WPL 2026: RCB ಉಳಿಸಿಕೊಳ್ಳುವ 5 ಆಟಗಾರ್ತಿಯರು ಇವರೇ..!

Updated on: Oct 28, 2025 | 3:24 PM

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನ 4ನೇ ಸೀಸನ್​ಗಾಗಿ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಗರಿಷ್ಠ ಐವರನ್ನು ಉಳಿಸಿ, ಉಳಿದ ಆಟಗಾರ್ತಿಯರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಅದರಂತೆ ಆರ್​ಸಿಬಿ ತಂಡವು ಉಳಿಸಿಕೊಳ್ಳುವ ಆಟಗಾರ್ತಿಯರ ಪಟ್ಟಿ ಈ ಕೆಳಗಿನಂತಿದೆ...

1 / 8
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನ ನಾಲ್ಕನೇ ಸೀಸನ್​ಗೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ರಿಟೈನ್ ಪಟ್ಟಿ ಸಲ್ಲಿಕೆಗೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ನವೆಂಬರ್ 5 ರೊಳಗೆ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. 

2 / 8
ಇಲ್ಲಿ ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಳ್ಳಲು ಐದು ಆಯ್ಕೆಗಳನ್ನು ನೀಡಲಾಗಿದೆ. ಅಂದರೆ ಒಂದು ಫ್ರಾಂಚೈಸಿ ಒಟ್ಟು ಐವರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ರಿಟೈನ್ ಮಾಡಿಕೊಳ್ಳುವ ಮೊದಲ ಆಟಗಾರ್ತಿಗೆ 3.50 ಕೋಟಿ ರೂ, ಎರಡನೇ ಆಟಗಾರ್ತಿಗೆ 2.50 ಕೋಟಿ ರೂ, ಮೂರನೇ ಆಟಗಾರ್ತಿಗೆ 1.75 ಕೋಟಿ ರೂ, ನಾಲ್ಕನೇ ಆಟಗಾರ್ತಿಗೆ 1 ಕೋಟಿ ರೂ. ಹಾಗೂ ಐದನೇ ಆಟಗಾರ್ತಿಗೆ 50 ಲಕ್ಷ ರೂ. ನಿಗದಿ ಮಾಡಲಾಗಿದೆ.

3 / 8
ಅಂದರೆ ಒಟ್ಟು 9.25 ಕೋಟಿ ರೂ. ವ್ಯಯಿಸಿ ಗರಿಷ್ಠ 5 ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು. ಅದರಂತೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು ಐವರು ಪ್ಲೇಯರ್ಸ್​ಗಳನ್ನು ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಅವರೆಂದರೆ...

4 / 8
ಸ್ಮೃತಿ ಮಂಧಾನ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಅವರನ್ನು ಆರ್​ಸಿಬಿ ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳುವುದು ಖಚಿತ. ಏಕೆಂದರೆ ಆರ್​ಸಿಬಿ ಪರ ಈವರೆಗೆ 26 ಪಂದ್ಯಗಳನ್ನಾಡಿರುವ ಅವರು ಒಟ್ಟು 646 ರನ್ ಕಲೆಹಾಕಿದ್ದಾರೆ. ಅಲ್ಲದೆ 2024 ರಲ್ಲಿ ಸ್ಮೃತಿ ನಾಯಕತ್ವದಲ್ಲಿ ಆರ್​ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹೀಗಾಗಿ 3.50 ಕೋಟಿ ರೂ. ನೀಡಿ ಆರ್​ಸಿಬಿ ಸ್ಮೃತಿ ಮಂಧಾನ ಅವರನ್ನು ರಿಟೈನ್ ಮಾಡಿಕೊಳ್ಳುವುದು ಖಚಿತ ಎಂದೇ ಹೇಳಬಹುದು.

5 / 8
ಎಲ್ಲಿಸ್ ಪೆರ್ರಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ದ್ವಿತೀಯ ರಿಟೆನ್ಷನ್ ಆಗಿ ಆಸ್ಟ್ರೇಲಿಯನ್ ಆಲ್​ರೌಂಡರ್ ಎಲ್ಲಿಸ್ ಪೆರ್ರಿ ಅವರನ್ನು ಆಯ್ಕೆ ಮಾಡಲಿದೆ. 2024 ರಲ್ಲಿ ಆರ್​ಸಿಬಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪೆರ್ರಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಆರ್​ಸಿಬಿ ಪರ 25 ಪಂದ್ಯಗಳನ್ನಾಡಿರುವ ಎಲ್ಲಿಸ್ 972 ರನ್ ಕಲೆಹಾಕಿದ್ದಲ್ಲದೇ, 14 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೀಗಾಗಿ ಆರ್​ಸಿಬಿ ತಂಡದ ದ್ವಿತೀಯ ರಿಟೈನ್ ಎಲ್ಲಿಸ್ ಪೆರ್ರಿ ಆಗಿರಲಿದ್ದಾರೆ.

6 / 8
ರಿಚಾ ಘೋಷ್: ಆರ್​ಸಿಬಿ ತಂಡವು ಮೂರನೇ ರಿಟೈನ್ ಆಗಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅವರನ್ನು ಆಯ್ಕೆ ಮಾಡಲಿದೆ. ಕಳೆದ ಮೂರು ಸೀಸನ್​ಗಳಿಂದ ಆರ್​ಸಿಬಿ ಪರ ಕಣಕ್ಕಿಳಿಯುತ್ತಿರುವ ರಿಚಾ ಘೋಷ್ ಈವರೆಗೆ 26 ಪಂದ್ಯಗಳನ್ನಾಡಿದ್ದು, ಈ ವೇಳೆ 625 ರನ್​ ಕಲೆಹಾಕಿದ್ದಾರೆ. ಹೀಗಾಗಿ ಯುವ ವಿಕೆಟ್​ ಕೀಪರ್​ನನ್ನು ಆರ್​ಸಿಬಿ ಕೈ ಬಿಡುವ ಸಾಧ್ಯತೆಯಿಲ್ಲ.

7 / 8
ರೇಣುಕಾ ಸಿಂಗ್ ಠಾಕೂರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿ ರೇಣುಕಾ ಠಾಕೂರ್ ಅವರನ್ನು ಸಹ ಈ ಬಾರಿ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ. ತಂಡದ ಪ್ರಮುಖ ಬೌಲರ್ ಆಗಿರುವ ಕಾರಣ ಅವರನ್ನು ಮುಂದಿನ ಸೀಸನ್​ಗೂ ರಿಟೈನ್ ಮಾಡಿಕೊಳ್ಳಬಹುದು.

8 / 8
ಶ್ರೇಯಾಂಕಾ ಪಾಟೀಲ್: ಕರುನಾಡ ಕುವರಿ ಶ್ರೇಯಾಂಕಾ ಪಾಟೀಲ್ ಅವರನ್ನು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ 2024 ರಲ್ಲಿ ಆರ್​ಸಿಬಿ ಕಪ್ ಎತ್ತಿ ಹಿಡಿಯುವಲ್ಲಿ ಶ್ರೇಯಾಂಕಾ ಅವರ ಕೊಡುಗೆ ಕೂಡ ಇದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ರಿಟೆನ್ಷನ್ ಲಿಸ್ಟ್​ನಲ್ಲಿ ಶ್ರೇಯಾಂಕಾ ಪಾಟೀಲ್ ಹೆಸರನ್ನು ಸಹ ಸೇರ್ಪಡೆಗೊಳಿಸಲಿದೆ.