AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2026: 2 ಸ್ಥಾನ, 3 ಪಂದ್ಯಗಳು, 4 ತಂಡಗಳು; ಹೀಗಿದೆ ಎಲ್ಲಾ ತಂಡಗಳ ಪ್ಲೇಆಫ್‌ ಲೆಕ್ಕಾಚಾರ

WPL 2026 Playoffs: ಮಹಿಳಾ ಪ್ರೀಮಿಯರ್ ಲೀಗ್ 2026 ರಲ್ಲಿ 17 ಪಂದ್ಯಗಳು ಮುಗಿದಿದ್ದು, ಲೀಗ್ ಹಂತದಲ್ಲಿ ಇನ್ನೂ 3 ಪಂದ್ಯಗಳು ಬಾಕಿ ಇವೆ. ಆರ್‌ಸಿಬಿ ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದ ಏಕೈಕ ತಂಡವಾಗಿದೆ. ಆದರೆ ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಪ್ಲೇಆಫ್ ಪ್ರವೇಶಿಸಲು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಉಳಿದ ಪಂದ್ಯಗಳ ಫಲಿತಾಂಶಗಳು ಅವರ ಭವಿಷ್ಯವನ್ನು ನಿರ್ಧರಿಸಲಿವೆ, ಇದು ಟೂರ್ನಿಗೆ ರೋಚಕತೆ ತುಂಬಿದೆ.

ಪೃಥ್ವಿಶಂಕರ
|

Updated on: Jan 28, 2026 | 7:10 PM

Share
ಮಹಿಳಾ ಪ್ರೀಮಿಯರ್ ಲೀಗ್ 2026 ಟೂರ್ನಮೆಂಟ್‌ನಲ್ಲಿ ಈಗಾಗಲೇ 17 ಪಂದ್ಯಗಳು ಮುಗಿದಿವೆ. ಲೀಗ್ ಹಂತದಲ್ಲಿ ಇನ್ನೂ 3 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಆದಾಗ್ಯೂ ಆರ್‌ಸಿಬಿಯನ್ನು ಹೊರತುಪಡಿಸಿ ಬೇರೆ ಯಾವ ತಂಡವೂ ಪ್ಲೇ ಆಫ್​ಗೆ ಅರ್ಹತೆ ಪಡೆದುಕೊಂಡಿಲ್ಲ. ಇದರರ್ಥ ಇನ್ನು ನಾಲ್ಕು ತಂಡಗಳು ಪ್ಲೇ ಆಫ್​ ರೇಸ್‌ನಲ್ಲಿವೆ. ಹೀಗಾಗಿ ನಾಕೌಟ್ ಹಂತ ತಲುಪ ಬೇಕೆಂದರೆ 4 ತಂಡಗಳು ಉಳಿದ 3 ಪಂದ್ಯಗಳಲ್ಲಿ ಏನು ಮಾಡಬೇಕು ಎಂಬುದನ್ನು ನೋಡುವುದಾದರೆ..

1 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದ್ದು, 10 ಅಂಕ ಮತ್ತು +0.947 ರ ನೆಟ್ ರನ್ ರೇಟ್​​ನೊಂದಿಗೆ ಈಗಾಗಲೇ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಆರ್‌ಸಿಬಿಯ ಕೊನೆಯ ಪಂದ್ಯ ಯುಪಿ ವಾರಿಯರ್ಸ್ ವಿರುದ್ಧ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದರೆ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ಅದರ ನೇರ ಫೈನಲ್ ಪ್ರವೇಶದ ಬಾಗಿಲು ತೆರೆಯಲಿದೆ.

2 / 6
ಗುಜರಾತ್ ಜೈಂಟ್ಸ್ ಇದುವರೆಗೆ ಏಳು ಪಂದ್ಯಗಳನ್ನು ಆಡಿದ್ದು, 4 ಗೆಲುವಿನೊಂದಿಗೆ 8 ಅಂಕ ಮತ್ತು -0.271 ನೆಟ್ ರನ್​ ರೇಟ್ ಹೊಂದಿದೆ. ಗುಜರಾತ್ ಜೈಂಟ್ಸ್ ತನ್ನ ಕೊನೆಯ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯವನ್ನು ಗುಜರಾತ್ ಜೈಂಟ್ಸ್ ಗೆದ್ದರೆ ನಾಕೌಟ್ ಸುತ್ತಿಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಇತರೆ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ.

3 / 6
ಮುಂಬೈ ಇಂಡಿಯನ್ಸ್ ತಂಡವು ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಮುಂಬೈ ತಂಡವು 6 ಅಂಕಗಳನ್ನು ಹೊಂದಿದ್ದು, +0.146 ನಿವ್ವಳ ರನ್ ರೇಟ್ ಹೊಂದಿದೆ. ಮುಂಬೈ ತಂಡದ ಕೊನೆಯ ಪಂದ್ಯ ಗುಜರಾತ್ ಜೈಂಟ್ಸ್ ವಿರುದ್ಧ ನಡೆಯಲಿದ್ದು, ಈ ಪಂದ್ಯವು ಮಾಡು ಇಲ್ಲವೇ ಮಡಿ ಹೋರಾಟವಾಗಿರುತ್ತದೆ. ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಗೆದ್ದರೆ ಸ್ಪರ್ಧೆಯಲ್ಲಿ ಉಳಿಯಲಿದೆ. ಸೋತರೆ ನಾಕೌಟ್ ಸುತ್ತಿನಿಂದ ಹೊರಗುಳಿಯಲಿದೆ.

4 / 6
ಡೆಲ್ಲಿ ಕ್ಯಾಪಿಟಲ್ಸ್‌ನ ಪರಿಸ್ಥಿತಿ ಮುಂಬೈ ಇಂಡಿಯನ್ಸ್‌ನಂತೆಯೇ ಇದೆ. ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ತಂಡದ ಬಳಿ 6 ಅಂಕಗಳಿದ್ದರೂ ಅದರ ನೆಟ್ ರನ್​ ರೇಟ್ ಮುಂಬೈ ಇಂಡಿಯನ್ಸ್‌ಗಿಂತ ಕಡಿಮೆ ಇದೆ. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವುದು ಮಾತ್ರವಲ್ಲದೆ ನೆಟ್ ರನ್​ ರೇಟ್​ ಅನ್ನು ಸುಧಾರಿಸಿಕೊಳ್ಳಬೇಕಾಗುತ್ತದೆ. ಡೆಲ್ಲಿ ರನ್ನ ಕೊನೆಯ ಪಂದ್ಯವನ್ನು ಯುಪಿ ವಾರಿಯರ್ಸ್ ವಿರುದ್ಧ ಆಡಲಿದೆ.

5 / 6
ಈ ಟೂರ್ನಿಯಲ್ಲಿ ಯುಪಿ ವಾರಿಯರ್ಸ್ ತಂಡವು ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಪಂದ್ಯಗಳನ್ನು ಗೆದ್ದು 4 ಪಂದ್ಯಗಳನ್ನು ಸೋತಿದೆ. ಹೀಗಾಗಿ ತಂಡವು 4 ಅಂಕ ಮತ್ತು -0.769 ನೆಟ್ ರನ್ ರೇಟ್ ಹೊಂದಿದೆ. ಯುಪಿ ವಾರಿಯರ್ಸ್ ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದರೆ ರೇಸ್​ನಲ್ಲಿ ಉಳಿಯಲಿದೆ, ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಯುಪಿ ವಾರಿಯರ್ಸ್‌ನ ಕೊನೆಯ ಎರಡು ಪಂದ್ಯಗಳು ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿವೆ.

6 / 6