿರುವ ಶ್ರೇಯಾಂಕ ಆರ್‌ಸಿಬಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

ಲೀಗ್ನ ಮೊದಲ ಆವೃತ್ತಿಯಲ್ಲಿ ಬೌಲಿಂಗ್ನಲ್ಲಿ 6ವಿಕೆಟ್ ಕಬಳಿಸಿದ್ದ ಶ್ರೇಯಾಂಕ ಬ್ಯಾಟಿಂಗ್ನಲ್ಲೂ ಕಮಾಲ್ ಮಾಡಿ 62 ರನ್ ಕಲೆಹಾಕಿದ್ದರು. ಹೀಗಾಗಿ ಎರಡನೇ ಆವೃತ್ತಿಯಲ್ಲಿ ಶ್ರೇಯಾಂಕರನ್ನು ತಂಡದ ಪ್ರಮುಖ ಸದಸ್ಯರನ್ನಾಗಿ ಆಡಿಸಲಾಗುತ್ತಿದೆ.

ಆದರೆ ಎರಡನೇ ಸೀಸನ್ನಲ್ಲಿ ಇದುವರೆಗೆ ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡದ ಶ್ರೇಯಾಂಕ, ಮೊದಲ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೆ 32 ರನ್ ನೀಡಿದರೆ, ಎರಡನೇ ಪಂದ್ಯದಲ್ಲಿ 1 ಓವರ್ ಬೌಲ್ ಮಾಡಿ 13 ರನ್ ಬಿಟ್ಟುಕೊಟ್ಟರು. ಆಡಿದ ಎರಡೂ ಪಂದ್ಯಗಳಲ್ಲಿ ಅವರಿಗೆ ಯಾವುದೇ ವಿಕೆಟ್ ಸಿಕ್ಕಿಲ್ಲ.

ಆದರೂ ಶ್ರೇಯಾಂಕಗಿರುವ ಬೇಡಿಕೆ ಏನು ಕಡಿಮೆಯಾಗಿಲ್ಲ. ಈ ನಡುವೆ ಶ್ರೇಯಾಂಕ ತನ್ನ ಆಟದ ಹೊರತಾಗಿ ಮೈದಾನದಲ್ಲಿ ನಡೆದ ಅಪರೂಪದ ಘಟನೆಯಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಲೈವ್ ಪಂದ್ಯದ ವೇಳೆ ಶ್ರೇಯಾಂಕಗೆ ಮದುವೆ ಪ್ರಪೋಸಲ್ ಬಂದಿದ್ದು, ಯುವಕನ ಮದುವೆ ನಿವೇದನೆಯ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ವಾಸ್ತವವಾಗಿ ಮಂಗಳವಾರ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವಕನೊಬ್ಬ ಶ್ರೇಯಾಂಕ ಪಾಟೀಲ್ ಮುಂದೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಅದರ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಬೆಂಗಳೂರು ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆರ್‌ಸಿಬಿ ಟೀ ಶರ್ಟ್ ಧರಿಸಿದ್ದ ಅಭಿಮಾನಿಯೊಬ್ಬರು ಪ್ಲೇ ಕಾರ್ಡ್ ಹಿಡಿದು ಶ್ರೇಯಾಂಕಾ ಪಾಟೀಲ್‌ಗೆ ಪ್ರಪೋಸ್ ಮಾಡಿದ್ದಾರೆ. ಅದರಲ್ಲಿ ವಿಲ್ ಯು ಮ್ಯಾರಿ ಮಿ.. ಶ್ರೇಯಾಂಕಾ ಪಾಟೀಲ್ ಎಂದು ಬರೆದುಕೊಂಡಿದ್ದಾನೆ.

ಪ್ಲೇ ಕಾರ್ಡ್ ನಲ್ಲಿ ಬರೆದಿದ್ದ ಮದುವೆ ಪ್ರಸ್ತಾವನೆಯ ವಿಡಿಯೋ ಮೈದಾನದ ಪ್ರೊಜೆಕ್ಟರ್ನಲ್ಲಿ ಭಿತ್ತರವಾಗುತ್ತಿದ್ದಂತೆ ಬೆಂಗಳೂರು ತಂಡದ ಡಗ್ ಔಟ್ನಲ್ಲಿ ಕುಳಿತಿದ್ದ ಇತರೆ ಆಟಗಾರ್ತಿಯರು ನಗಲಾರಂಭಿಸಿದರು. ಇತ್ತ ಯುವಕ ಕೂಡ ತನ್ನ ಪ್ಲೇ ಕಾರ್ಡ್ ಭಿತ್ತರವಾಗಿದ್ದನ್ನು ಕಂಡ ಹರ್ಷ ವ್ಯಕ್ತಪಡಿಸಿದ್ದಾನೆ.

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 7 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿತು. ಉತ್ತರವಾಗಿ ಬೆಂಗಳೂರು 13ನೇ ಓವರ್‌ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ದಾಟಿತು. ಹೀಗಾಗಿ ಬೆಂಗಳೂರು, ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು.



















